ಪಾಲಿಕೆ ನೌಕರರ ಸಂಘದ ವಾರ್ಷಿಕ ಸಭೆ 

Pratheek
1 Min Read


ಮೈಸೂರು: ಮೈಸೂರು ಮಹಾನಗರಪಾಲಿಕೆ ನೌಕರರ ಸಹಕಾರ ಸಂಘ ೧೦೭ ವರ್ಷಪೂರ್ಣಗೊಂಡು ೯೮ನೇ ಮಹಾಸಭೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪುರಭವನದಲ್ಲಿ ನಡೆದ ಸಂಘದ ನೌಕರರ ವಾರ್ಷಿಕ ಸಭೆಯು ಅಧ್ಯಕ್ಷ ಎಸ್‌.ಯಶೋಧರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಸಂಘವು ಈ ಸಾಲಿನಲ್ಲಿ ೨೬.೪೪ ಕೋಟಿ ವಹಿವಾಟು ನಡೆಸಿದ್ದು,೯,೭೮೦೧೫೪೧ ರೂ. ಸಾಲ ಮತ್ತು ಮುಂಗಡ, ೩,೮೦೦೦೦ ರೂ. ಖಾಯಂ ಠೇವಣಿ ಇಡಲಾಗಿದೆ. ಈ ಸಾಲಿನಲ್ಲಿ ೪೬ಲಕ್ಷದ ೬೧ಸಾವಿರ ೯೧೬ರೂ. ನಿವ್ವಳ ಲಾಭ ಪಡೆದಿದೆ. ಒಟ್ಟು ೭೪೬ಮಂದಿ ಸದಸ್ಯರನ್ನು ಒಳಗೊಂಡಿದೆ ಎಂದರು. 
ವೈಯುಕ್ತಕ ಸಾಲ ೨೫ಸಾವಿರ ಸಾಲ ಅಥವಾ ಜಂಟಿ ಸಾಲವನ್ನು ೩ರಿಂದ ೧೦ಲಕ್ಷದವರೆಗೆ ನೀಡಲು ತೀರ್ಮಾನಿಸಲಾಗಿದೆ. ಸದಸ್ಯರು ಮರಣ ಹೊಂದಿದಾಗ ೩೦ಸಾವಿರ ನೀಡಲಾಗುತ್ತಿದೆ. ೨೦೧೨-೧೩ನೇ ಸಾಲಿನಲ್ಲಿ ಸಹಕಾರ ಇಲಾಖೆಯಿಂದ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಯನ್ನು ಪಡೆದಿದೆ ಎಂದು ತಿಳಿಸಿದರು. 
ಉಪಾಧ್ಯಕ್ಷೆ ಕೆ.ಸುಮಂಗಳ, ಖಜಾಂಚಿ ನಸ್ರುಲ್ಲಾ, ನಿರ್ದೇಶಕರಾದ ಬಿ.ಪ್ರಸಾದ್‌, ಎಚ್‌.ಎಂ.ಶಿವಪ್ರಸಾದ್‌, ಎಂ.ಬಸವಣ್ಣ, ಡಿ.ಸುರೇಂದ್ರ ಕುಮಾರ್‌, ಕೆ.ವಿಶ್ವನಾಥ್, ಎಸ್.‌ಮೈತ್ರಿ, ವಿ.ರಾಜೇಶ್ವರಿ ಬಾಯಿ, ಬಿ.ರಾಜು, ಎನ್‌.ಮಂಜುನಾಥ್‌, ಕಾರ್ಯದರ್ಶಿ ಎನ್‌.ಶಿವಕುಮಾರ್‌, ಅಕೌಂಟೆಂಟ್‌ ಎಂ.ಸಿದ್ದಪ್ಪಾಜಿ, ದ್ವಿ.ದ.ಸ. ಎಂ.ವಿ.ಮೋಹನ್‌ಕುಮಾರ್‌, ಅಟೆಂಡರ್‌ ಎನ್‌.ಸುರೇಶ್‌ ಇನ್ನಿತರರು ಉಪಸ್ಥಿತರಿದ್ದರು. 

Share This Article
Leave a Comment