ಪೌರಕಾರ್ಮಿಕರ ಸಂಘಕ್ಕೆ ಆಯ್ಕೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮೈಸೂರು ಮಹಾನಗರ ಪಾಲಿಕೆ ಒಳ ಚರಂಡಿ ಸಹಾಯಕ ಹಾಗೂ ಪೌರ ಕಾರ್ಮಿಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರನ್ನು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ನಾರಾಯಣ ಸನ್ಮಾನಿಸಿದರು.
ಬಳಿಕ ಮಾತನಾಡಿ, ತಾವು ಗೌರವಾಧ್ಯಕ್ಷರಾಗಿದ್ದು, ಅಧ್ಯಕ್ಷರಾಗಿ ಶಂಕರ, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಲೋಕೇಶ್, ಗೌರವ ಉಪಾಧ್ಯಕ್ಷರಾಗಿ ಆರ್.ಶಿವಣ್ಣ, ಉಸ್ತುವಾರಿ ಅಧ್ಯಕ್ಷರಾಗಿ ಕೆ.ಸೋಮು, ಕಾರ್ಯಾಧ್ಯಕ್ಷರಾಗಿ ಸಿ.ಪಿ.ರಾಜೀವ್‌ಕುಮಾರ್, ಉಪಾಧ್ಯಕ್ಷ ಲಕ್ಷ್ಮಣ್‌ ಇನ್ನಿತರರು ಇತರೆ ಪದಾಧಿಕಾರಿಗಳಾಗಿದ್ದಾರೆಂದರು.
ರಾಜ್ಯದ ೧೦ ನಗರ ಪಾಲಿಕೆಗಳಲ್ಲಿ ೮೯೯ ಮಂದಿ ಒಳ ಚರಂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರದು ಕಷ್ಟಕರ ಕೆಲಸ. ಹಲವರು ಕೆಲಸದ ವೇಳೆ ಪ್ರಾಣವನ್ನೇ ಕಳೆದುಕೊಂಡಿರುವುದುಂಟು. ಇವರಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆ ಖಾಯಂಗೊಳಿಸಿಲ್ಲ. ಹೀಗಾಗಿ ಎಲ್ಲರನ್ನೂ ಖಾಯಂಗೊಳಿಸಬೇಕೆಂದು ಸಿಎಂಗೆ ಮನವಿ ಮಾಡಲಾಗಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು. ಶಂಕರ, ಆರ್.ಲೋಕೇಶ್, ಆರ್.ಶಿವಣ್ಣ, ಕೆ.ಸೋಮು, ಸಿ.ಪಿ.ರಾಜೀವ್‌ಕುಮಾರ್, ಲಕ್ಷಣ್‌ ಇನ್ನಿತರರು ಇದ್ದರು.

Share This Article
Leave a Comment