ಪಬ್ಲಿಕ್ ಅಲರ್ಟ್ ನ್ಯೂಸ್:-ಸಮ ಸಮಾಜ ನಿರ್ಮಾಣಕ್ಕೆ ಕೈವಾರ ತಾತಯ್ಯ ಅವರ ಸಂದೇಶಗಳು ಸದಾ ಮಾದರಿ: ಶ್ರೀವತ್ಸ
ಮೈಸೂರು, ಮಾ.08(ಕರ್ನಾಟಕ ವಾರ್ತೆ):-
ಕೈವಾರ ತಾತಯ್ಯನವರು 18ನೇ ಶತಮಾನಕ್ಕೆ ಸೇರಿದವರು ಸಮಾಜಕ್ಕೆ ಇವರ ಸಂದೇಶಗಳು ಸಮ ಸಮಾಜ ನಿರ್ಮಾಣ ಮಾಡಲು ಕೈಗೊಂಡಂತಹ ಕೆಲಸ ಕಾರ್ಯಗಳು ಸದಾ ಮಾದರಿ. ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದರೊಂದಿಗೆ ಪ್ರತಿಯೊಬ್ಬರು ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ಅವರು ತಿಳಿಸಿದರು.
ಅವರು ಇಂದು ಕಿರುರಂಗಮoದಿರದಲ್ಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಜಾತಿ ಬೇದಭಾವವಿಲ್ಲದೆ ಅತಿ ಹೆಚ್ಚು ಮಕ್ಕಳು ಅರ್ಚಕರ ವೃತ್ತಿ, ಶಾಸ್ತ್ರೀಯ ಸಂಗೀತ, ಭರತನಾಟ್ಯದಂತಹ ಕಲೆಯ ಕಡೆ ಅತಿ ಹೆಚ್ಚು ಒಲವನ್ನು ತೋರುತ್ತಿದ್ದಾರೆ, ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬ ತಂದೆ ತಾಯರಿಗೂ ಅಭಿನಂದನೆಯನ್ನು ತಿಳಿಸಬೇಕೆಂದು ಹೇಳಿದರು.
ಮಹಾನ್ ವ್ಯಕ್ತಿಗಳ ಕಾರ್ಯಕ್ರಮಕ್ಕೆ ಎಲ್ಲರನ್ನು ಕರೆತರಬೇಕು ಮತ್ತು ಇವರುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡುಲು ಸಾಧ್ಯ ಎಂದು ಹೇಳಿದರು.
ಇಂದಿನ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ: ಸಿ ಎನ್ ಮಂಜೇಗೌಡ
ಜೀವನದಲ್ಲಿ ಶಿಕ್ಷಣಕ್ಕಿಂತ ದೊಡ್ಡದು ಯಾವುದು ಇಲ್ಲ ಮಕ್ಕಳಿಗಿಗೆ ಶಿಕ್ಷಣ ನೀಡಿ, ಜ್ಙಾನ ಗ್ರಹಿಸುವುದರೊಂದಿಗೆ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಮಹಾನ್ ವ್ಯಕ್ತಿಗಳ ಜಯಂತಿಗಳಿಗೆ ಮಕ್ಕಳನ್ನು ಕರೆತನ್ನಿ ಎಂದು ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ಅವರು ಹೇಳಿದರು.
ಕೈವಾರ ತಾತಯ್ಯ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ. ಕೈವಾರ ತಾತಯ್ಯ ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕು ತಾತ್ತಯ್ಯ ನವರ ಬದುಕು ಆದರ್ಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯಾಗಬೇಕು ಎಂದರು. ಸಮಾಜದಲ್ಲಿ ಮಹಾನ್ ವ್ಯಕ್ತಿ ಗಳ ಬಗ್ಗೆ ತಿಳಿದುಕೊಂಡಾಗ ನಮ್ಮಲ್ಲಿರುವ ಲೋಪದೋಷಗಳು ಕಡಿಮೆಯಾಗುತ್ತದೆ ಎಂದರು.
ಕೈವಾರ ತಾತಯ್ಯ ಅವರು ಸಾಕು ತಂದೆ ತಾಯಿಂದ ವಿದ್ಯೆ ಕಲಿತು ಬೆಳೆದು ಬಂದವರು, ಇವರು 1726 ಇಸವಿ ಯಲ್ಲಿ ಜನಿಸಿ 1836 ರಲ್ಲಿ ಸ್ವಯಂ ಪ್ರೇರಿತವಾಗಿ ಪ್ರಾಣ ತ್ಯಾಗಮಾಡಿದರು ಎಂದು ಹೇಳಿದರು.
ಸಾಂಸ್ಕೃತಿಕ ಕಲಿಕೆ ಮಕ್ಕಳಿಗೆ ಬಹಳ ಮುಖ್ಯವಾದದ್ದು ಜನರಿಗೆ ಸಂಸ್ಕೃತಿಯ ಬಗ್ಗೆ ಅತಿ ಹೆಚ್ಚಿನ ಜ್ಞಾನವನ್ನು ತಿಳಿದುಕೊಳ್ಳಬೇಕೆಂದು ಹೇಳಿದರು ಸಮಾಜದಲ್ಲಿ ಹಣ ಮತ್ತು ರಕ್ತ ಯಾವಾಗಲೂ ವಿನಿಮಯವಾಗಬೇಕು ನಾವು ಮಾಡುವ ಕೆಲಸ ಸಮಾಜದ ಶಾಶ್ವತವಾಗಿರಬೇಕೆಂದು ಹೇಳಿದರು.
ಉಪನ್ಯಾಸಕರಾದ ಪ್ರೊ ಹೆಚ್ಎಸ್ ನರಸಿಂಹಯ್ಯ ನವರು ಮಾತನಾಡಿ ಕೈವಾರ ತಾತಯ್ಯನವರು 18ನೇ ಶತಮಾನದವರು ಇವರು ಬಲಿಜ ಜನಾಂಗಕ್ಕೆ ಸೇರಿದವರು ಇವರ ಮೂಲ ಹೆಸರು ನಾರಾಯಣ, ವಿಜಯನಗರ ಸಾಮ್ರಾಜ್ಯದಲ್ಲಿ ವಾಸವಿದ್ದರೂ ವಿಜಯನಗರ ಸಾಮ್ರಾಜ್ಯ ಪತನದ ನಂತರ ಅಲ್ಲಿಂದ ವಲಸೆ ಹೊರಟರು ಮುಂದೆ ಅವರು ತಮ್ಮ ಜೀವನದಲ್ಲಿ ಬಳೆ ಮಾರುವ ವೃತ್ತಿಯಿಂದ ಜೀವ ಮುಂದೆ ನಡೆಸುತ್ತಿದ್ದರು. ಬಲಿಜ ಸಮುದಾಯದವರು ಅತಿ ಹೆಚ್ಚು ಶಿಕ್ಷಣ ಪಡೆಯಬೇಕು ಎಂದು ಒತ್ತು ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಸುದರ್ಶನ್ ಅಂಕಣಕಾರ ಗುಬ್ಬಿ ಗೂಡು ರಮೇಶ್, ಗಣ್ಯರಾದ ವೆಂಕಟೇಶ್, ಮೀನಾ ತೂಗುದೀಪ್, ಶ್ರೀನಾಥ್ ಬಾಬು, ವಿಜಯ ಸಂಪತ್ ಕುಮಾರ್, ಕೆ ಸಿ ಪ್ರಕಾಶ್ ಗೋಪಾಲಕೃಷ್ಣ, ಆರ್ ಎನ್ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು
