ಪಬ್ಲಿಕ್ ಅಲರ್ಟ್
ಮೈಸೂರು: ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದಲ್ಲಿ ಮೌನಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಎಸ್.ಎಲ್.ಭೈರಪ್ಪ ಅವರು ನಮ್ಮ ಸಂಘದ ಹಾಲಿ ಗೌರವ ಧರ್ಮದರ್ಶಿಯಾಗಿದ್ದರು. ವಿದ್ಯಾರ್ಥಿಯಾಗಿದ್ದಾಗ ಸಂಘದ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡಿದ್ದು, ತಮ್ಮ ಭಿತ್ತಿ ಕಾದಂಬರಿಯಲ್ಲಿ ದಾಖಲಿಸಿದ್ದಾರೆ ಎಂದು ಸ್ಮರಿಸಿದರು.
ಕಾರ್ಯದರ್ಶಿ ಜಯಸಿಂಹ ಮಾತನಾಡಿರು. ಸಂಘದ ಪದಾಧಿಕಾರಿಗಳಾದ ಸುಂದರಮೂರ್ತಿ, ವಿಜಯ ಕುಮಾರ್, ಶ್ರೀನಿಧಿ, ಹರೀಶ್, ಜಗದೀಶ್, ರಂಗನಾಥ್, ಪ್ರಶಾಂತ್, ಅನುಪಮಾ, ಶೈಲಜಾ, ವಿಜಯಾಪ್ರಸಾದ್ ಸದಸ್ಯರಾದ ಮಂಜುನಾಥ್, ಚಂದ್ರಶೇಖರ್, ಪ್ರಮೋದ್, ವಿದ್ಯಾರ್ಥಿಗಳಾದ ಲಕ್ಷ್ಮಣ್, ಆದಿತ್ಯ ಮುಂತಾದವರಿದ್ದರು.
ಡಾ. ಭೈರಪ್ಪಗೆ ಹೊಯ್ಸಳ ಕರ್ನಾಟಕ ಸಂಘ ಶ್ರದ್ಧಾಂಜಲಿ
Leave a Comment
Leave a Comment
