ಸೆ.೨೨ರಿಂದ ಲಕ್ಷ್ಮಿ ದೇವಸ್ಥಾನ ಕಟ್ಟಡ ಉದ್ಘಾಟನೆ

Pratheek
0 Min Read

ಪಬ್ಲಿಕ್ ಅಲರ್ಟ್

ಮೈಸೂರು: ತಾಲ್ಲೂಕಿನ ನಾಗನಹಳ್ಳಿಯಲ್ಲಿ ಸೆ.೨೨ರಿಂದ ೨೪ರವರೆಗೆ ಲಕ್ಷ್ಮಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎನ್.ಎಂ.ಜಗದೀಶ್ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸೆ.೨೨ರಂದು ಬೆಳಿಗ್ಗೆ ೮ರಿಂದ ಪೂಜಾ ಕಾರ್ಯಗಳು ಆರಂಭವಾಗಲಿದೆ. ಸೆ.೨೪ರಂದು ಮಧ್ಯಾಹ್ನ ೧೨ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ನೆರವೇರಿಸುವವರು. ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಪಾಲ್ಗೊಳ್ಳುವರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕಾರ್ಯದರ್ಶಿ ಎನ್.ಎಸ್.ಶ್ರೀಕಂಠು ಪಣ್ಣೇಗಾರ್, ಟ್ರಸ್ಟಿಗಳಾದ ಎನ್.ಕೆ.ಮಹದೇವಪ್ಪ, ಎನ್.ಎಸ್.ಸಿಂಗಪ್ಪ, ನಾ.ನಾ.ಮಹೇಶ್, ವೇಣು, ಯಶೋಧಾ ಇದ್ದರು.

Share This Article
Leave a Comment