ಪಬ್ಲಿಕ್ ಅಲರ್ಟ್
ಮೈಸೂರು:
ಚಾಮರಾಜ ವಿಧಾನ ಸಭಾ ಕ್ಷೇತ್ರದ ವಾರ್ಡ್ ನಂ. 23 ರಲ್ಲಿ ಜಿಲ್ಲಾ ಪಂಚಾಯತ್ ನ 2022-23ನೇ ಸಾಲಿನ ಲೆಕ್ಕ ಶೀರ್ಷಿಕೆ ವಿವೇಕ ಶಾಲೆ (ಪದವಿಪೂರ್ವ ಕಾಲೇಜು) ಯೋಜನೆ ಅಡಿಯಲ್ಲಿ ಅನುಮೋದನೆಯಾಗಿರುವ ಮೈಸೂರು ನಗರದ ದೇವರಾಜ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ದೇವರಾಜ ಮೊಹಲ್ಲಾ ಇಲ್ಲಿ ಅಂದಾಜು 147.30 ಲಕ್ಷಗಳ ವೆಚ್ಚದಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಹರೀಶ್ ಗೌಡ ದೇವರಾಜ ಸರ್ಕಾರಿ ಬಾಲಕಿಯರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಗುದ್ದಲಿಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಬಹುತೇಕ ಬಗೆಹರಿಸಿದ್ದು ಬಾಕಿ ಇರುವ ಕಾಮಗಾರಿಗಳನ್ನು ಸದ್ಯದಲ್ಲೇ ಕೈ ಗೊಳ್ಳಲಾಗುವುದು. ಜೊತೆ ಜೊತೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕಟ್ಟಡಗಳ ಕಾಮಗಾರಿಯನ್ನು ಗುರುತಿಸಿ ಕೆಲಸ ಕೈಗೊಳ್ಳುತ್ತಿದ್ದು ಸರ್ಕಾರಿ ಶಾಲಾ ಕಾಲೇಜುಗಳನ್ನು ಉನ್ನತೀಕರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮ ಹಾಕುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವರಾಜ ಬ್ಲಾಕ್ ಅಧ್ಯಕ್ಷ ಯು.ಎಸ್. ರಮೇಶ್ ರಾಯಪ್ಪ, ಮಾಜಿ ಮೇಯರ್ ಅನಂತು, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ನಾಗಭೂಷಣ್, ವಾರ್ಡ್ ಅಧ್ಯಕ್ಷ ಆನಂದ್, ಮುಖಂಡರಾದ ವೆಂಕಟೇಶ್, ಜ್ಞಾನೇಶ್, ಲೋಕಿ, ಜಗದೀಶ್, ಮಂಜುನಾಥ್, ನಂಜುಂಡಿ ,ಸಂಜಯ್, ಶೇಖರ್,ಮಂಗಳ,ಶಾಂತ, ಲೀಲಾವತಿ, ವಸಂತಮ್ಮ,ರಾಣಿ ಆಶ್ರಯ ಸಮಿತಿ ಸದಸ್ಯರಾದ ಅನಂತ್ ನಾರಾಯಣ, ಇಬ್ರಾಹಿಂ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಮೋಹನ್ ಕುಮಾರಿ ಸೇರಿ ಇತರರು ಉಪಸ್ಥಿತರಿದ್ದರು.
ದೇವರಾಜ ಕಾಲೇಜು ಕೊಠಡಿ ನಿರ್ಮಾಣಕ್ಕೆ ಶಸಕ ಹರೀಶ್ ಗೌಡ ಚಾಲನೆ

Leave a Comment
Leave a Comment