ಪಬ್ಲಿಕ್ ಅಲರ್ಟ್
ಮೈಸೂರು: ಪರಿಶಿಷ್ಟ ಜಾತಿಗೆ ಸೇರಿದ ಹೊಲೆಯ ಮತ್ತು ಮಾದಿಗ ಸಮುದಾಯಗಳನ್ನು ಬೇರ್ಪಡಿಸಿ ಶಾಶ್ವತ ಶತ್ರುಗಳನ್ನಾಗಿ ಮಾಡಲು ನೂರಾರು ಕೋಟಿ ರೂ. ಗಳನ್ನು ಖರ್ಚು ಮಾಡಿ ಷಡ್ಯಂತರ ನಡೆಸಲಾಗುತ್ತಿದೆ ಎಂದು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಮೈಸೂರು ವಿಶ್ವವಿದ್ಯಾನಿಲು ಸಂಶೋಧಕರ ಸಂಘ ಮತ್ತು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಾಗ,ಮಹಾರ್, ಹೊಲೆಯ,ಛಲವಾದಿ ಸಮುದಾಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನಲೆ ಕುರಿತ ಒಂದು ದಿನದ ವಿಚಾರ ಸಂಕಿರಣದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ನಾವೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಋಣದ ಮಕ್ಕಳು, ಭಾರತ ದೇಶದ ಪ್ರತಿಯೊಬ್ಬ ಪ್ರಜೆ ಬೆಳಿಗ್ಗೆಯಿಂದ ಸಂಜೆವರೆಗೆ ಏನೆಲ್ಲಾ ಮಾಡುತ್ತಾನೆ, ಅನುಭವಿಸುತ್ತಾನೆ ಅದಕ್ಕೆಲ್ಲಾ ಅಂಬೇಡ್ಕರ್ ಕಾರಣ ಎಂದು ಪಶ್ಚಿಮ ಬಂಗಾಳದ ಮುಖ್ಯ ನ್ಯಾಯಾಧೀಶ ಸಿ.ಎಂ.ಚಾಂಗ್ಲಾ ಅವರು ಹೇಳಿದ್ದಾರೆ. ನಮ್ಮ ಸಹೋದರರಿಗೆ ಇದೆಲ್ಲಾ ಗೊತ್ತಾಗಬೇಕಿತ್ತು. ಆದರೆ ಅವರುಗಳು ತಮ್ಮ ಮೆದುಳನ್ನು ಮಾರಿಕೊಂಡಿದ್ದಾರೆ. ಕೇಂದ್ರದಿಂದ ನಮ್ಮಿಬ್ಬರನ್ನು ಬೇರ್ಪಡಿಸಿ ಶಾಶ್ವತವಾಗಿ ಶತೃಗಳನ್ನಾಗಿ ಮಾಡಲು ನೂರಾರು ಕೋಟಿ ಖರ್ಚುಗಳನ್ನು ಮಾಡಿ ಷಡ್ಯಂತ್ರ ಮಾಡಲಾಗುತ್ತಿದೆ. ಇದು ಭಾರತದ ವಿಶ್ವವಿದ್ಯಾನಿಲಯಗಳಲ್ಲೇ ವ್ಯವಸ್ಥಿತವಾಗಿ ನಡೆಯುತ್ತಿದೆ. ಅದಕ್ಕಾಗಿಯೇ ಮೈಸೂರು ವಿ.ವಿ. ಪ್ರೊಫೆಸರ್ ಒಬ್ಬ ಒಬ್ಬ ಅಂಬೇಡ್ಕರ್ ಬಗ್ಗೆ ಮಾತನಾಡಿದ್ದಾನೆ. ಇದನ್ನು ನಾವು ಸಾಮಾನ್ಯ ಎಂದು ತಿಳಿದುಕೊಳ್ಳಬಾರದು. ಇದು ಮನುವಾದಿಗಳ ಷಡ್ಯಂತರ ಎಂದು ಹೇಳಿದರು.
ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ಮಹರ್ ಸಂವಿಧಾನ ಎಂದು ನಾನು ಕರೆಯುತ್ತೇನೆ. ಮಹರ್ ಸಂವಿಧಾನ ದೇಶವನ್ನು ಸಮೃದ್ಧವಾಗಿ ಮಾಡುತ್ತದೆ ಎಂದು ಖಾಂಡೇಕರ್ ಹೇಳಿದ್ದರು. ಯಾರೂ ಜಾತಿಯಿಂದ ಮುಕ್ತರಾಗಿಲ್ಲ. ನನ್ನನ್ನು ಜಾತಿ ಸ್ವಾಮೀಜಿ ಮಾಡಿದ್ದರೆ, ಧ್ವನಿಯಿಲ್ಲದ ಜಾತಿಗೆ ಧ್ವನಿಯಾಗಿದ್ದೇನೆ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಒಳ ಮೀಸಲಾತಿ ವರದಿಯನ್ನು ಹಳೆಯ ರೋಸ್ಟರ್ ಗಳಂತೆ ಕ್ಯಾಬಿನೆಟ್ ನಲ್ಲಿ ಬಿಡುಗಡೆ ಮಾಡಿಲ್ಲ. ಪ್ರವರ್ಗ ಎ ನಲ್ಲಿ ಇರಬೇಕಾದ ನಾವು ಬಿ ಗೆ ಬಂದಿದ್ದೇವೆ. ಇದು ಅತ್ಯಂತ ಅಪಾಯ. ಸೆಪ್ಟೆಂಬರ್ ನಲ್ಲಿ ಪುನಃ ಸೆನ್ಸಸ್ ಬರುತ್ತಿದೆ ಅದರಲ್ಲಿ ಏನು ಬರೆಸಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ನಿಮ್ಮ ಮೂಲ ಜಾತಿಯನ್ನು ಹೇಳಿಕೊಳ್ಳದಿದ್ದರೆ ನೀವು ಸತ್ತಂತೆ ಎಂದು ಹೇಳಿದರು.
ನೆನಪುಗಳು ಇಲ್ಲದ ಸಮಾಜ ಕನಸುಗಳನ್ನು ಕಟ್ಟಲು ಸಾಧ್ಯವಿಲ್ಲ. ಅಂಬೇಡ್ಕರ್ ಹೇಳಿದಂತೆ ಜಾಗೃತ ಸಮುದಾಯ ಜೀವಂತ ವಾಗಿರುತ್ತದೆ. ಬಾಬಾ ಸಾಹೇಬ್ ರವರನ್ನು ಮರೆತು ಮಾತನಾಡುವವ ಮನುಷ್ಯ ನಾಗಲು ಸಾಧ್ಯವಿಲ್ಲ. ಅದ್ಯಾವನೋ ಯುನಿವರ್ಸಿಟಿ ಫ್ರೋಫೇಸರ್ ಈ ದೇಶದ ನಾಗರಿಕನಾಗಲಾರ ಅಯೋಗ್ಯ ಎಂದು ಹೇಳಿದರು.
ಶಾಸಕ ನರೇಂದ್ರ ಸ್ವಾಮಿ ಮಾತನಾಡಿ, ನಮ್ಮ ಒಗ್ಗೂಡುವಿಕೆ ತಡವಾಗಾದರೂ ಜ್ಞಾನೋದಯವಾಗಿದೆ. ಆದರೆ ಎಲ್ಲೊ ಒಂದು ಕಡೆ ಮತ್ತೆ ದೇಶ ಮನುವಾದದ ಕಡೆಗೆ ಹೋಗುತ್ತಾ ಇದೆ ಅನಿಸುತ್ತಿದೆ. ಯಾಕೆಂದರೆ ನಮ್ಮ ಸಹೋದರ ಸಂಬಂಧಿಗಳಾದ ಮಾದಿಗರನ್ನು ಎತ್ತಿಕಟ್ಟಕಾಗುತ್ತಿದೆ. ಅಸ್ಪೃಶ್ಯ ಸಮಾಜಗಳು ಒಂದಾಗುವ ಸಮಯದಲ್ಲಿ ಮನುವಾದ ಮುಂದೆ ಬಂದಿದೆ. ನಾವೆಲ್ಲಾ ಜಾಗೃತರಾಗಿ ಮನುವಾದನ್ನು ನಾಶ ಮಾಡಬೇಕು. ಸಂವಿಧಾನ ಉಳಿಯ ಬೇಕಾದರೆ ಸಂವಿಧಾನದ ಮೂಲಕ ಅನುಕೂಲ ಪಡೆಯುವ ನಾವುಗಳೆಲ್ಲರು ಒಂದಾಗಬೇಕು ಎಂದು ಕರೆ ನೀಡಿದರು.
ವಿಚಾರ ಸಂಕಿರಣದಲ್ಲಿ ಚಿಂತಕ ವಿಠಲ್ ವಗ್ಗನ್, ಸಾಹಿತಿ ರಘೋತ್ತಮ ಹೂಬ, ಅಕ್ಕ ಐ.ಎ.ಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಡಾ.ಎನ್.ಚಿನ್ನಸ್ವಾಮಿ ಸೋಸಲೆ ವಿಷಯ ಮಂಡನೆ ಮಾಡಿದರು. ಡಾ.ಕೃಷ್ಣಮೂರ್ತಿ ಚಮರಂ, ಹಾರೋಹಳ್ಳಿ ರವೀಂದ್ರ, ಬಿ.ಎಂ.ಲಿಂಗರಾಜು ಪ್ರತಿಕ್ರಿಯೆ ನೀಡಿದರು. ಮಹೇಶ್ ಇರಸವಾಡಿ, ರಾಘವೇಂದ್ರ ಅಪುರ ಗೋಷ್ಠಿಗಳ ನಿರ್ವಹಣೆ ಮಾಡಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ನಿವೃತ್ತ ಇಂಜಿನಿಯರ್ ಟಿ.ಆರ್.ಶಿವರಾಮು, ಮಾಜಿ ಮೇಯರ್ ಪುರುಷೋತ್ತಮ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೋಟ್:
ಮೀಸಲಾತಿ ಪಟ್ಟಿಯಲ್ಲಿ ಹೊಲೆಯ ಜಾತಿ ಎಂದು ನಮೂದಿಸಲು ನಗರ ಪ್ರದೇಶದ ಬಹಳಷ್ಟು ಜನರು ಹಿಂಜರಿದರು. ಇದರಿಂದ ಒಳ ಮೀಸಲಾತಿ ವರದಿಯಲ್ಲಿ ಹಿನ್ನಡೆಯಾಯಿತು. ಒಳಮೀಸಲಾತಿ ಅಂಕಿ ಅಂಶಗಳ ಪ್ರಕಾರ ನಮಗೆ ಸಮಾಧಾನ ಆಗಿಲ್ಲ. ನಮ್ಮ ಮೂಲ ಜಾತಿಯನ್ನು ಸ್ವಾಭಿಮಾನದಿಂದ ಹೇಳಿಕೊಳ್ಳದಿದ್ದರೆ ನಾವು ಇದ್ದೂ ಸತ್ತಂತೆ. ಇದರಿಂದ ಮುಂದಿನ ಪೀಳಿಗೆಗೆ ಬಹಳಷ್ಟು ಅನಾನೂಕೂಲ ಆಗಲಿದೆ.
-ಎ.ಆರ್.ಕೃಷ್ಣಮೂರ್ತಿ, ಶಾಸಕ.