ಅ.೩೧ ರಿಂದ ಮೈಸೂರು ರಂಗೋತ್ಸವ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಮುದಾಯ ಕರ್ನಾಟಕ ರಂಗ ತಂಡದ ೫೦ ನೇ ವರ್ಷದ ಸಂಭ್ರಮ ಅಂಗವಾಗಿ ಅ.೩೧ ರಿಂದ ನ.೨ರವರೆಗೆ ರಂಗಾಯಣದ ಕಿರು ರಂಗಮಂದಿರದಲ್ಲಿ ಸಮುದಾಯ ಮೈಸೂರು ರಂಗೋತ್ಸವ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ಜನಾರ್ಧನ್ (ಜನ್ನಿ) ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅ. ೩೧ ರ ಸಮಜೆ ೫ಕ್ಕೆ ಜನಪದ- ಜನಪರ ಗಿತೆ ಗಾಯನ, ಸಂಜೆ ೬ಕೆಕ ಪ್ರೊ.ಕೆ. ಮರುಳಸಿದ್ದಪ್ಪ ಅವರಿಂದ ಉದ್ಘಾಟನೆ ನೆರವೇರಲಿದೆ. ಪ್ರೊ.ಎಸ್.ಜಿ. ಸಿದ್ದರಾಮಯ್ಯ ಇನ್ನಿತರರು ವೇದಿಕೆಯಲ್ಲಿರುವರು. ತಾವು ಅಧ್ಯಕ್ಷತೆ ವಹಿಸುವುದಾಗಿ ತಿಳಿಸಿದರು. ನ.೧ರ ಸಂ.೫ಕ್ಕೆ ಜನಪರ ಗೀತ ಗಾಯನ, ಸಂಜೆ ೬ಕ್ಕೆ ಕ್ರಿ ಮಾಧ್ಯಮ ಹೊರ ತಂದಿರುವ ನಿರಂಜನ ಮರು ಓದಿ ಸರಣಿಯ ೪ ಪುಸ್ತಕಗಳ ಬಿಡುಗಡೆ ಬಿ.ಸುರೇಶ ಅವರಿಂದ ನೆರವೇರಲಿದೆ. ವಸಂತ್ ಎನ್.ಕೆ. ಸಿ. ಬಸವಲಿಂಗಯ್ಯ, ಮೀನಾ ಮೈಸೂರು ಇನ್ನಿತರರು ಇರುವರು. ಬಳಿಕ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕಥೆ ಆಧಾರಿತ ಒಮ್ಮೆ ಹೆಣ್ಣಾಗು ನಾಟಕ ಸವಿತಾ ರಾಣಿ ಅವರ ನಿರ್ದೇಶನದಲ್ಲಿ ಪ್ರದರ್ಶಿತವಾಗಲಿದೆ ಎಂದರು.
ನ. ೨ ರಂದು ಬೆಳಗ್ಗೆ ೧೦.೩೦ಕ್ಕೆ ಕನ್ನಡ ರಂಗಭೂಮಿ- ಜನಪರ ಸಂಸ್ಕೃತಿ ಆಶಯ ಕುರಿತ ವಿಚಾರ ಸಂಕಿರಣ ಇರಲಿದೆ. ಟಿ. ಗುರುರಾಜ್ ಉದ್ಘಾಟಿಸುವರು, ವಿವಿಧ ಗೋಷ್ಠಿಗಳು ನಂತರ ಜರುಗಲಿವೆ. ಸಂಜೆ ೫ಕ್ಕೆ ಜನಾಶಯ ಗೀತ ಗಾಯನ, ಸಂಜೆ ೬ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮನೋಜ್ ವಾಮಂಜೂರು, ರತಿರಾವ್, ಕಾಳೇಗೌಡ ನಾಗವಾರ ಹಾಗೂ ಇನ್ನಿತರರು ಹಾಜರಿರುವರು. ಇದೇ ವೇಳೆ ಜನಮನ ಸಾಂಸ್ಕೃತಿಕ ಸಂಘಟನೆ ವತಿಯಿಂದ ಪಿ. ಲಂಕೇಶ್ ಕಥೆ ಆಧಾರಿತ ಕಲ್ಲು ಕರಗುವ ಸಮಯ ನಾಟಕ ಪ್ರದರ್ಶಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಕೆ.ಪಿ.ವಾಸುದೇವನ್, ಕೆ.ಆರ್.ಗೋಪಾಲಕೃಷ್ಣ, ರಾಜೇಶ್, ಮೈಮ್ ರಮೇಶ್ ಮೊದಲಾದವರು ಇದ್ದರು.

Share This Article
Leave a Comment