ಪಬ್ಲಿಕ್ ಅಲರ್ಟ್
ಮೈಸೂರು: ದಸರಾ ಮಹೋತ್ಸವ ಸಂಭ್ರಮಕ್ಕೆ ಎಲ್ಲಾ ತಯಾರಿಗಳೂ ಭರದಿಂದ ಸಾಗಿದ್ದು, ಮೊದಲ ಕಾರ್ಯಕ್ರಮವಾದ ‘ಯುವ ಸಂಭ್ರಮ’ದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೆಜ್ಜೆ ಹಾಕುವ ಯುವ ಸಮೂಹ ಆಹ್ವಾನಿಸುವ ದಸರಾ ಉಪಸಮಿತಿಯ ಯುವ ಸಂಭ್ರಮಕ್ಕೆ ಈ ದಿನ ಸಂಭ್ರಮದ ಚಾಲನೆ ದೊರೆಯಲಿದೆ.
ಯುವ ಸಂಭ್ರಮದ ವೇದಿಕೆಯಲ್ಲಿ ಹೆಜ್ಜೆ ಹಾಕಲಿರುವ ಐದು ಕಾಲೇಜಿನ ವಿದ್ಯಾರ್ಥಿಗಳ ನೃತ್ಯದ ತುಣಿಕಿನ ನಟ ಯುವ ರಾಜಕುಮಾರ್ ಹಾಗೂ ಯುವ ಸಂಭ್ರಮ ಉಪ ಸಮಿತಿಯ ಪದಾಧಿಕಾರಿಗಳು ಮತ್ತು ನಿರೂಪಣೆ ಮಾಡುವ ಕಲಾವಿದರು ಕಾಣಿಸಿಕೊಳ್ಳುವರು. ಯುವ ದಸರಾ ಉಪ ಸಮಿತಿಯ ಕಾರ್ಯಾಧ್ಯಕ್ಷ ಆಶಪ್ಪ ಮಾತನಾಡಿ, ದಸರಾ ಮಹೋತ್ಸವದ ಅಂಗವಾಗಿ ನಡೆುುಂವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕ ೃತಿಕ ಹಬ್ಬವಾದ ‘ಯುವ ಸಂಭ್ರಮ’ ಸೆ.೧೦ರಿಂದ ೧೭ರವರೆಗೆ ಆರಂಭಗೊಳ್ಳಲಿದ್ದು, ೫೦೦ ಕಾಲೇಜಿನ ೨೦ ಸಾವಿರ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಪ್ರಕಾರಗಳ ಮೂಲಕ ರಂಜಿಸಲಿದ್ದಾರೆ ಎಂದರು.




ಪ್ರತಿ ವರ್ಷದಂತೆ ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಆೋಂಜಿಸಲಾಗಿದ್ದು, ರಾಜ್ಯದ ಜಾನಪದ ನೃತ್ಯಗಳು, ಜಿಲ್ಲಾ ಕೇಂದ್ರಿತ ಪ್ರಸಿದ್ಧ ನೃತ್ಯ ಪ್ರಕಾರಗಳು, ಕನ್ನಡ ಸಿನಿವಾ ಆಧಾರಿತ ಆಧುನಿಕ ನೃತ್ಯಗಳು, ಸಾಹಿತ್ಯ, ದೇಶಭಕ್ತಿ, ಮಹಿಳಾ ಸಬಲೀಕರಣ, ಪರಿಸರ- ಅರಣ್ಯ, ಆಡಳಿತ, ಸಾಮಾಜಿಕ ನ್ಯಾಯ, ವಿಜ್ಞಾನ- ತಂತ್ರಜ್ಞಾನ, ಇತಿಹಾಸ-ಪುರಾಣ, ಅಂಗವಿಕಲರ ಯಶೋಗಾಥೆಗಳು, ಶಿಕ್ಷಣ, ಕ್ರೀಡೆ, ಜನಕೇಂದ್ರಿತ, ಆರೋಗ್ಯ ಹೀಗೆ ನಿರ್ದಿಷ್ಟ ‘ಥೀಮ್’ ಆಧಾರಿತ ನೃತ್ಯರೂಪಕಗಳನ್ನು ವಿದ್ಯಾರ್ಥಿಗಳು ಕಟ್ಟಿಕೊಡಲಿದ್ದಾರೆ ಎಂದರು.
ಯುವ ಸಂಭ್ರಮ ಉದ್ಘಾಟನಾ ಕಾರ್ಯಕ್ರಮ ಸೆ.೧೦ರ ಸಂಜೆ ನಡೆಯಲಿದ್ದು, ಅತಿಥಿಗಳಾಗಿ ನಟ ಯುವ ರಾಜ್‌ಕುಮಾರ್ ಮತ್ತು ನಟಿ ಅಮೃತಾ ಅ್ಂಯುಂಗಾರ್ ಪಾಲ್ಗೊಳ್ಳುವರು ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು ಎಂದರು. ಪ್ರತಿ ಸಂಜೆ ೪ರಿಂದ ರಾತ್ರಿ ೧೦.೩೦ರವರೆಗೆ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಮುಂದುವರಿಯಲಿದೆ. ಆ್ಂದು ತಂಡಗಳಿಗೆ ನವರಾತ್ರಿ ಸಂದರ್ಭದಲ್ಲಿ ನಡೆುುಂವ ‘ಯುವ ದಸರಾ’ ವೇದಿಕೆಯಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಹ ಕಾರ್ಯಾಧ್ಯಕ್ಷ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿ.ಶಿವಕುಮಾರ್, ಸಹ ಕಾರ್ಯದರ್ಶಿ ರವಿಕುಮಾರ್, ನಗರಪಾಲಿಕೆ ವಲಯ-೬ರ ಕಚೇರಿಯ ಆಯುಕ್ತರೂ ಆದ ಸ್ವಮನ್ವಯಾಧಿಕಾರಿ ಎಂ.ಎಸ್.ಪ್ರತಿಭಾ, ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಆರ್.ನಿಂಗರಾಜ್ ಇನ್ನಿತರರು ಉಪಸ್ಥಿತರಿರುವರು.
