ಮೈಸೂರಿನಲ್ಲೂ 20 ನಂದಿನಿ ಶಾಖೆಗಳ ಲೋಕಾರ್ಪಣೆ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ರಾಜ್ಯದಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕಕಾಲಕ್ಕೆ ೫೦೦ ನಂದಿನಿ ಕೇಂದ್ರಗಳನ್ನು ವರ್ಚುವಲ್ ಮೂಲಕ ಬಿಡುಗಡೆಗೊಳಿಸುತ್ತಿರುವ ಬೆನ್ನಲ್ಲೇ ಮೈಸೂರು ಜಿಲ್ಲೆಯಲ್ಲೂ 20  ನಂದಿನಿ ಕೇಂದ್ರಗಳು ಲೋಕಾರ್ಪಣೆ ಗೊಂಡವು.
ಮೈಸೂರಿನ ಹೂಟಗಳ್ಳಿಯ ಹುಣಸೂರು ಮುಖ್ಯರಸ್ತೆಯಲ್ಲಿ  ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು ಸಾಂಕೇತಿಕವಾಗಿ ಕೇಂದ್ರ ಉದ್ಘಾಟಿಸಿದರು. ಸಿಎಂ ಸಹ ವರ್ಚುವಲ್ ನಲ್ಲಿ ಕೇಂದ್ರ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟ ನಿ. ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಕೆ.ಊಮಾಶಂಕರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಂದಿನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ವರ್ಚುವಲ್ ಮೂಲಕ ೫೦೦ ನಂದಿನಿ ಪಾರ್ಲರ್‌ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ನಂದಿನಿ ಉತ್ಪನ್ನಗಳನ್ನೇ ಹೆಚ್ಚು ಬಳಸುವ ಮೂಲಕ ನಂದಿನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರಿಗೆ ನೆರವಾಗಬೇಕೆಂದು ಮನವಿ ಮಾಡುತ್ತೇನೆಂದರು.
ಮತ್ತೋರ್ವ ಅತಿಥಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬಿ.ಗುರುಸ್ವಾಮಿ ಮಾತನಾಡಿ, ಮೈಸೂರು ನಂದಿನಿ ಬೂತ್‌ಗಳಲ್ಲಿ ಅನೇಕ ಉಪಉತ್ಪನ್ನಗಳು ಮಾರಾಟದಲ್ಲಿವೆ. ಗ್ರಾಹಕರು ಅದನ್ನು ಕೊಳ್ಳುವ ಮೂಲಕ ಪ್ರೋತ್ಸಾಹಿಸಬೇಕಿದೆ. ಮುಂದಿನ ದಿನಗಳಲ್ಲಿ ನಂದಿನಿ ಹೆಚ್ಚು ದೇಶ-ವಿದೇಶಗಳಲ್ಲಿಯೂ ಮಾರಾಟ ಮಾಡುವಂತಾಗಲಿ ಎಂದು ಹಾಶಿಸುತ್ತೇನೆ. ಈ ದಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಹೂಟಗಳಲ್ಲಿಯಲ್ಲೂ ಒಂದು ಕೇಂದ್ರ ಉದ್ಘಾಟಿಸಿದ್ದೇವೆಂದರು. ಮೈಮುಲ್‌ ಅಧ್ಯಕ್ಷ ಆರ್‌.ಚೆಲುವರಾಜು, ನಿರ್ದೆಶಕರಾದ ಎ.ಟಿ.ಸೋಮಶೇಖರ,  ಕೆ.ಈರೇಗೌಡ, ಕೆ.ಜಿ.ಮಹೇಶ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ  ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್, ಮಾರುಕಟ್ಟೆ ವ್ಯವಸ್ಥಾಪಕ ಜೈ ಶಂಕರ್‌ ಇನ್ನಿತರರು ಉಪಸ್ಥಿತರಿದ್ದರು.  ಇದೇ ವೇಳೆ ಹನುಮಂತನಗರದಲ್ಲಿಯೂ ನೂತನ ನಂದಿನಿ ಮಳಿಗೆ ಕೇಂದ್ರವನ್ನು ಶಾಸಕ ತನ್ವೀರ್‌ ಸೇಠ್‌ ಲೋಕಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಮಾತ್ರವಲ್ಲದೆ ಸರ್ಕಾರದ ಅಂಗಸಂಸ್ಥೆಯಾದ ಮೈಮುಲ್‌ ಉತ್ಪನ್ನಗಳನ್ನು ಹೆಚ್ಚು ಜನರ ಬಳಸುವಂತೆ ಕೋರಿದರು. 

Share This Article
Leave a Comment