ಪಬ್ಲಿಕ್ ಅಲರ್ಟ್
ಮೈಸೂರು: ಎಲ್ಲರೂ ಅರೋಗ್ಯವಾಗಿರಬೇಕೆಂಬ ಏಕೈಕ ಉದ್ದೇಶದೊಂದಿಗೆ “ಸೆಲಬ್ರೇಷನ್ ಮೈಸೂರು” ಎಂಬ ಹೆಸರಿನಲ್ಲಿ ಭಾನುವಾರ ನಡೆದ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದು ನಿಜಕ್ಕೂ ಖುಷಿ ನೀಡಿತು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೈಸೂರಿನಲ್ಲಿ ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾಗಿ ಅಲ್ಲೇ ಕೊನೆಗೊಂಡ 10ಕಿ. ಮೀ., ಅರ್ಧ ಕಿ.ಮೀ ಮ್ಯಾರಥಾನ್ ನಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಂತರ ಪ್ರತಿಕ್ರಿಯಿಸಿದರು.
ಮ್ಯಾರಥಾನ್ ದೈಹಿಕ ಶಕ್ತಿಗೆ ಮಾತ್ರವಲ್ಲ,ಮಾನಸಿಕ ವ್ಯಕ್ತಿತ್ವ ವಿಕಸನ ಸಹಕಾರಿಯಾಗುತ್ತದೆ. ನಿತ್ಯವೂ ನಾನು ಜಾಗಿಂಗ್, ದೈಹಿಕ ವ್ಯಾಯಾಮ ಮಾಡುತ್ತೇನೆ. ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ನಮ್ಮ ಮೈಸೂರು ಆಯುರ್ವೇದ ಎಂಬ ಮಹತ್ಚದ ಕೊಡುಗೆ ನೀಡಿದೆ. ಈಗ ಯೋಗ ವಿಶ್ವಮಟ್ಟದಲ್ಲಿಯೂ ಮನ್ನಣೆ ಪಡೆದುಕೊಂಡಿದೆ. ಇದು ಆರೋಗ್ಯ ವೃದ್ಧಿಸುವ ಮತ್ತೊಂದು ಕ್ರಮವಾಗಿದೆ ಎಂದರು.
ಯುವಕರು ಈಗ ಮ್ಯಾರಥಾನ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ನೋಡಿ ಖುಷಿಯಾಯಿತು. ಪ್ರಧಾನಿ ಆಶಯದಂತೆ ದೇಶದಲ್ಲಿ ಫಿಟ್ ಇಂಡಿಯಾ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಆಗ ನಮ್ಮ ನಾಡು, ದೇಶವು ಆರೋಗ್ಯವಂತವಾಗಿರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಈ ರೀತಿಯ ಆರೋಗ್ಯ ಪೂರಕ ಯೋಜನೆಗಳನ್ನು ಎಲ್ಲರೂ ಕೈಗೊಳ್ಳೋಣ ಎಲ್ಲರೂ ಆರೋಗ್ಯ ಸಿರಿ ಪಡೆಯೋಣ ಎಂದರು.
“ಸೆಲಬ್ರೇಷನ್ ಮೈಸೂರು” ಮ್ಯಾರಥಾನ್ ನಲ್ಲಿ ಭಾಗಿಯಾದ ಯದುವೀರ್
Leave a Comment
Leave a Comment
