ಪಬ್ಲಿಕ್ ಅಲರ್ಟ್
ಕೋಲಾರ: ನಗರದಲ್ಲಿ ಒಂದು ಕಾಲದಲ್ಲಿ ಪ್ರತಿಷ್ಠಿತ ಹೆಸರು ಪಡೆದಿದ್ದ ಮುನಿಸಿಪಲ್ ಹೈಸ್ಕೂಲ್ ನಲ್ಲಿ ಓದಿದ 1973ರ ಎಸ್ ಎಸ್ ಎಲ್ ಸಿ ಬ್ಯಾಚ್ ನ ಸ್ನೇಹಿತರು ಕಳೆದ 52 ವರ್ಷಗಳ ನಂತರ ಭಾನುವಾರ ಭೇಟಿಯಾಗಿ ಸಂಭ್ರಮಿಸಿದರು.
ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆ ತೇರ್ಗಡೆ ಆದ ಮೇಲೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಊರುಗಳಿಗೆ ಹಾಗೂ ಕಾಲೇಜುಗಳಿಗೆ ತೆರಳಿ,ವಿದ್ಯಾಭ್ಯಾಸ ಮುಗಿಸಿ ವಿವಿಧ ಕೆಲಸಗಳಿಗೆ ಸೇರಿ ನಿವೃತ್ತ ಜೀವನ ನಡೆಸುತ್ತಿದ್ದರು. ಈಗಿನಂತೆ ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಕಾರಣ ಒಬ್ಬರನ್ನು ಒಬ್ಬರು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಕಡೆಗೂ ಕೆಲವು ಸ್ನೇಹಿತರ ಸತತ ಪ್ರಯತ್ನ ಪರಿಶ್ರಮದಿಂದ ಕೇವಲ ಈ ವರ್ಷ 28 ಜನ ಹಳೆಯ ಸ್ನೇಹಿತರ ಸಂಪರ್ಕ ಸಾಧಿಸಲು ಸಾಧ್ಯವಾಗಿ ಒಂದು ಕಡೆ ಸೇರಿ ಸುಖಸಂತೋಷ, ದುಃಖ ಹಂಚಿಕೊಳ್ಳಲು ಸಾಧ್ಯವಾಗಿದ್ದು ವಿಶೇಷ ಸಂದರ್ಭವಾಗಿತ್ತು.
ನಿವೃತ್ತ ಅರಣ್ಯ ಅಧಿಕಾರಿ ಪುಟ್ಟಣ್ಣ ಹಾಗೂ ಸತೀಶ್ ಮತ್ತು ವೆಂಕಟೇಶ್ ಅಯ್ಯರ್ ರವರುಗಳ ಪ್ರಯತ್ನದಿಂದ ಕೋಲಾರದ ಅರಣ್ಯ ಅತಿಥಿ ಗೃಹದಲ್ಲಿ ಎಲ್ಲಾ ಹಳೆಯ ಸ್ನೇಹಿತರು ಸೇರಿದ್ದಲ್ಲದೆ ನಗರ ದೇವತೆ ಕೋಲಾರಮ್ಮನಿಗೆ ಪೂಜೆ ಸಲ್ಲಿಸಿ ಜೊತೆಗೆ ಊಟ ಮಾಡುವ ಮೂಲಕ ಸಂಭ್ರಮಿಸಿದರು. ಇದೇ ಸಂಧರ್ಭದಲ್ಲಿ ಸಂತೋಷದೊಂದಿಗೆ ನಮ್ಮನ್ನು ಅಗಲಿದ ಗುರುಗಳಿಗೂ ಹಾಗೂ ಸ್ನೇಹಿತರಿಗೆ ನುಡಿ ನಮನವನ್ನು ಮೌನ ಆಚರಣೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.
52 ವರ್ಷಗಳ ಬಳಿಕ ಸ್ನೇಹಿತರ ಸಮಾಗಮ, ಸಂಭ್ರಮ
Leave a Comment
Leave a Comment
