ಗಾಯಕ ಶಾನ್ ಹಾಡಿಗೆ ಕುಣಿದು ಸಂಭ್ರಮಿಸಿದ ಸಂಗೀತ ಪ್ರಿಯರುಹಾಡಿ, ಕುಣಿದು, ಕುಣಿಸಿ ಸಂಭ್ರಮಿಸಿದ ಗಾಯಕ ಶಾನ್

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಗಾಯಕ ಶಾನ್ ಹಾಡಿಗೆ ಕುಣಿದು ಸಂಭ್ರಮಿಸಿದ ಸಂಗೀತ ಪ್ರಿಯರು

ಹಾಡಿ, ಕುಣಿದು, ಕುಣಿಸಿ ಸಂಭ್ರಮಿಸಿದ ಗಾಯಕ ಶಾನ್

ಮೈಸೂರು:- ಅ.17(ಕರ್ನಾಟಕ ವಾರ್ತೆ) :- ಕುಡಿನೋಟವೆ ಮನಮೋಹಕ…ಚಾರ್ ಕದಮ್ ಬಸ್ ಚಾರ್ ಕದಮ್… ಕನ್ನಡ, ಹಿಂದೆ ಚಿತ್ರಗೀತೆಗಳನ್ನು ಹಾಡಿ, ಕುಣಿದು ಗಾಯಕ ಶಾನ್ ಅವರು ಪ್ರೇಕ್ಷಕರನ್ನು ತಮ್ಮೊಂದಿಗೆ ಕುಣಿಸಿ ಸಂಭ್ರಮಿಸುವಂತೆ ಮಾಡಿದರು.‌

ದಸರಾ ಮಹೋತ್ಸವ ಅಂಗವಾಗಿ ಶನಿವಾರ ಅರಮನೆ ಆವರಣದಲ್ಲಿ ನಡೆದ “ಮುಂಬೈ ಶಾನ್ ಮತ್ತು ತಂಡ”ದವರ ಸಂಗೀತ ಸಂಜೆ ಕಾರ್ಯಕ್ರಮವು ಸಂಗೀತ ರಸಿಕರನ್ನು ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡಿತು.

ಹುಡುಗಾಟ ಸಿನಿಮಾದ ಏನೋ ಒಂಥರಾ, ಏನೋ ಒಂಥರಾ… ಮಾಣಿಕ್ಯ ಸಿನಿಮಾದ ಜೀನಾ ಜೀನಾ ಯಹಾ.. ಮರ್ನಾ ಮರ್ನಾ ಯಹಾ… ಹಾಗೂ ಓಂ ಶಾಂತಿ ಓಂ…ವೆಲ್ ಕಮ್, ವೆಲ್ ಕಮ್… ಆಶಿಕಿ-2 ಸಿನಿಮಾದ ಹಮ್ ತೆರೆ ಬಿನ್ ಅಬ್ ರಹ್ ನಹೀಂ ಸಕತೆ…ಸಾವರಿಯಾ‌ ಸಿನಿಮಾದ ಜಬ್ಸ್ ತೇರೆ ನೈನ… ಹಾಗೂ ದಿಲ್ ಕ್ಯಾ ಕರೆ… ಗೀತೆಗಳನ್ನು ಹಾಡಿ ಮನಸೂರೆಗಳಿಸಿದರು.

ಗಾಯಕರಾದ ಉದಿತ್ ನಾರಾಯಣ್, ಅರ್ಜಿತ್ ಸಿಂಗ್, ಸೋನು ನಿಗಮ್ ಅವರ ಧ್ವನಿ ಅನುಕರಿಸಿ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪ್ರತಿ ಹಾಡಿಗೂ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಮೂಲಕ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್ ಅವರು ಗಾಯಕ ಶಾನ್ ಅವರನ್ನು ಅಭಿನಂದಿಸಿದರು.

Share This Article
Leave a Comment