ಪಬ್ಲಿಕ್ ಅಲರ್ಟ್ ನ್ಯೂಸ್:-ಹಂಚ್ಯಾ ಕೃಷಿ ಪತ್ತಿನ ಸೊಸೈಟಿ ಕಾಂಗ್ರೆಸ್ ವಶ
ಮೈಸೂರು: ಮೈಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತ ಜೋಗಿಸಿದ್ದಯ್ಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಸಂಘ ಕಾಂಗ್ರೆಸ್ ವಶವಾಯಿತು.
ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆರು ಮಂದಿ ಹಾಗೂ ಜೆಡಿಎಸ್ ಬೆಂಬಲಿತ 5 ಮಂದಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ
ಕಾಂಗ್ರೆಸ್ ಬೆಂಬಲಿತ ಜೋಗಿಸಿದ್ದಯ್ಯ ಎರಡನೇ ಅವಧಿಗೆ ಮತ್ತೊಮ್ಮೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಕಮಲಮ್ಮ ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಕಾಳೇಗೌಡ, ಯೋಗೇಶ್,ಶಂಕರಪ್ಪ, ನಿಂಗಮ್ಮ ನೂತನ ಅಧ್ಯಕ್ಷರ ಅಭಿನಂದಿಸಿದರು. ಇನ್ನೂ ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ಬೋರೇಗೌಡ, ತಮ್ಮೇಗೌಡ, ಕುಮಾರ್(ಗಳಿಗರಹುಂಡಿ), ವೆಂಕಟಶೆಟ್ಟಿ, ಮಹದೇವಪ್ಪ ನಿರ್ದೇಶಕರು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಜೋಗಿಸಿದ್ದಯ್ಯ ಮಾತನಾಡಿ ಎಲ್ಲಾ ಸಮುದಾಯದವರ ಸಹಕಾರದಿಂದ ಅಧ್ಯಕ್ಷನಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದೇನೆ. ಸೊಸೈಟಿ ಒಂದು ಸ್ವಂತ ಕಟ್ಟಡ ಬೇಕೆಂದು ಹೋರಾಟ ಮಾಡಿ ಸಿದ್ದರಾಮಯ್ಯ ಅವರಿಂದ ಜಾಗ ಖರೀದಿ ಪ್ರಕ್ರಿಯೆ ಮುಗಿದಿದೆ. ಈಗ ಕಟ್ಟಡ ಕಟ್ಟಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಮುನ್ನಡೆದು ಸಂಘವನ್ನು ಸೂಪರ್ ಸಂಘ ಮಾಡಲು ಶ್ರಮಿಸುತ್ತೇನೆಂದು ಹೇಳಿದರು.
ಹಂಚ್ಯಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಸಿ.ಕುಮಾರಸ್ವಾಮಿ ಮಾತನಾಡಿ, ಇದೇ ಮೊದಲ ಬಾರಿಗೆ ಸೊಸೈಟಿ ಚುನಾವಣೆ ನಡೆದು ಆರು ಮಂದಿ ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸಿದ್ದಿವಿ. ಇದರಲ್ಲಿ ಕಾಳೇಗೌಡ, ಯೋಗಿ, ನಿಂಗಮ್ಮ ಅವರಿಗೆ ಐದು ವರ್ಷಗಳ ಅವಧಿ ಹಂಚಿಕೆ ಮಾಡಿ ತೀರ್ಮಾನಿಸಲಾಗಿದೆ. ಅದರಂತೆ ಎಲ್ಲರೂ ಒಮ್ಮತದಿಂದ ಮೊದಲ ಅವಧಿಗೆ ಜೋಗಿಸಿದ್ದಯ್ಯರಿಗೆ ಅಧ್ಯಕ್ಷ ಸ್ಥಾನ ನೀಡಿದ್ದು, ಯಾರೇ ಅಧ್ಯಕ್ಷರಾದರೂ ಅವರು ಕಾಂಗ್ರೆಸ್ ನವರೇ ಆಗಿರಲಿದ್ದಾರೆ. ಕಾಂಗ್ರೆಸ್ ಪಕ್ಷ ಈ ಭಾಗದಲ್ಲಿ ಸಿಎಂ ಸಿದ್ದರಾಮಯ್ಯನವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ಸಶಕ್ತವಾಗಿದೆ ಎಂಬುದು ಈ ಮೂಲಕ ಸಾಬೀತು ಮಾಡಿದ್ದೇವೆಂದು ಹೇಳಿದರು.
ಗ್ರಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಸದಸ್ಯರಾದ ಎಚ್.ಡಿ.ಚೆನ್ನಯ್ಯ ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಸೊಸೈಟಿಯಲ್ಲಿ ಈಬಾರಿ ಜೆಡಿಎಸ್ ಬಿಜೆಪಿ ಮೈತ್ರಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದು ಕಾಂಗ್ರೆಸ್ ನ 6 ಅಭ್ಯರ್ಥಿಗಳು ಗೆಲುವುಸಾಧಿಸಿ ಎರಡನೇ ಬಾರಿಗೆ ಕಾಂಗ್ರೆಸ್ ನವರೇ ಅಧ್ಯಕ್ಷರಾಗಿದ್ದಾರೆ. ಆ ಮೂಲಕ ಸಿದ್ದರಾಮಯ್ಯನವರ ಗ್ಯಾರಂಟಿ ಮೆಚ್ವಿ ಈ ಭಾಗದ ಜನತೆ ಕಾಂಗ್ರೆಸ್ ಹೆಚ್ಚು ನಿರ್ದೇಶಕರ ಗೆಲ್ಲಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಬಲ ಪಡಿಸುವ ಕೆಲಸ ಮಾಡಿದ್ದಾರೆಂದರು.
ಸೊಸೈಟಿ ಮೇಲ್ವಿಚಾರಕ ಗಿರೀಶ್, ಕಾಂಗ್ರೆಸ್ ಮುಖಂಡ
ಕೆ.ಎಸ್.ಸಣ್ಣಸ್ವಾಮಿ, ಹಂಚ್ಯಾ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಚ್.ಎಸ್.ರಾಮಚಂದ್ರ, ಮಾಜಿ ಸದಸ್ಯರಾದ ಬಸವರಾಜು, ಗ್ರಾಮದ ಮುಖಂಡರಾದ ಶ್ರೀನಿವಾಸ್ ಗೌಡ, ಹಂಚ್ಯಾ ಪಿಎಸ್ ಸಿಸಿಎಸ್ ಮಾಜಿ ಅಧ್ಯಕ್ಷ ಕುಮಾರ್, ಹಂಚ್ಯಾಗ್ರಾಮದ ಹಾಲಿನ ಡೇರಿ ಅಧ್ಯಕ್ಷ ನಾಗೇಂದ್ರಮೂರ್ತಿ, ಮುಖಂಡರಾದ ಗಳಿಗರಹುಂಡಿ ಸುರೇಶ್, ಸಾತಗಳ್ಳಿ ಪರಮೇಶ್, ಮೇಷ್ಟ್ರು ನಂಜಪ್ಪ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಗೌಡ, ಕೆಂಪೇಗೌಡ ಯುವಶಕ್ತಿವೇದಿಕೆ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸ್ವಾಮಿಗೌಡ, ಶಿವಮಾಧು, ತಿಮ್ಮೇಗೌಡ, ನಾಗರಾಜ್, ದೇವರಾಜ್, ಮಂಜು ಸಾತಗಳ್ಳಿ, ರಮ್ಮನಹಳ್ಳಿ ಶಿವು, ನಾಡಹನಹಳ್ಳಿ ಚೇತನ್, ಕ್ಯಾತಮಾರನಹಳ್ಳಿ ಯೋಗೇಶ್, ಪ್ರಸನ್ನ, ಚೇತನ್ ಇನ್ನಿತರರು ಉಪಸ್ಥಿತರಿದ್ದರು.
ಹಂಚ್ಯಾ ಕೃಷಿ ಪತ್ತಿನ ಸೊಸೈಟಿ ಕಾಂಗ್ರೆಸ್ ವಶ
Leave a Comment
Leave a Comment
