ಸರ್ದಾರ ವಲ್ಲಭಭಾಯಿ ಪಟೇಲ ನಗರದಲ್ಲಿ ಮೇ 7 ರಿಂದ 13 ರವರೆಗೆ ಬಾಲ ವಿಕಾಸ ಸಂಭ್ರಮದ ಬೇಸಿಗೆ ಶಿಬಿರ ಮೈಸೂರು

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸರ್ದಾರ ವಲ್ಲಭಭಾಯಿ ಪಟೇಲ ನಗರದಲ್ಲಿ ಮೇ 7 ರಿಂದ 13 ರವರೆಗೆ ಬಾಲ ವಿಕಾಸ ಸಂಭ್ರಮದ ಬೇಸಿಗೆ ಶಿಬಿರ ಮೈಸೂರು
ನಗರದ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಸರದಾರ ವಲ್ಲಭ ಭಾಯಿ ಪಟೇಲ್ ನಗರ 4 ನೇ ಮುಖ್ಯ ರಸ್ತೆ ಕರ್ನಾಟಕ ಬ್ಯಾಂಕ್ ಬಳಿಇರುವ ಬ್ರಹ್ಮಾಕುಮಾರಿ ಸೇವಾ ಕೇಂದ್ರದಲ್ಲಿ
ದಿನಾಂಕ ಮೇ 7 ರಿಂದ 13 ರವರೆಗೆ
ಬೆಳಗ್ಗೆ 10 ರಿಂದ ಮಧ್ಯಾಹ್ನ 2.30 ವರೆಗೆ,
6 ರಿಂದ 16 ವಯಸ್ಸಿನ ಮಕ್ಕಳಿಗೆ ಬಾಲ ವಿಕಾಸ, ಸಂಭ್ರಮಮದ
ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ರಶ್ಮೀಜೀ ತಿಳಿಸಿದ್ದಾರೆ. ಶಿಬಿರದ ವಿಶೇಷತೆ, ಎಳೆಯ ಮಕ್ಕಳ ಮನಸ್ಸಿಗೆ ಏಕಾಗ್ರತೆ ಹಾಗೂ ದೃಢತೆ ಜಾಗೃತಿಗೊಳಿಸುವುದು, ಪರಿಸ್ಥಿತಿಗಳಲ್ಲಿ ಕುಗ್ಗದೆ ಧೈರ್ಯವನ್ನು ಧರಿಸುವುದು, ಬದಲಾದ ಪೀಳಿಗೆಗೆ ಶ್ರೇಷ್ಠ ಮೌಲ್ಯಗಳನ್ನು ತುಂಬುವುದು, ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವುದು, ಪರಸ್ಪರದಲ್ಲಿ ಏಕತೆಯ ಭಾವನೆ ಮೂಡಿಸುವುದು, ಆಧ್ಯಾತ್ಮಿಕತೆಯಿಂದ ನವರಾಷ್ಟ್ರ, ಯುವರಾಷ್ಟ್ರ, ಸಮೃದ್ಧ ರಾಷ್ಟ್ರ, ಕಟ್ಟುವುದು, ಮೌಲ್ಯ ಭರಿತ ಆಟಗಳು, ರಾಜಯೋಗ ಧ್ಯಾನ, ಉಲ್ಲಾಸವನ್ನು ಹೆಚ್ಚಿಸುವ ಚಟುವಟಿಕೆಗಳು, ವ್ಯಾಯಾಮ,ಧ್ಯಾನ, ಸಕರಾತ್ಮಕ ಚಿಂತನೆ, ಸ್ವಚ್ಛ ಮನಸ್ಸು, ಸ್ವಚ್ಛ ಜೀವನದಿಂದ ಸ್ವಚ್ಛ ಭಾರತ,ಇತ್ಯಾದಿ,
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9900264937 7899820430

Share This Article
Leave a Comment