ಪಬ್ಲಿಕ್ ಅಲರ್ಟ್
ಮೈಸೂರು: ಮೂತ್ರ ರೋಗ ಶಾಸ್ತ್ರ ಶಸ್ತ್ರ ಚಿಕಿತ್ಸಕರ ಸಂಘದ ಆಶ್ರಯದಲ್ಲಿ ಅ. ೩೧ ರಿಂದ ನ. ೨ ರವರೆಗೆ ಹೆಬ್ಬಾಳದ ನಾರ್ತ್ ಅವೆನ್ಯೂ ಸಭಾಂಗಣದಲ್ಲಿ ರಾಜ್ಯ ಮೂತ್ರ ಶಾಸ್ತ್ರ ಶಸ್ತ್ರ ಚಿಕಿತ್ಸಕರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಡಾ.ಎಂ.ಎಸ್. ರಂಗನಾಥ್ ತಿಳಿಸಿದರು.
ನಗರದಲ್ಲಿ ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿ ಮೊದಲ ದಿನ ಬೆಳಗ್ಗೆ ೮ಕ್ಕೆ ಪೂರ್ವ ಸಮ್ಮೇಳನದ ಅಂಗವಾಗಿ ನಗರದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೆಹಲಿ, ಹೈದರಾಬಾದ್, ಬೆಂಗಳೂರು ಮೊದಲಾದ ಕಡೆಗಳಿಂದ ಆಗಮಿಸುವ ೬ ಮಂದಿ ತಜ್ಞ ವೈದ್ಯರು ಈಗಾಗಲೇ ಆಯ್ಕೆ ಮಾಡಿದ ಒಟ್ಟು ೧೫ ಮಂದಿ ಮೂತ್ರರೋಗ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಿದ್ದಾರೆ. ಇದನ್ನು ಲೈವ್ ಆಗಿ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಪ್ರತಿನಿಧಿಗಳಿಗೆ ಪ್ರದರ್ಶಿಸಿ, ಅವರ ಅನುಮಾನಗಳನ್ನು ಬಗೆಹರಿಸುವ ಕೆಲಸವನ್ನ ತಜ್ಞರು ಮಾಡಲಿದ್ದಾರೆಂದರು.
ನ. ೧ ರಂದು ಬೆಳಗ್ಗೆ ೯ ರಿಂದ ಸಂಜೆ ೬, ನ. ೨ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೨ ರವರೆಗೆ ಸಮ್ಮೇಳನ ನಡೆಯಲಿದೆ. ಸುಮಾರು ೩೫೦ ಮಂದಿ ಪ್ರತಿನಿಧಿಗಳು ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ತಜ್ಞ ವೈದ್ಯರಾದ ಡಾ. ಕಿರಣ್, ಡಾ. ಸಚಿನ್ ಧಾರವಾಡಕರ್, ಡಾ.ಜಿ.ಎಸ್. ದಯಾನಂದ್, ಡಾ. ಪ್ರಸಾದ್ ಇದ್ದರು.
