ಪಬ್ಲಿಕ್ ಅಲರ್ಟ್
ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ವ್ಯಾಪಕ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತೀವ್ರ ಕಟ್ಟೆಚ್ಚರ ವಹಿಸಿ ಎಂದು ರಾಜ್ಯ ಪೋಲಿಸ್ ಮಹಾ ನಿರ್ಧೇಶಕ ಡಾ. ಎಂ.ಎ. ಸಲೀಂ ಇಂದಿಲ್ಲಿ ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೈಸೂರಿನ ನಜರ್‌ಬಾದ್‌ನಲ್ಲಿರುವ ನಗರ ಪೋಲಿಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಇಂದು ೨೦೨೫ ರ ದಸರಾ ಮಹೋತ್ಸವದ ಭದ್ರತೆಗೆ ಕೈಗೊಂಡಿರುವ ಸಿದ್ಧತೆ ಕುರಿತಂತೆ ಅವರು ಎಸಿಪಿ ಹಾಗೂ ಮೇಲ್ಪಟ್ಟ ಪೋಲಿಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ, ದಸರ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ವಿವಾದ ಹಾಗೂ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಸಂಬAಧ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದ ಪ್ರಕ್ಷÄಬ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ೨೦೨೫ ರ ಸೆಪ್ಟೆಂಬರ್ ೨೨ ರಿಂದ ಅಕ್ಟೋಬರ್ ೨ ರವರೆಗೆ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಅತಿ ಹೆಚ್ಚಿನ ಸಂಖ್ಯೆ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂಧಿಯನ್ನು ಬಂದೋಬಸ್ತ್ಗಾಗಿ ನಿಯೋಜನೆ ಮಾಡಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಕಟ್ಟೆಚ್ಚರ ವಹಿಸುವಂತೆಯೂ ಡಾ. ಎಂ.ಎ. ಸಲೀಂ ನಿರ್ದೇಶನ ನೀಡಿದರು.
ಚಾಮುಂಡಿ ಬೆಟ್ಟದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಾನದಲ್ಲಿ ಸೆ. ೨೨ ರಂದು ನಡೆಯಲಿರುವ ದಸರಾ ಮಹೋತ್ಸವದ ಉದ್ಘಾಟನೆ ವೇಳೆ ತೀವ್ರ ವಿರೋಧ ಅಥವಾ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಅಲ್ಲಿ ಎಸ್ಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕ ಪೋಲಿಸ್ ಸಿಬ್ಬಂಧಿಗಳನ್ನು ಸಶಸ್ತç ಪೋಲಿಸರೊಂದಿಗೆ ನಿಯೋಜಿಸಿ ಕಟ್ಟೆಚ್ಚರ ವಹಿಸಬೇಕು. ದಸರಾ ಉದ್ಘಾಟಕರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಬಂದು ಕಾರ್ಯಕ್ರಮ ಮುಗಿಸಿ ಸುರಕ್ಷಿತವಾಗಿ ತೆರಳುವವರೆಗೆ ಎಚ್ಚರದಿಂದಿರಲೂ ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ರೀತಿ ಅ. ೨ ರಂದು ನಡೆಯಲಿರುವ ವಿಶ್ವವಿಖ್ಯಾತ ವಿಜಯದಶಮಿ ಮೆರವಣಿಗೆ (ಜಂಬೂ ಸವಾರಿ) ವೇಳೆ ಅರಮನೆ ಆವರಣ, ಸುತ್ತಲಿನ ಪ್ರವೇಶದ್ವಾರಗಳು, ಮೆರವಣಿಗೆ ಸಾಗುವ ರಾಜಮಾರ್ಗ ಹಾಗೂ ಪಂಜಿನ ಕವಾಯಿತು ಪ್ರದರ್ಶನ ನಡೆಯಲಿರುವ ಬನ್ನಿಮಂಟಪದ ಟಾರ್ಚಲೈಟ್ ಪೆರೇಡ್ ಮೈದಾನದಲ್ಲೂ ಕಟ್ಟೆಚ್ಚರ ವಹಿಸಬೇಕು, ಯಾವುದೇ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು ಎಂದ ಅವರು ನಾಡಹಬ್ಬಕ್ಕೆ ಲಕ್ಷಾಂತರ ಮಂದಿ ಸೇರುವುದರಿಂದ ವಿಜಯದಶಮಿ ಮೆರವಣಿಗೆ, ಟಾರ್ಚಲೈಟ್ ಪೆರೇಡ್ ಮೈದಾನ, ಚಾಮುಂಡಿಬೆಟ್ಟ, ಯುವ ದಸರಾ, ಯುವ ಸಂಭ್ರಮ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ವೈಮಾನಿಕ ಪ್ರದರ್ಶನದಂತಹ ಕಾರ್ಯಕ್ರಮ ನಡೆಯುವ ಸ್ಥಳದಲ್ಲೂ ಮೆಟಲ್ ಡೋರ್ ಡಿಟೆಕ್ಟರ್ ಅಳವಡಿಸಿ, ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಪ್ರವೇಶಾವಕಾಶ ನೀಡಲು ಮೈಸೂರು ನಗರ ಪೋಲಿಸ್ ಘಟಕವು ಜಿಲ್ಲಾಡಳಿತದೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದು, ದಸರಾ ಬಂದೋಬಸ್ತ್ ಯೋಜನೆಯನ್ನು ಅಂತಿಮಗೊಳಿಸಬೇಕು ಎಂದರು.
ಡಿಸಿಪಿಗಳಾದ ಆರ್.ಎನ್. ಬಿಂದುಮಣಿ, ಕೆ.ಎಸ್. ಸುಂದರ್ ರಾಜ್, ಸಿದ್ಧನಗೌಡ ಪಾಟೀಲ್, ಮೌಂಟೆಂಡ್ ಪೋಲಿಸ್ ಕಮಾಂಡೆAಟ್ ಎ. ಮಾರುತಿ, ನಗರ ಸಂಚಾರ ವಿಭಾಗದ ಎಂ. ಶಿವಶಂಕರ್, ಅರಮನೆ ಭದ್ರತಾ ವಿಭಾಗದ ಚಂದ್ರಶೇಖರ್ ಸೇರಿದದಂತೆ ಎಲ್ಲಾ ಉಪ ವಿಭಾಗಗಳ ಎಸಿಪಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಇದಕ್ಕೂ ಮೊದಲು ಡಾ. ಸಲೀಂರವರು ಬೆಳಿಗ್ಗೆ ೯ ಗಂಟೆಗೆ ಮೈಸೂರಿಗೆ ಆಗಮಿಸುತ್ತಿದಂತೆಯೇ ಎಸ್ಪಿ ಕಛೇರಿ ಎದುರಿನ ಡಿಜಿ ಸೂಟ್‌ನಲ್ಲಿ ಡಿಐಜಿ ಡಾ. ಭೋರಲಿಂಗಯ್ಯ, ನಗರ ಪೋಲಿಸ್ ಕಮೀಷ್ನ್ರ್ ಸೀಮಾ ಲಾಟ್ಕರ್ ಹಾಗೂ ಎಸ್ಪಿ ಎನ್. ವಿಷ್ಣುವರ್ಧನ ಅವರು ಪುಷ್ಪಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ನಂತರ ಪೋಲಿಸ್ ಕಮೀಷ್ನ್ರ್ ಕಛೇರಿಯಲ್ಲಿ ಪೋಲಿಸ್ ಗೌರವ ವಂದನೆ ಸಲ್ಲಿಸಲಾಯಿತು. ಮಧ್ಯಾಹ್ನದ ನಂತರ ಡಾ. ಸಲೀಂ ರವರು ದಕ್ಷಿಣ ವಲಯ ಡಿಐಜಿಪಿ ಕಛೇರಿಗೂ ತೆರಳಿ ಸಭೆ ನಡೆಸಿದ ಬಳಿಕ ಸಂಜೆ ಬೆಂಗಳೂರಿಗೆ ಹಿಂತಿರುಗಿದರು.
