ನ್ಯಾಯಮೂರ್ತಿ ಮೇಲಿನ ಹಲ್ಲೆಗೆ ಯುವ ಕಾಂಗ್ರೆಸ್‌ ಖಂಡನೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಎಫ್‌ಟಿಎಸ್ ವೃತ್ತದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ದೇಶದ ಸಂವಿಧಾನದ ರಕ್ಷಣೆ ಮಾಡುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವುದು ಖಂಡನೀಯ. ಈ ಕೃತ್ಯವನ್ನು ಎಸಗಿರುವ ವಕೀಲ ಡೋಂಗಿ ಸನಾತನಿ, ಮನುವಾದಿ ರಾಕೇಶ್ ಕಿಶೋರ್ ಅವರನ್ನು ಗಡಿಪಾರು ಮಾಡುವ ಮೂಲಕ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಶಿವಣ್ಣ, ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ರರ್ ಮೊಹಮ್ಮದ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ರಫೀಕ್ ಅಲಿ, ಮೈಸೂರು ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಕೆಂಪಿ, ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರತಾಪ್.ಜೆ, ಇಮಾನ್ವಲ್ ಶರತ್, ನರಸಿಂಹರಾಜ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಿಜ್ವಾನ್ ಪಾಷಾ, ಚಾಮರಾಜ ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಪಟೇಲ್, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು ನರಸಿಂಹಮೂರ್ತಿ, ವಿಷ್ಣು ಪ್ರಿಯನ್, ಮಂಜೇಶ್, ವಿರಾಟ್ ಗೌಡ, ಕೃಷ್ಣರಾಜ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರಾಕೇಶ್, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಮಲ್ಲ, ರಾಜೇಂದ್ರ ಪ್ರಸಾದ್, ಇಂದಿರಾ ಗಾಂಧಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ, ರಾಘವೇಂದ್ರ, ಅಲಿಂ ಪಾಶ, ರಾಕೇಶ್, ಎಂ.ವಿ.ವಿಕ್ರಂ, ಹೇಮಂತ್, ರವೀಶ್ ಗೌಡ, ಸುಹಾಸ್ ಗೌಡ, ರವಿ, ಮಂಜು ಸೇರಿದಂತೆ ಹಲವರು ಭಾಗವಹಿಸಿದ್ದರು.

Share This Article
Leave a Comment