೩೦ಕ್ಕೂ ಹೆಚ್ಚು ಮಂದಿ ರಕ್ತದಾನದ ಮೂಲಕ ಅಪ್ಪು ಸ್ಮರಣೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಜೀವದಾರರ ರಕ್ತನದಿ ಕೇಂದ್ರ ವತಿಯಿಂದ ನ್ಯೂ ಸಯ್ಯೋಜಿ ರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಕರ್ನಾಟಕ ರತ್ನ ನಟ ದಿ.ಡಾ.ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ 30ಕ್ಕೂ ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ನಮ್ಮ ಬದುಕು ಬೆಳಕಾಗಬೇಕು ಬದಕು ಬಯಲಾಗಬೇಕು ಇದುವೆ ಜೀವನ. ನೂರು ವರ್ಷ ಬದುಕಿದರೆ ಅದು ಸಾರ್ಥಕವಾಗಲಾರದು, ಯಾರಿಗಾಗಿ ನಾನು ಬದುಕಿದ್ದೇನೆ, ಯಾವ ಸೇವೆಯನ್ನ ಮಾಡಿದ್ದೇನೆ ಎಂಬ ನಿದರ್ಶನದ ಮೇಲೆ ಬದುಕು ಸಾರ್ಥಕವಾಗಬೇಕು. ನಮ್ಮ ಬದುಕು ಪ್ರದರ್ಶನವಾಗಬಾರದು, ನಮ್ಮ ಬದುಕು ನಿರ್ದರ್ಶನವಾಗಬೇಕು ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಅಪ್ಪು ಎಂದು ಹೇಳಿದರು
ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷರಾದ ಕೆ.ಬಿ.ಲಿಂಗರಾಜು ಮಾತನಾಡಿ, ಪುನೀತ್ ಸಾವಿಗೂ ಮೊದಲು ರಾಜ್ಯದ ಬಹಳಷ್ಟು ಜನತೆಗೆ ಅವರು ಮಾಡಿದ್ದ ಸಾಮಾಜಿಕ ಸೇವೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದರು. ಚಿತ್ರಗಳು ಹಾಗೂ ಸಾಮಾಜಿಕ ಸೇವೆ ಮೂಲಕ ಮುಗಿಲೆತ್ತ ರಕ್ಕೆ ಬೆಳೆದು ನಿಂತವರಾಗಿದ್ದಾರೆಂದು ಹೇಳಿದರು. ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹರಿಯ ಪರಿಹಾರಿಯ, ಸದಾಶಿವ್, ನಾಗಮಣಿ, ದರ್ಶನ್, ನವೀನ್, ಮಮತಾ ಇನ್ನಿತರರು ಹಾಜರಿದ್ದರು.

ಬಾಕ್ಸ್‌
ದಂಪತಿಗಳಿಂದ ರಕ್ತದಾನ
ಮೈಸೂರು ನಗರದ ಕಾರ್ಖಾನೆ ಕಾರ್ಮಿಕರಾದ ರಾಮಚಂದ್ರ ಹಾಗೂ ಪತ್ನಿ ಸೌಮ್ಯ ದಂಪತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ನಟ ಪುನೀತ್‌ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದು, ಅವರ ನೆನಪಿಗೆ ರಕ್ತದಾನ ಮಾಡುತ್ತಿದ್ದೇವೆಂದರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳ ಅಪ್ತ ಸಹಾಯಕ ವಿಶಾಲ್‌ ಅವರು ಸಹ ಇದೇ ವೇಳೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಗಮನ ಸೆಳೆದರು. 

Share This Article
Leave a Comment