ಆಂತರಾಷ್ಟ್ರೀಯ ಮಹಿಳಾ ದಿನಾಚರಣೆ

latha prabhukumar
5 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಆಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಲೇಖನ
ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಮಾರ್ಚ 8 ರಂದು ಆಚರಿಸಲಾಗುತ್ತದೆ. ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿವರ್ಷ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. 2026 ರ ಅಂತರರಾಷ್ಟ್ರೀಯ ಮಹಿಳಾ ದಿನದ ಧ್ಯೇಯವಾಕ್ಯ “ಗಳಿಸಲು ಅವಕಾಶ ಕೂಡಿ”
ಕೆಲಸದಲ್ಲಿ ಮನೆಯಲ್ಲಿ ಮತ್ತು ಸಮುದಾಯದಲ್ಲಿ ಮಹಿಳೆಯರನ್ನು ಬಹಿರಂಗವಾಗಿ ಮುಂದೆ ಮುನ್ನಡೆಸಲು ಹಲವು ಮಾರ್ಗಗಳು ಕೆಳಗಡೆ ನೀಡಿದಂತೆ ಇವೆ.
ಗೌರವ, ದೇಣಿಗೆ, ಗೋಚರತೆ, ಜ್ಞಾನ ,ಹಣಕಾಸು, ನ್ಯಾಯ, ಸಂಪನ್ನಮೂಲ ,ಧ್ವನಿ ,ರಕ್ಷಣೆ, ಸತ್ಯ ,ಸಮಾನ ವೇತನ, ಪ್ರಾಯೋಜಕತ್ವ, ಮಾರ್ಗದರ್ಶನ, ಕ್ರೆಡಿಟ್, ಬಜೆಟ್ ,ಪರಿಚಯ ಕಾರ್ಯಗಾರಗಳನ್ನು, ಅವಕಾಶಗಳನ್ನು, ಸುರಕ್ಷತೆಯನ್ನು, ತರಬೇತಿ,
ಸ್ಟ್ರೇಟ್ ಅಸೆಸ್ಮೆಂಟ್ ,
ಆವೇಗ, ಮಾದರಿಗಳು, ಬೆಳವಣಿಗೆ ,ಪ್ರವೇಶ ಸಮಯ ಮುಂತಾದವು
ಮಹಿಳೆಯರಿಗೆ ನೀಡಿವೆ .

ನಾರಿಶಕ್ತಿಯನ್ನು ಸೃಷ್ಟಿಯ ಆದಿಶಕ್ತಿ ಎಂದು ಮಹಿಮೆ ಮಾಡಲಾಗಿದೆ. ನಾರಿಯು ಸಮಾಜದ ಅತ್ಯಂತ ಶ್ರೇಷ್ಠ ಭಾಗವಾಗಿದ್ದಾಳೆ. ‘ನಾರಿಯ ಸ್ವರ್ಗಕ್ಕೆ ದಾರಿ” ಎಂಬುದು ಎಲ್ಲರೂ ತಿಳಿದ ಸತ್ಯವಾಗಿದೆ. ನಾರಿ ಒಬ್ಬಳು ಕಲಿತರೆ ಒಂದು ಶಾಲೆಯನ್ನು ತೆರೆದಂತೆ ಎಂಬ ನಾಣ್ಣುಡಿ ಸಾರ್ಥಕವಾಗಿದೆ. ನಾರಿಯು ಸಮಾಜದ ಚುಕ್ಕಾಣಿಯನ್ನು ಹಿಡಿದು ಅಭಿವೃದ್ಧಿ ಕಡೆಗೆ ಕರೆದೊಯ್ಯುವ ಸಾಧಕಿಯಾಗಿದ್ದಾಳೆ.
ಆದರೆ ಶತಮಾನಗಳಿಂದ ನಾರಿಯನ್ನು ಒಂದು ಭೋಗ ವಸ್ತು ಎಂದು ಹಾಗೂ ಪುರುಷನ ಸಂಪತ್ತು ಎಂದು ಭಾವಿಸಲಾಗುತ್ತಿತ್ತು. ನಾರಿಯನ್ನು ಪುರುಷನು ತನಗೆ ಬೇಕಾದ ರೀತಿಯಲ್ಲಿ ಬಳಸಬಹುದು ಹಾಗೂ ಆಕೆಯ ಮನೋಬಲವನ್ನು ಮುರಿದು ಆಕೆಯ ಭಾವನೆಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದ್ದನು. ಆದರೆ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ನಾರಿಯು ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ಇತಿಹಾಸದಲ್ಲಿ ತನ್ನ ಹೆಸರನ್ನು ಅಮರಗೊಳಿಸಿದ್ದಾಳೆ.
ವೈದಿಕ ಕಾಲದ ನಾರಿಯು ಪುರುಷನ ಸಮಾನ ಸ್ಥಾನಮಾನ ಪಡೆದು ಆನಂದಿಸಿದ್ದಾಳೆ. ಆ ಕಾಲದ ಮಹಿಳೆಯು ಸುಶಿಕ್ಷಿತಳಾಗಿದ್ದು ಆಕೆಯ ವಿವಾಹವು ಬಯಸಿದವರೊಂದಿಗೆ ಪರಿಪಕ್ವ ವಯಸ್ಸಿನಲ್ಲಿ ನೆರವೇರುತ್ತಿತ್ತು.
ಮಧ್ಯಕಾಲದಲ್ಲಿ ಸ್ತ್ರೀಯರ ಸ್ಥಾನಮಾನವು ಇಳಿಯಿತು. ಬಾಲ್ಯವಿವಾಹ, ಪುನರ್ ವಿವಾಹದ ತಡೆ, ಬಹು ವಿವಾಹ, ದೇವದಾಸಿ ಪದ್ಧತಿ, ರಜಪೂತ ನಾರಿಯರ ಜವಾಹರ್ ವ್ರತ ಹಾಗೂ ಸತಿ ಸಹಗಮನ ಪದ್ಧತಿಯಂತಹ ಅನಿಷ್ಟ ಪದ್ದತಿಗಳು ನಾರಿಯನ್ನು ಬಂಧಿಸಿದ್ದವು. ಆದರೂ ಈ ಸಮಯದಲ್ಲಿ ಅನೇಕ ವೀರ ನಾರಿಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಮೆರೆದಿದ್ದಾರೆ. ರಜಿಯಾ ಸುಲ್ತಾನ್, ರಾಣಿ ದುರ್ಗಾವತಿ, ರಾಣಿ ನೂರ್ ಜಹಾನ್, ಶಿವಾಜಿಯ ತಾಯಿ ಜೀಜಾಬಾಯಿ ಮುಂತಾದ ಮಹಿಳೆಯರು ನಾರಿ ಕುಲಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ. ಮೀರಾಬಾಯಿಯು ಭಕ್ತಿ ಇತಿಹಾಸದಲ್ಲಿ ಸ್ವತ: ಇತಿಹಾಸವಾಗಿದ್ದಾಳೆ.
ಬ್ರಿಟಿಷರ ರಾಜ್ಯಾವಧಿಯಲ್ಲಿ ನಾರಿಯರ ವಿಕಾಸವು ಮಂದಗತಿಯನ್ನು ಪಡೆಯಿತು. ನಾರಿಯರಿಗೆ ಶಿಕ್ಷಣ ಪಡೆಯುವ ಅವಕಾಶ ದೊರೆತರೂ ಅಷ್ಟಾಗಿ ಮುಂದುವರೆಯಲಿಲ್ಲ. ಜಾನ್ಸಿ ರಾಣಿ ಲಕ್ಷ್ಮೀಬಾಯಿಯು ವೀರಾವೇಶದಿಂದ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಮಣಿಸಿದಳು. ಸ್ವಾತಂತ್ರ ಹೋರಾಟದಲ್ಲಿ ಅನಿಬೆಸೆಂಟ್, ವಿಜಯಲಕ್ಷ್ಮಿ ಪಂಡಿತ್, ಕಸ್ತೂರಿಬಾಯಿ ಮುಂತಾದ ಧೀರ ಮಹಿಳೆಯರು ಭಾಗವಹಿಸಿದರು, ಲಕ್ಷ್ಮಿ ಸಹಗಲ್, ಸುಭಾಷ್ ಚಂದ್ರ ಬೋಸ್ ರವರ ಸೇನೆಯ ಕ್ಯಾಪ್ಟನ್ ಆಗಿದ್ದರು.
ಸ್ವತಂತ್ರ ಭಾರತದ ಸಂವಿಧಾನದಲ್ಲಿ ನಾರಿಗೆ ಗೌರವ, ರಕ್ಷಣೆ, ಅಧಿಕಾರಗಳು ಪುರುಷನ ಸಮಾನ ದೊರೆತರೂ ಅನಕ್ಷರತೆ, ಪುರಾತನ ರೂಢಿವಾದಿ ವಿಚಾರಗಳು, ದುರ್ಬಲ ಸಾಮಾಜಿಕ ವ್ಯವಸ್ಥೆಯ ಕಾರಣ ಅವಕಾಶ ಹಾಗೂ ಅಧಿಕಾರದ ಲಾಭವನ್ನು ಸಂಪೂರ್ಣವಾಗಿ ಮಹಿಳೆಯು ಪಡೆಯುವಲ್ಲಿ ಅಸಫಲಳಾದವು. ಆದರೆ ಸ್ವತಂತ್ರ ಭಾರತದ ಇತಿಹಾಸವು ನಾರಿಯರ ಗೌರವ ಕಥೆಗಳಿಂದ ತುಂಬಿದೆ. ಶ್ರೀಮತಿ ಇಂದಿರಾಗಾಂಧಿಯವರು 1966 ರಲ್ಲಿ ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾದರು. ಶ್ರೀಮತಿ ಸುಚೇತ ಕೃಪಲಾನಿ, ಉತ್ತರಪ್ರದೇಶದ ಮುಖ್ಯಮಂತ್ರಿಯಾದರೆ, ಕಿರಣ್ ಬೇಡಿಯವರು ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಕಮಲ್ಜಿತ್ ಸಿಂಧೂರವರು ಏಷ್ಯನ್ ಕ್ರೀಡಾಕೂಟದಲ್ಲಿ ಪ್ರಥಮ ಗೋಲ್ಡ್ ಪದಕ ಪಡೆದರು. ಬಚೇಂದ್ರಿ ಪಾಲ್ ಎವರೆಸ್ಟ್ ಏರಿದ ಭಾರತದ ಪ್ರಥಮ ಮಹಿಳೆಯಾದರು. ಮದರ್ ತೆರೆಸಾ ನೋಬೆಲ್ ಪ್ರಶಸ್ತಿಯನ್ನು ಪಡೆದರು. ಫಾತೀಮಾ ಬೀಬಿಯವರು ಸುಪ್ರೀಂ ಕೋರ್ಟನಲ್ಲಿ ಪ್ರಥಮ ಮಹಿಳಾ ಜಡ್ಜ್ ಆದರು. ಮೇಧಾ ಪಾಟ್ಕರ್ ಸಾಮಾಜಿಕ ಸೇವೆಯಲ್ಲಿ ಕಾರ್ಯಕರ್ತೆಯಾಗಿ ತಮ್ಮನ್ನು ತೊಡಗಿಸಿಕೊಂಡರು. ಹೀಗೆ ಪುರುಷ ಪ್ರಧಾನ ಸಾಮಾಜಿಕ ವಿಚಾರಕ್ಕೆ ಸವಾಲೊಡ್ಡಿ ಮಹಿಳೆಯರು ತಮ್ಮ ಬುದ್ಧಿವಂತಿಕೆ, ಮುಂದಾಳತ್ವದ ಯೋಗ್ಯತೆ ಹಾಗೂ ಸಾಮರ್ಥ್ಯದ ಪರಿಚಯವನ್ನು ನೀಡಿದ್ದಾರೆ, ತಮ್ಮ ಹೆಸರನ್ನು ಸ್ವರ್ಣಿಮ ಅಕ್ಷರಗಳಲ್ಲಿ ಸದಾ ಕಾಲಕ್ಕಾಗಿ ಅಂಕಿತಗೊಳಿಸಿದ್ದಾರೆ.
ಸ್ವತಂತ್ರ ಭಾರತದ ರಜತ ಮಹೋತ್ಸವದ ನಂತರ ವೈಜ್ಞಾನಿಕವಾಗಿ ಮುಂದುವರೆದ ಭಾರತದಲ್ಲಿ ನಾರಿಯು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಉನ್ನತ ಶಿಕ್ಷಣ ಪಡೆದ ಇಂದಿನ ನಾರಿಯು ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಹಾಗೂ ಅಂತರಿಕ್ಷ ಯಾತ್ರಿಯಾಗಿ ಸರ್ವೋನ್ನತ ಸ್ಥಾನದಲ್ಲಿ ಆಸೀನಳಾಗಿದ್ದಾಳೆ.
ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ, ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ನಿಸ್ವರ, ಹೆಣ್ಣನ್ನು ಗೌರವಿಸಿ, ಹೆಣ್ಣು ಮಕ್ಕಳನ್ನು ರಕ್ಷಿಸಿ. ನೇರಳೆ, ಹಸಿರು ಮತ್ತು ಬಿಳಿ ಬಣ್ಣಗಳು ಅಂತರರಾಷ್ಟ್ರೀಯ ಮಹಿಳಾ ದಿನದ ಬಣ್ಣಗಳಾಗಿವೆ. ನೇರಳೆ ನ್ಯಾಯ ಮತ್ತು ಘನತೆಯನ್ನು ಸೂಚಿಸುತ್ತದೆ. ಹಸಿರು ಭರವಸೆಯನ್ನು ಸಂಕೇತಿಸುತ್ತದೆ ಮತ್ತು ಬಿಳಿ ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ನಾರಿ ಶಕ್ತಿಯನ್ನು ಸೃಷ್ಟಿಯ ಆದಿಶಕ್ತಿ ಎಂದು ಕರೆಯುತ್ತಾರೆ. ನಾರಿಯು ಸಮಾಜದ ಅತ್ಯಂತ ಶ್ರೇಷ್ಠ ಭಾಗವಾಗಿದ್ದಾಳೆ. ನಾರಿ ಸ್ವರ್ಗಕ್ಕೆ ದಾರಿಯಾಗಿದ್ದಾಳೆ. “ಯತ್ರ ನಾರ್ಯಸ್ತು ಪೂಜ್ಯನ್ತೇ ತತ್ರ
ರಮನ್ತೇ ದೇವತಾ: ನಾರಿ ಒಬ್ಬಳು ಕಲಿತರೆ ಶಾಲೆಯನ್ನು ತೆರೆದಂತೆ ಎಂಬ ನಾಣ್ಣುಡಿ ಇದೆ. ನಾರಿಯು ಸಮಾಜದ ಚುಕ್ಕಾಣಿಯನ್ನು ಹಿಡಿದು ಆಭಿವೃದ್ಧಿ ಕಡೆಗೆ ಕರೆದೊಯ್ಯುವ ಸಾಧಕಿಯಾಗಿದ್ದಾಳೆ.
1936
ಸ್ಥಾಪನೆಯಾದ ಬ್ರಹ್ಮಾಕುಮಾರಿ ಸಂಸ್ಥೆಯು ವಿಶೇಷವಾಗಿ ಮಹಿಳೆಯರ ಉನ್ನತಿಗಾಗಿ ಜಾಗತಿಕ ಮಟ್ಟದಲ್ಲಿ ಇರುವ ಏಕೈಕ ಸಂಸ್ಥೆಯಾಗಿದೆ. ಇಂದು 137 ರಾಷ್ಟ್ರಗಳಲ್ಲಿ 8500 ಶಾಖೆಗಳು ಹೊಂದಿದೆ. ಸುಮಾರು 15 ಲಕ್ಷಕ್ಕಿಂತ ಹೆಚ್ಚು ನಿರಂತರ ಸಾಧಕರ ಸೇವೆಯಲ್ಲಿ 60,000 ಸಮರ್ಪಿತ ಕನ್ಯೆಯರು, ಭಗಿನಿಯರು ಕಾರ್ಯನಿರತವಾಗಿದ್ದಾರೆ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಪ್ರತಿವರ್ಷದಂತೆ ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ತನ್ನ ಸಾವಿರಾರು ಶಾಖೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತದೆ. ಈ ವರ್ಷದ ಧ್ಯೇಯವಾಕ್ಯ ದಡಿ “ವಂದೇ ಮಾತರಂ” ನಂತೆ ಮಾತೆಯರ ಮೂಲಕ ಭಾರತ ಸ್ವರ್ಣಮಯ
ಆಗಲಿದೆ . ಸರ್ಕಾರಿ ಮಹಿಳಾ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಮಹಿಳಾ ಸಂಘಟನೆಗಳು, ರೋಟರಿ ಇನ್ನರ್ ವೀಲ್ ಲಯನ್ಸ್ ಕ್ಲಬ್ ಹಾಗೂ ಮಹಿಳಾ ಕಾಲೇಜುಗಳ ಜೊತೆಗೂಡಿ ಸೆಮಿನಾರ್, ವಿಚಾರಗೋಷ್ಠಿ, ಮಹಿಳಾ ಸಪ್ತಾಹ, ಸನ್ಮಾನ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ವರ್ತಮಾನದಲ್ಲಿ 88 ವರ್ಷದ ರಾಜಯೋಗಿನಿ ಬ್ರಹ್ಮಾಕುಮಾರಿ ಚಕ್ರಧಾರಿ ಅಧ್ಯಕ್ಷೆ ಮಹಿಳಾ ವಿಭಾಗ ಇವರ ನೇತೃತ್ವದಲ್ಲಿ ವಿಶ್ವದಾದ್ಯಂತ ಆಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣವನ್ನು ಹರಡುವ ಸೇವೆ ಮಾಡುತ್ತಿದ್ದಾರೆ.
1937 ರಲ್ಲಿ ದಾದಾ ಲೇಖರಾಜ ಅವರ ಮೂಲಕ ನಿರಾಕಾರ ಶಿವ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಾಪನೆ ಮಾಡಿದನು. ಜಗದಂಬೆ ಸರಸ್ವತಿ ಅವರು ತಮ್ಮ ಸರ್ವಸ್ವವನ್ನು ಪ್ರಭುವಿಗೆ ಅರ್ಪಣೆ ಮಾಡಿದರು. 1937 ರ ಅಕ್ಟೋಬರ್ ತಿಂಗಳಲ್ಲಿ ಅವರ ಜೊತೆಗೂಡಿ ಅನ್ಯ ಜ್ಞಾನ ಪಾರಂಗತ ಕನ್ಯೆಯರು, ಮಾತೆಯರು, ಈಶ್ವರೀಯ ಕಾರ್ಯದಲ್ಲಿ ತಮ್ಮ ತನು-ಮನ-ಧನವನ್ನು ಸರ್ಮಪಣೆ ಮಾಡಿ, ಕಾರ್ಯಕಾರಿಣಿ ಸಮಿತಿಯನ್ನು ರಚಿಸಿದರು. ಕನ್ಯೆಯಾಗಿರುವ ಜಗದಂಬೆ ಅವರು ಸುಮಾರು 350ಕ್ಕೂ ಹೆಚ್ಚು ಯಜ್ಞವತ್ಸರೊಗೆ, ಸಾವಿರಾರು ಬ್ರಹ್ಮಾವತ್ಸರಿಗೆ ಮಮತೆಯ ತಾಯಿಯಾಗಿ ಪಾಲನೆ ನೀಡಿ, ಜ್ಞಾನ -ಯೋಗದಿಂದ ದೈವಿ ಗುಣಗಳಿಂದ ಶೃಂಗರಿಸಿ ಯೋಗಿಗಳನ್ನಾಗಿ ಮಾಡಿದರು. ಲೇಖನ –
ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ
ಬ್ರಹ್ಮಾಕುಮಾರಿಸ್ ಮಹಿಳಾ ವಿಭಾಗ, ರಾಜಯೋಗ ಶಿಕ್ಷಣ ತಜ್ಞರು, ಮನೋಬಲ ತರಬೇತುದಾರರು,ಸ್ವಾಮಿ ವಿವೇಕಾನಂದ ರಾಜ್ಯ ರಾಷ್ಟ್ರ ಸದ್ಭಾವನಾ ಪ್ರಶಸ್ತಿ ಪುರಸ್ಕೃತರು, ರಾಜಯೋಗ ಶಿಕ್ಷಣ ಸಂಶೋಧನಾ ಪ್ರತಿಷ್ಠಾನ,ಪ್ರಕಾಶ ಭವನ,

Share This Article
Leave a Comment