ಪಬ್ಲಿಕ್ ಅಲರ್ಟ್
ಮೈಸೂರು: ದಸರಾ ಮಹೋತ್ಸವದ ನಿಮಿತ್ತ 16 ನಾನಾ ಸಮಿತಿಗಳಿಗೆ ಅಧಿಕಾರೇತರರನ್ನು ಜಿಲ್ಲಾಡಳಿತ ನೇಮಕ ಮಾಡಿದೆ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಸೇರಿ ಈ ಉಪ ಸಮಿತಿಗಳಲ್ಲಿ ಬರೋಬ್ಬರಿ 2219 ಸದಸ್ಯರಿದ್ದಾರೆ!
ದಸರಾ ಉಪ ಸಮಿತಿಗಳಿಗೆ ಅಧಿಕಾರಿ ವರ್ಗದವರನ್ನು ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷರು, ಸಹ ಕಾರ್ಯಾಧ್ಯಕ್ಷರು, ಕಾರ್ಯದರ್ಶಿಯವರನ್ನು ನೇಮಕ ಮಾಡಿರುವ ಜಿಲ್ಲಾಡಳಿತ, ಇವರೊಂದಿಗೆ ಅಧಿಕಾರೇತರರ ಪಟ್ಟಿ ಬಿಡುಗಡೆ ಮಾಡಿದೆ. ಈ ಸದಸ್ಯರ ಸಂಖ್ಯೆಯೇ ಈಗ ದಾಖಲೆಯಾಗಿದೆ. ಮೃಗಾಲಯ ಪ್ರಾಧಿಕಾರದ ಮಾಜಿ ಆಧ್ಯಕ್ಷೆ ಮಲ್ಲಿಗೆ ವಿರೇಶ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಅವರಿಗೂ ಅಧ್ಯಕ್ಷ ಸ್ಥಾನ ಸಿಕ್ಕಿದೆ.
ಯೋಗ ದಸರಾ ಉಪ ಸಮಿತಿ: ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷರಾಗಿ 6 ಮಂದಿ ನೇಮಕ ಮಾಡಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಒಟ್ಟಾರೆ 135 ಮಂದಿ ಸದಸ್ಯರು, ಆಹಾರ ಮೇಳ ಉಪ ಸಮಿತಿ ಅಧ್ಯಕ್ಷ ಮಧುಕುಮಾರ್, ಆರು ಮಂದಿ ಉಪಾಧ್ಯಕ್ಷರು ಸೇರಿ 145 ಸದಸ್ಯರು, ಕವಿಗೋಷ್ಠಿ ಉಪ ಸಮಿತಿ ಅಧ್ಯಕ್ಷ ಸುರೇಶ್, ಆರು ಮಂದಿ ಉಪಾಧ್ಯಕ್ಷರು ಸೇರಿ 122 ಮಂದಿ ಸದಸ್ಯರು, ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ಹೆಚ್.ಜೆ.ರಾಘವೇಂದ್ರ, ಆರು ಮಂದಿ ಉಪಾಧ್ಯಕ್ಷರು ಸೇರಿದಂತೆ 126 ಮಂದಿ ಸದಸ್ಯರು, ಕುಸ್ತಿ ಉಪ ಸಮಿತಿ ಅಧ್ಯಕ್ಷ ರಮೇಶ್ ನಾಯಕ್, ಆರು ಮಂದಿ ಉಪಾಧ್ಯಕ್ಷರು ಸೇರಿ 136 ಸದಸ್ಯರಿದ್ದಾರೆ.
ಪಂಜಿನ ಕವಾಯತು ಉಪಸಮಿತಿ ಅಧ್ಯಕ್ಷ ಅನಿಲ್ರಾಜ್, 6 ಮಂದಿ ಉಪಾಧ್ಯಕ್ಷ ಸೇರಿ 155 ಮಂದಿ ಸದಸ್ಯರು,
ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿ ಅಧ್ಯಕ್ಷ ರಘುರಾಜೇ ಅರಸ್, 6 ಮಂದಿ ಉಪಾಧ್ಯಕ್ಷರು ಸೇರಿ 125 ಮಂದಿ ಸದಸ್ಯರು, ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ ಉಪ ಸಮಿತಿ ಅಧ್ಯಕ್ಷ ಚೋಳರಾಜು, 6 ಮಂದಿ ಉಪಾಧ್ಯಕ್ಷರು ಸೇರಿ 125 ಮಂದಿ ಸದಸ್ಯರು, ಯುವ ದಸರಾ ಉಪ ಸಮಿತಿ ಅಧ್ಯಕ್ಷ ಆರ್.ಸಿ.ಮಹೇಶ್, 7 ಮಂದಿ ಉಪಾಧ್ಯಕ್ಷರು ಸೇರಿ 155 ಸದಸ್ಯರು, ರೈತ ದಸರಾ ಉಪ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೇಶ್, 6 ಮಂದಿ ಉಪಾಧ್ಯಕ್ಷ ಸೇರಿ 136 ಸದಸ್ಯರು, ಕ್ರೀಡೆ ಉಪ ಸಮಿತಿ ಅಧ್ಯಕ್ಷ ನಂದೀಶ್, 6 ಮಂದಿ ಉಪಾಧ್ಯಕ್ಷರು ಸೇರಿ 140 ಸದಸ್ಯರು, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ: ಅಧ್ಯಕ್ಷೆ ಮಲ್ಲಿಗೆ ವೀರೇಶ್, 7 ಮಂದಿ ಉಪಾಧ್ಯಕ್ಷರು ಸೇರಿ 130 ಮಂದಿ ಸದಸ್ಯರು, ಸ್ವಚ್ಛತೆ ಮತ್ತು ವ್ಯವಸ್ಥೆ ಉಪ ಸಮಿತಿ ಅಧ್ಯಕ್ಷರಾಗಿ ಸುಭಾನ್, 6 ಮಂದಿ ಉಪಾಧ್ಯಕ್ಷರು ಸೇರಿ 150 ಮಂದಿ ಸದಸ್ಯರು,
ಸಾಂಸ್ಕೃತಿಕ ದಸರಾ ಉಪ ಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ, 8 ಮಂದಿ ಉಪಾಧ್ಯಕ್ಷರು ಸೇರಿ 140 ಸದಸ್ಯರಿರುವರು.
ಮೆರವಣಿಗೆ ಉಪ ಸಮಿತಿ ಅಧ್ಯಕ್ಷ ಕುಮಾರ, 7 ಮಂದಿ ಉಪಾಧ್ಯಕ್ಷರು ಸೇರಿ 155 ಮಂದಿ ಸದಸ್ಯರು, ಸ್ತಬ್ಧಚಿತ್ರ ಉಪ ಸಮಿತಿ ಅಧ್ಯಕ್ಷ ಪ್ರಶಾಂತ್, 7 ಮಂದಿ ಉಪಾಧ್ಯಕ್ಷರು ಸೇರಿ 145 ಮಂದಿ ಸದಸ್ಯರಿದ್ದಾರೆಂದು ಆದೇಶ ಹೊರಡಿಸಿದ್ದಾರೆ. ಆ ಮೂಲಕ ದಾಖಲೆಯ ಮಂದಿಯನ್ನು ಉಪಸಮಿತಿಗೆ ಸೇರ್ಪಡೆಗೊಳಿಸಿದ್ದಾರೆ.
16 ಸಮಿತಿಗಳಿಗೆ ಬರೋಬ್ಬರಿ ೨೨೧೯ ಮಂದಿ ಸದಸ್ಯರ ನೇಮಕ
Leave a Comment
Leave a Comment
