ಪಬ್ಲಿಕ್ ಅಲರ್ಟ್ ನ್ಯೂಸ್:-ಆರೋಗ್ಯ ರಕ್ಷಣೆಯನ್ನು ಉತ್ತೇಜಿಸಲು ಅಪೋಲೋ ಆಸ್ಪತ್ರೆಯು ಮೈಸೂರಿನಲ್ಲಿ ವಯಸ್ಕರ ಲಸಿಕೆ ಚಿಕಿತ್ಸಾಲಯವನ್ನು ಪ್ರಾರಂಭಿಸಿವೆ
ಮೈಸೂರು, ಡಿಸೆಂಬರ್ 22, 2025, ಅಪೋಲೋ ಆಸ್ಪತ್ರೆಯು ಇಂದು ಆಸ್ಪತ್ರೆಯ ಮುಖ್ಯ ಅಂಗಳದಲ್ಲಿ ವಯಸ್ಕರ ಲಸಿಕೆ ಚಿಕಿತ್ಸಾಲಯವನ್ನು ಪ್ರಾರಂಭಿಸಿದ್ದು, ಇದು ಆರೋಗ್ಯ ರಕ್ಷಣೆ ಮತ್ತು ವಯಸ್ಕರ ರೋಗನಿರೋಧಕ ವನ್ನು ಹೆಚ್ಚಿಸಲು ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜನರಲ್ ಮೆಡಿಸಿನ್ ಸಲಹೆಗಾರರಾದ ಡಾ. ನರಹರಿ, ಡಾ. ಪ್ರಹ್ಲಾದ್; ಹಿರಿಯ ಸಮಾಲೋಚಕ ವೈದ್ಯ ರಾದ ಡಾ. ಜಾವೀದ್ ನಯೀಮ್; ಸಾಂಕ್ರಾಮಿಕ ರೋಗಗಳ ಸಲಹೆಗಾರರಾದ ಡಾ. ಕೃತಿ ಎಂ. ಕೆ; ವೈದ್ಯಕೀಯ ಅಧೀಕ್ಷಕರಾದ ಡಾ. ಅಮನ್ ನಾಯಕ್; ಮತ್ತು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗಳ ಕರ್ನಾಟ ಕೇತರ ಭಾಗಗಳ ಹಿರಿಯ ಉಪಾಧ್ಯಕ್ಷರಾದ ಎನ್. ಜಿ. ಭರತೀಶ್ ರೆಡ್ಡಿ ಸೇರಿದಂತೆ ಹಿರಿಯ ವೈದ್ಯರು ಭಾಗವಹಿಸಿದ್ದರು.
ಡಾ. ಕೃತಿ ಎಂ. ಕೆ ಮತ್ತು ಡಾ. ಜಾವೀದ್ ನಯೀಮ್ ಅವರ ನೇತೃತ್ವದಲ್ಲಿ ನಡೆದ ಈ ಜಾಗೃತಿ ಅಭಿಯಾನವು ಗಂಭೀರ ಸೋಂಕುಗಳನ್ನು ತಡೆಗಟ್ಟುವಲ್ಲಿ ಮತ್ತು ದೀರ್ಘಕಾಲೀನ ಆರೋಗ್ಯವನ್ನು ಉತ್ತೇಜಿಸುವಲ್ಲಿ ವಯಸ್ಕರ ಲಸಿಕೆಯ ಮಹತ್ವವನ್ನು ತಿಳಿಯಪಡಿಸಿತು. ಈ ಲಸಿಕೆಯು ಜನಸಾಮಾನ್ಯರು ಹಾಗು ಸಮಾಜವನ್ನು ರೋಗಗಳಿಂದ ರಕ್ಷಿಸಲು ಮತ್ತು ಸಕಾಲಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಒಂದು ಪ್ರಮುಖ ಹೆಜ್ಜೆಯಾಗಿ ಹೊರಹೊಮ್ಮಿತು.
ಪ್ರಾರಂಭದಲ್ಲಿ ಮಾತನಾಡಿದ ಎನ್.ಜಿ. ಭರತೀಶ್ ರೆಡ್ಡಿ ಯವರು, “ಆರೋಗ್ಯ ರಕ್ಷಣೆ ಯು ಅಪೊಲೋ ಆಸ್ಪತ್ರೆಯ ಧ್ಯೇಯದ ಮೂಲತತ್ವವಾಗಿದೆ.. ವಯಸ್ಕರ ವ್ಯಾಕ್ಸಿನೇಷನ್ ಕ್ಲಿನಿಕ್ನೊಂದಿಗೆ, ನಾವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಮತ್ತು ವಯಸ್ಕರ ಆರೋಗ್ಯ ರಕ್ಷಣೆಯನ್ನು ನಿಯಮಿತ ಭಾಗವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದರು.
ಈ ಮಹತ್ವದ ಚಿಕಿತ್ಸಾಲಯದ ಯಶಸ್ವಿ ಪರಿಚಯವನ್ನು ಶಾಶ್ವತವಾಗಿ ಧೀರ್ಘಕಾಲ ಗುರುತಿಸಲು ಪೋಸ್ಟರ್ ಮೂಲಕ ಅನಾವರಣ ಮಾಡಲಾಯಿತು ಹಾಗು ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಈ ಕಾರ್ಯಕ್ರಮದ ಮೂಲಕ, ಅಪೋಲೋ ಆಸ್ಪತ್ರೆಯು ಉತ್ತಮ ಆರೋಗ್ಯದ ಆರೈಕೆಯಲ್ಲಿ ಮುಂಚೂಣಿಯಲ್ಲಿದ್ದು, ವಯಸ್ಕರಿಗೆ ಸಕಾಲಿಕ ಆರೋಗ್ಯದ ರಕ್ಷಣೆಯನ್ನು ಒದಗಿಸಲು ಖಚಿತಪಡಿಸುತ್ತದೆ ಮತ್ತು ಸಮಗ್ರ, ಹಾಗು ಸಂಪೂರ್ಣವಾಗಿ ರೋಗಿಗಳ ಕೇಂದ್ರಿಕರಿಸಿ ಅವರ ಆರೋಗ್ಯ ರಕ್ಷಣೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ..
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಪೋಲೋ ಆಸ್ಪತ್ರೆಯು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದು, ಕ್ಲಿನಿಕಲ್ ಶ್ರೇಷ್ಠತೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು ರೋಗಿಗಳ ಯೋಗಕ್ಷೇಮಕ್ಕೆ ಬಲವಾದ ಒತ್ತು ನೀಡುತ್ತಿದೆ.
