ಅ.೨ಕ್ಕೆ ಕೃತಕ ಅಂಗಾಂಗಳ ವಿತರಣೆ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ, ಆರ್‌ಬಿಐ ನೋಟು ಮುದ್ರಣ ಘಟಕ, ಆಶ್ರಯ್ ಸೇವಾ ಸಂಸ್ಥಾನ್, ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ಗಳ ಸಂಯುಕ್ತಾಶ್ರಯದಲ್ಲಿ ನ.೨ ರಂದು ನಜರ್‌ಬಾದ್ ಬಳಿಯ ಸಮತ ಭವನ್ ಪೃಥ್ವಿ ವರ್ಲ್ಡ್ನಲ್ಲಿ ವಿಶೇಷ ಚೇತನರಿಗೆ ಮಾಡ್ಯುಲರ್ ಕೃತಕ ಅಂಗಗಳ ಕೈ, ಕಾಲಿನ ಅಳತೆ ಪಡೆಯಲಾಗುವುದು ಎಂದು ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌ಕುಮಾರ್ ಬನ್ಸಾಲಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅಂದು ಬೆಳಗ್ಗೆ ೮ ರಿಂದ ಸಂಜೆ ೬ ರವರೆಗೆ ಅಳತೆ ಪಡೆದು, ಮುಂದಿನ ೪೫ ದಿನಗಳೊಳಗೆ ಕೃತಕ ಕೈ, ಕಾಲು ವಿತರಿಸಲಾಗುವುದು. ಪ್ರತಿ ವರ್ಷ ಈ ಸೇವಾ ಕಾರ್ಯ ಹಮ್ಮಿಕೊಳ್ಳುತ್ತಿದ್ದು, ಸುಮಾರು ೨೦೦ ಮಂದಿ ಈ ಬಾರಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ವಿಶೇಷ ಚೇತನರಿಗೆ ಅಗತ್ಯವಾಗಿರುವ ಕೃತಕ ಕೈ ಕಾಲುಗಳ ಅಳತೆ ಈ ವೇಳೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.
ಎಸ್. ಪ್ರಮೀಳ, ಗೋಲ್ಡನ್ ಸುರೇಶ್, ಎಂ.ಎಂ. ರಮೇಶ್, ರಾಜಶೇಖರ್ ಹಾಗೂ ಇನ್ನಿತರರು ಇದ್ದರು.

Share This Article
Leave a Comment