ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರು ಜಿಲ್ಲೆ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಂಗಳೂರಿನ ಶ್ರೀ ಕಲ್ಕಿ ಗುರುಗಳಾದ ಜನಾರ್ದನ್ ರವರು ಭೇಟಿ ನೀಡಿ ವಿಶೇಷ ದರ್ಶನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು
ಅವರು ಮಂಡ್ಯ ಜಿಲ್ಲೆ ತುಬಿನಕೆರೆ ಸಮೀಪ ಇರುವ ಅವರ ಸ್ವಂತ ಜಾಗದಲ್ಲಿ ಶ್ರೀ ರಾಮಾನುಜಚಾರ್ಯರವರ 40 ಆಡಿ ಬೃಹತ್ ಪ್ರತಿಮೆ ಕಾಮಗಾರಿಯನ್ನು ನವೆಂಬರ್ ತಿಂಗಳಲ್ಲಿ ನಡೆಸಲಾಗುವುದು ಈಗಾಗಲೇ ಕಾರ್ಯ ಚಟುವಟಿಕೆ ಆರಂಭವಾಗಿದ್ದು ಬೆಂಗಳೂರು ಮೈಸೂರು ಮುಖ್ಯ ರಸ್ತೆಯಲ್ಲಿ ಲಕ್ಷಾಂತರ ಭಕ್ತರಿಗೆ ಶ್ರೀ ರಾಮಾನುಜಾಚಾರ್ಯರವರ ಪ್ರತಿಮೆ ದರ್ಶನವಾಗಲಿದ್ದು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾದ ಮೇಲುಕೋಟೆ ಶ್ರೀರಂಗಪಟ್ಟಣ ಮೈಸೂರು. ಹೋಗುವ ಭಕ್ತರಿಗೆ ವಿಶೇಷವಾಗಿ ಎಸಿ ಬಸ್ ವ್ಯವಸ್ಥೆ. ವಸತಿ ಸೌಕರ್ಯ. ಮೂಲಭೂತ ಸೌಕರ್ಯಗಳು ವ್ಯವಸ್ಥೆಯನ್ನು ಮಾಡಲಾಗುವುದು ವಿಷ್ಣುವಿನ ದೇವಾಲಯ. ಲೈಬ್ರರಿ ಧ್ಯಾನ ಪ್ರಾರ್ಥನ ಮಂದಿರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ನಂತರ ಪೌರಾಣಿಕ ಹಿನ್ನೆಲೆಯಲ್ಲಿ ಉಲ್ಲೇಖಿತವಾಗಿರುವ ಕಲ್ಕಿ ಎಂಬ ವ್ಯಕ್ತಿಯೇ ಜನಾರ್ಧನ್ ರವರು ಎಂದು ಮಾಧ್ಯಮ ಸಲಹೆಗಾರ ಡಾ. ಯೋಗೇಶ್ ರವರು ಮಾತನಾಡಿದರು ಕಳೆದ ಒಂದು ತಿಂಗಳಿಂದ ಇವರ ಜೊತೆ ಒಡನಾಟ ಇವರು ಮಾಡುತ್ತಿರುವ ಧಾರ್ಮಿಕ ಸೇವಾ ಕಾರ್ಯಗಳನ್ನು ಗಮನಿಸಿ ಇವರ ಚಿಕ್ಕವಯಸ್ಸಿನ ಅಲ್ಲಿ ಹೋಲಿಕೆ ಆಗುವ ಜಾತಕದ ಪ್ರಕಾರ ಇವರು ನೆರವೇರಿಸುತ್ತಿರುವ ಕೆಲಸ ಕಾರ್ಯಗಳ ಪ್ರಕಾರ ಪೌರಾಣಿಕ ಹಿನ್ನೆಲೆಯಲ್ಲಿ ಉಲ್ಲೇಖಿತವಾಗಿರುವ ಕಲ್ಕಿ ಎಂಬ ವ್ಯಕ್ತಿಯೇ ಶ್ರೀ ಜನಾರ್ಧನ್ ರವರೆ ಎಂದುತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಕಲ್ಕಿ ಗುರುಗಳಾದ ಶ್ರೀ ಜನಾರ್ಧನ್ ರವರು ಮಾಧ್ಯಮ ಸಲಹೆಗಾರ ಡಾ. ಯೋಗೇಶ್ ರವರು ಇದ್ದರು
ಮೈಸೂರು ಜಿಲ್ಲೆ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಂಗಳೂರಿನ ಶ್ರೀ ಕಲ್ಕಿ ಗುರುಗಳಾದ ಜನಾರ್ದನ್ ರವರು ಭೇಟಿ ನೀಡಿ ವಿಶೇಷ ದರ್ಶನ ಮಾಡಿದರು
Leave a Comment
Leave a Comment
