ಪಬ್ಲಿಕ್ ಅಲರ್ಟ್
ಮೈಸೂರು: ಸಂಶೋಧನೆ ಎನ್ನುವುದು ಅಗ್ನಿಗರ್ಭವಿದ್ದಂತೆ. ಈ ಕ್ಷೇತ್ರದಲ್ಲಿ ತೊಡಗಿರುವವರಿಗೆ ಸಮ ಚಿತ್ತತೆ ಬಹಳ ಅವಶ್ಯ ಎಂದು ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಚಲ ಶಾಸ್ತ್ರಿ ಅಭಿಪ್ರಾಯಪಟ್ಟರು.
ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಮಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಡ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಶೋಧನೆಗಳು ಸಮಾಜಕ್ಕೆ ಅಗತ್ಯವದ, ಸಮಾಜಕ್ಕೆ ಉಪಕಾರವಾಗುವ, ಅಂತರAಗ, ಬಹಿರಂಗಗಳಿಗೆ ಪ್ರಬಾವ ಬೀರುವ ಅಂಶಗಳನ್ನು ಒಳಗೊಂಡಿರುತ್ತದೆ. ಸಂಶೋಧನೆಗಳು ನಿರ್ಭಿಡೆಯಿಂದ ಕೂಡಿದ್ದು, ಅವುಗಳ ವ್ಯಾಖ್ಯಾನಗಳೂ ಬಹಳ ವಿಶ್ವಾಸದಿಂದ ಇರುತ್ತವೆ ಎಂದರು.
ಸAಶೋಧನಾ ಕ್ಷೇತ್ರವು ಸೀಮತವಾದ ವಲಯವಾಗಿದೆ. ಸಂಶೋಧಕರದ್ದು ಸಣ್ಣ ಸಂಸಾರವಾಗಿದೆ. ಏಕೆಂದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹಳ ಕಡಿಮೆ, ಈ ಕ್ಷೇತ್ರವನ್ನು ಹಚ್ಚಿಕೊಳ್ಳುವವರೂ ಕಡಿಮೆ. ಹೀಗಾಗಿ ಎಲ್ಲರು ಒಟ್ಟಿಗೆ ತೊಡಗಿಕೊಳ್ಳುವುದು ಯೋಗವಾಗಿದೆ ಎಂದರು.
ಎಲ್ಲಿವರೆಗೆ ವ್ಯಕ್ತಿಯು ಜ್ಞಾಪಕದಲ್ಲಿ ಇರುತ್ತಾನೆ ಎಂದರೆ ಆತನ ಬರವಣಿಗೆಗಳು ಸತ್ವವಿರುವ ತನಕ. ವ್ಯಕ್ತಿಯ ಆಕಾರ ಮರೆತು ಹೋಗಬಹುದು. ಆತನ ಉಪನ್ಯಾಸಗಳು ಮರೆತು ಹೋಗಬಹುದು. ಅದರೆ ಅತ ಕಪ್ಪು ಬಿಳುಪಿನಲ್ಲಿ ಉಳಿಸಿ ಹೋಗುವ ಅಕ್ಷರಗಳು ಹೆಚ್ಚು ಕಾಲ ಜೀವಂತವಾಗಿ ಇರುತ್ತವೆ. ಇದೇ ಆವನು ಗಳಿಸಿಕೊಂಡ ಪರಮಾರ್ಥವಾಗಿರುತ್ತದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಎನ್.ಎಂ.ತಳವಾರ್ ಅಭಿನಂದನಾ ನುಡಿಯನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇರ್ಶಕ ಡಾ.ಎಂ.ಡಿ.ಸುದರ್ಶನ್, ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯರಾದ ಡಾ.ಸಿದ್ದನಗೌಡ ಪಾಟೀಲ, ಶ್ರೀವಿಜಯ ಎಂ.ಕಲಬುರ್ಗಿ, ಹನುಮಾಕ್ಷಿ ಗೋಗಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಸಂಶೋಧಕ ಡಾ.ಎನ್.ಎಸ್.ತಾರಾನಾಥ್ ಅವರಿಗೆ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ.ಟಿ.ವಿ.ವೆಂಕಟಚಲಶಾಸ್ತ್ರಿ ಪ್ರದಾನ ಮಾಡಿದರು.
ಸಂಶೋಧನೆಗೆ ಸಮಚಿತ್ತತೆ ಅವಶ್ಯಕ: ವೆಂಕಟಾಚಲ ಶಾಸ್ತ್ರಿ
Leave a Comment
Leave a Comment
