ಪಬ್ಲಿಕ್ ಅಲರ್ಟ್ ನ್ಯೂಸ್:-ಭ್ರಾತೃತ್ವ ಬಿತ್ತಲು ಕ್ರೀಡೆ ಉತ್ತಮ ಅಭಿರುಚಿ: ಡಾ.ಹೆಚ್.ಸಿ.ಮಹದೇವಪ್ಪ
ಮೈಸೂರು,ಜ.11: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್. ಸಿ.ಮಹದೇವಪ್ಪ ಅವರು ಕುವೆಂಪುನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಮೈಸೂರು ಜಿಲ್ಲಾ ಅಮೇಚೂರ್ ಖೋ-ಖೋ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ವೀಕ್ಷಿಸಿ, ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಸಚಿವರು, ಎರಡುದಿನದ ರಾಜ್ಯದ ಮಟ್ಟದ ಅಮೇಚ್ಯುರ್ ಖೋ-ಖೋ ಅಂತಿಮ ಪಂದ್ಯಾವಳಿಯಲ್ಲಿ ರಾಯಚೂರು ಹಾಗೂ ಮೈಸೂರು ತಂಡವು ಅತ್ಯಂತ ರೋಚಕವಾಗಿ ಆಡಿದ್ದಾರೆ. ಎರಡು ತಂಡವು ತಂಡಗಳು ಸಮಬಲದಿಂದ ಕೂಡಿತ್ತು ಎಂದು ಪ್ರಶಂಸಿದರು.
ಭ್ರಾತೃತ್ವವನ್ನು ಭಿತ್ತುವ ಸಲುವಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಉತ್ತಮ ಅಭಿರುಚಿಯಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾಭಾವನೆಯಿಂದ ಪ್ರತಿಯೊಬ್ಬರೂ ಬದುಕುವ ವಾತಾವರಣದಿಂದ ಸೃಷ್ಟಿಯಾಗಲಿ ಎಂದು ಆಶಿಸುತ್ತೇನೆ ಎಂದರು.
ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ
ಮೊದಲ ಸ್ಥಾನವನ್ನು ರಾಯಚೂರು ತಂಡವು ಗಳಿಸಿತು. ಎರಡನೇ ಬಹುಮಾನ ಮೈಸೂರು ಜಿಲ್ಲೆ ಹಾಗೂ ತೃತೀಯ ಬಹುಮಾನವನ್ನು ಧಾರವಾಡ ಜಿಲ್ಲೆ ಪಡೆದುಕೊಂಡಿತು.
ಈ ವೇಳೆ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ಅವರು, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್ ಅವರು, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು, ಸಚಿವರ ವಿಷೇಶ ಕರ್ತವ್ಯಾಧಿಕಾರಿ ರವಿಕುಮಾರ್ ಅವರು, ಮುಖಂಡರಾದ ಅಹಿಂದ ಜವರಪ್ಪ, ನಾಗರಾಜು ಭೈರಿ, ಪ್ರಕಾಶ್, ದಿನೇಶ್, ಶ್ರೀಪತಿ, ಕೃಷ್ಣಸ್ವಾಮಿ ಸೇರಿದಂತೆ ಹಲವರು ಇದ್ದರು.
