ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ :ಬಿ. ರಂಗೇಗೌಡ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ :ಬಿ. ರಂಗೇಗೌಡ

ಮೈಸೂರು,ಫೆ.21 (ಕರ್ನಾಟಕ ವಾರ್ತೆ):- ಕಲೆ ಎಲ್ಲರಿಗೂ ಒಲಿದು ಬರೋದಿಲ್ಲ ಕೆಲವರಿಗೆ ಮಾತ್ರ ಒಲಿದು ಬರುತ್ತದೆ. ಕಲೆ ಮತ್ತು ಸಂಸ್ಕೃತಿ ಮೈಗೂಡಿಸಿಕೊಂಡರೆ ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಡುವ ಶಕ್ತಿ ಕಲೆಗೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ. ರಂಗೇಗೌಡ ಅವರು ಹೇಳಿದರು.

ಇಂದು ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಿದ್ಯಾರ್ಥಿಗಳ ನಿಲಯಗಳ ವಿದ್ಯಾರ್ಥಿಗಳಿಗೆ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕಲಾ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ ನಾಟಕ, ಕ್ರೀಡೆ, ಇವುಗಳಿಗೆ ಯಾವುದೇ ಜಾತಿ ಬೇದ ಇಲ್ಲ. ಧರ್ಮತೀತವಾಗಿ ಎಲ್ಲವನ್ನು ಮೀರಿ ಬೆಳೆದು ಬಂದಿರುವoತಹದ್ದು.ಈ ಕಲೆಯನ್ನು ಓದುವ ಜೊತೆಯಲ್ಲಿ ಕಲೆಯನ್ನು ಮೈಗೂಡಿಸಿಕೊಳ್ಳಿ. ಬಾಲ್ಯದಿಂದ ಪ್ರೌಢ ವ್ಯವಸ್ಥೆಗೆ ಬರುವ ಮಕ್ಕಳು ಮನಸ್ಸನ್ನು ಬೇರೆ ಕಡೆ ಚಂಚಲಗೊಳಿಸದೆ ಓದಿನ ಕಡೆ ಕೇಂದ್ರೀಕರಿಸಬೇಕು ಯಾವುದೇ ಆಕರ್ಷಣೆಗೆ ಒಳಗಾಗಬೇಡಿ. ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಪ್ರತಿಯೊಂದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಹೇಳಿದರು.

ತರಬೇತುದಾರ ದೇವನಂದ ವರಪ್ರಸಾದ್ ಅವರು ಮಾತನಾಡಿ ಜಾನಪದ ಕಲೆಯು ಒಬ್ಬರಿಂದ ಒಬ್ಬರು ಕೇಳಿ ಹಾಡುವುದರ ಮೂಲಕ ಬೆಳೆದು ಬಂದಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ತರಬೇತಿ ನೀಡಲು ಇಲಾಖೆ ಗಳು ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಹಾಸ್ಟಲ್ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಸಿಕ್ಕರೆ ಮಕ್ಕಳು ಮುಂದೆ ಬೆಳೆಯುತ್ತಾರೆ. ಕಲಾ ತರಬೇತಿಯಂತಹ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಂಡರೆ ಜೀವನದಲ್ಲಿ ಮುಂದೆ ಬರಲು ಸಹಾಯಕ ಆಗಲಿದೆ ಕಲೆಗಳನ್ನು ಕಲಿತಾಗ ತನ್ನಲ್ಲಿನ ಚೈತನ್ಯ ಹೊರ ಬರುತ್ತದೆ ಎಂದು ಹೇಳಿದರು.

ತರಬೇತಿ ಪಡೆದ ವಿದ್ಯಾರ್ಥಿನಿ ಸಾಕ್ಷಿ ಮಾತನಾಡಿ ಕಲೆ ಬಗ್ಗೆ ಹೆಚ್ಚಿನ ಮತ್ತು ಸಂಸ್ಕೃತಿ ಬಗ್ಗೆ ನಮಗೆ ಯಾವುದೇ ಜ್ಞಾನ ಇರಲಿಲ್ಲ ನೃತ್ಯ, ಸಂಗೀತ,ವೀರಗಾಸೆ ಬಗ್ಗೆ ತರಬೇತಿ ನೀಡಿದ್ದರೆ ಎಂದರು. ಸಮಾಜದಲ್ಲಿ ಶಿಸ್ತಿನಿಂದ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಧೈರ್ಯ ತುಂಬಿ ವೇದಿಕೆಯ ಮೇಲೆ ಪ್ರದರ್ಶನ ನೀಡುವಂತೆ ತರಬೇತಿ ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್,ನಿಲಯ ಪಾಲಕರಾದ ಮೋಹನ ಕುಮಾರಿ ಕೆ. ಎಸ್ ಉಪಸ್ಥಿತರಿದ್ದರು.

Share This Article
Leave a Comment