ಸೆ.೨೦ಕ್ಕೆ ಸ್ವಚ್ಛ ಮೈಸೂರು ಜಾಥಾ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಾಡಹಬ್ಬ ದಸರಾ ಸಮೀಪಿಸುತ್ತಿದ್ದು, ಈ ವೇಳೆ ನಗರದಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಸಾಧ್ಯತೆ ಇರುತ್ತದೆ. ಇದು ಪಾರಂಪರಿಕ ನಗರದ ಸ್ವಚ್ಛತೆಗೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ರೋಟರಿ ಸಂಸ್ಥೆಯ ಚಾಮುಂಡಿ ವಲಯದ ವತಿಯಿಂದ ಸೆ.೨೦ ರಂದು ನಗರದಲ್ಲಿ ನಮ್ಮ  ಮೈಸೂರು ಸ್ವಚ್ಛ ಮೈಸೂರು ವಾಹನ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ರೋರ‍್ಯಾಕ್ಟ್ ಸದಸ್ಯ ವೆಲ್ಕಿನ್ ಶೆಲೆಫ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅಂದು ಬೆಳಗ್ಗೆ ೮ಕ್ಕೆ ಮುಡಾ ಬಳಿಯ ಐಡಿಯಲ್ ಜಾವಾ ರೋಟರಿ ಶಾಲೆ ಬಳಿ ಜಾಥಾಕ್ಕೆ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ಚಾಲನೆ ನೀಡಲಿದ್ದಾರೆ. ಇದರಲ್ಲಿ ದ್ವಿಚಕ್ರ ಹಾಗೂ ಇನ್ನಿತರ ಸುಮಾರು ೧೫೦ ವಾಹನಗಳು ಪಾಲ್ಗೊಳ್ಳಲಿವೆ. ಮೈಸೂರು ಲೇಡೀಸ್ ಬೈರ‍್ಸ್ ತಂಡದ ಹೆಣ್ಣು ಮಕ್ಕಳು ಸಹಾ ಭಾಗವಹಿಸಲಿದ್ದಾರೆಂದರು. ಇನ್ನಿತರ ಪದಾಧಿಕಾರಿಗಳಾದ ಚರಿತಾಗೌಡ, ಶಕುಂತಲಾ ಎಲಿಜಬೆತ್, ಆರ್.ಯಶ್ವಂತ್ ಹಾಗೂ ಗೌತಮ್ ಹಾಜರಿದ್ದರು.

Share This Article
Leave a Comment