ಜಿಲ್ಲಾಧಿಕಾರಿಗಳಿಂದ ಜನಗಣತಿ ಕೆಲಸ ಪರಿಶೀಲನೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಜಿಲ್ಲಾಧಿಕಾರಿಗಳಿಂದ ಜನಗಣತಿ ಕೆಲಸ ಪರಿಶೀಲನೆ

ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ ಜಿ ಅವರು ಇಂದು ಮೈಸೂರು ನಗರದ ತೊಣಚಿ ಕೊಪ್ಪಲ್ ಪ್ರದೇಶದಲ್ಲಿ ಜನಗಣತಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು.

ಗಣತಿದಾರರು ಮನೆಗಳ ಮ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದು, ಗಣತಿದಾರರಿಂದ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಶನಿವಾರದವರೆಗೆ ಮನೆಗಳ ಮ್ಯಾಪಿಂಗ್ ಕೆಲಸ ನಡೆಯುತ್ತಿದ್ದು, ನಂತರ ಮನೆ- ಮನೆಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ಸಾರ್ವಜನಿಕರು ಗಣತಿದಾರರಿಗೆ ನಿಖರ ಮಾಹಿತಿ ನೀಡಿ ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಉಪಯುಕ್ತ ಹಾಗೂ ಮೈಸೂರು ನಗರ ಜನಗಣತಿ ಅಧಿಕಾರಿ ಸೋಮಶೇಖರ್ ಜಿ.ಎಸ್‌ ಉಪಸ್ಥಿತರಿದ್ದರು

Share This Article
Leave a Comment