ಸಹಕಾರ ಯೂನಿಯನ್‌ ಅಧ್ಯಕ್ಷ ಗಾದಿಗೆ ಏರಿದ ಹರೀಶ್‌ಗೌಡ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಹಕಾರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿರುವ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಪ್ರತಿಷ್ಠಿತ ಮೈಸೂರು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಆಯ್ಕೆಯಾದ ಮೊದಲ ಅವಧಿಯಲ್ಲೇ ಅವಿರೋಧ ಅಧ್ಯಕ್ಷರಾಗಿ ದಾಖಲೆ ಬರೆದಿದ್ದಾರೆ. 
ಮೈಸೂರು ಜಿಲ್ಲಾ ಸಹಕಾರ ಯೂನಿಯನ್‌ನ ನೂತನ ಅಧ್ಯಕ್ಷರು ಹಾಗೂ  ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ. ಉಪಾಧ್ಯಕ್ಷರಾಗಿ ಬಿ.ಎನ್. ಸದಾನಂದ ಅವರು ಅವಿರೋಧವಾಗಿ ಆಯ್ಕೆಗೊಂಡರು. ಪ್ರತಿಷ್ಠಿತ ಬ್ಯಾಂಕಿನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ.ಡಿ. ಹರೀಶ್‌ ಗೌಡ ಹಾಗೂ ಬಿ.ಎನ್. ಸದಾನಂದ ಅವರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರು ಜೈಕಾರ ಹಾಕಿ, ಹೂಗುಚ್ಚ ನೀಡಿ ಶುಭ ಕೋರಿದರು.
ನಿರ್ದೇಶಕ ಕೆ.ಎಸ್‌.ಕುಮಾರ್‌, ಶಿವಗಾಮಿ, ಪ್ರಶಾಂತ್‌ ತಾತಾಚಾರ್‌, ಸೋಮಶೇಖರ್‌, ಕೆ.ಊಮಾಶಂಕರ್‌, ಎ.ಟಿ.ಸೋಮಶೇಖರ್‌, ಕುರಹಟ್ಟಿ ಮಹೇಶ್‌, ಹನಮನಾಳು ಸಿದ್ದೇಗೌಡ, ಕೆ.ಕುಮಾರ್‌, ಮಲ್ಲಣ್ಣ, ಬಿ.ಎನ್‌.ಸದಾನಂದ, ಜಿ.ಟಿ.ದೇವೇಗೌಡ, ಎಚ್‌.ವಿ.ರಾಜೀವ್‌, ಮರ್ಚೇಂಟ್ಸ್‌ ಬ್ಯಾಂಕ್‌ ಆನಂದ್‌, ಜಿ.ವಿ.ಗುರುರಾಜ್‌
ಎರಡು ಕ್ಷೇತ್ರದ ಚುನಾವಣೆ: ಒಟ್ಟು ೧೫ ನಿರ್ದೇಶಕರ ಪೈಕಿ ಎರಡು ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲಾ ಕ್ಷೇತ್ರದಲ್ಲಿಯೂ ಅವಿರೋಧವಾಗಿ ಆಯ್ಕೆಯಾಗಿತ್ತು.ಈ ಪೈಕಿ ಇತರೆ ಕ್ಷೇತ್ರದಲ್ಲಿ ರಾಜಕುಮಾರ್‌ ೫ ಮತ, ಪ್ರಸನ್ನ ೭ ಮತ ಗಳಿಸಿ ಸೋಲುಂಡರೆ ೧೫ ಮತ ಪಡೆದು ಹನುಮಾನಾಳ್‌ ಸಿದ್ದೇಗೌಡ ಗೆದ್ದಿದ್ದರು. ಪತ್ತಿನಸಹಕಾರ ಸಂಘದ ಕ್ಷೇತ್ರದಲ್ಲಿ ೨೭ ಮತ ಪಡೆದ ಪ್ರಶಾಂತ್‌ ತಾತಾಚಾರ್‌ ೧ಮತ ಗಳಿಸಿದ ಲಕ್ಷೀಶ್‌ ಎದುರು ಭರ್ಜರಿ ಗೆಲುವು ಸಾಧಿಸಿ ನಿರ್ದೇಶಕರಾಗಿದ್ದರು.
ಸರ್ಕಾರದ ಹಸ್ತಕ್ಷೇಪ ಸಲ್ಲದು: ಮೈಸೂರು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರಾದ ಜಿ.ಡಿ.ಹರೀಶ್‌ ಹೌಡ, ಇತ್ತೀಚೆಗೆ ಸಹಕಾರ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿದೆ. ಎಂಸಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಿತ್ತು. ಆ ಚುನಾವಣೆಯಲ್ಲಿ ಏನಾಯ್ತು ಎಂಬುದು ಇನ್ನೂ ಕೆಲವರಿಗೆ ಗೊತ್ತಿಲ್ಲ. ಅಲ್ಲದೇ ಆ ಚುನಾವಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಮುಗಿಯಲು ಸರ್ಕಾರ ಬಿಡುತ್ತಿಲ್ಲ‌. ಹೀಗಾಗಿ ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೆ, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಲು ಬಿಡಬೇಕು. ನಾವು ಮೀಸಲಾತಿ ವಿರೋಧಿಗಳಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಬಾಕ್ಸ್‌
ತಂದೆ ನಿರ್ದೇಶಕ, ಮಗ ಅಧ್ಯಕ್ಷ
೩೦ ವರ್ಷದಿಂದಲೂ ತಂದೆ ಹಾಗೂ ಶಾಸಕ ಜಿ.ಟಿ.ದೇವೇಗೌಡರು ನಿರ್ದೇಶಕರಾಗಿದ್ದು, ೧೧ ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಮಾತ್ರವಲ್ಲದೆ, ಕಳೆದ ೧೭ ವರ್ಷಗಳಿಂದ ಕಾಂಗ್ರೆಸ್‌ ಮುಖಂಡ ಎಚ್.‌ವಿ.ರಾಜೀವ್‌ ಅಧ್ಯಕ್ಷರಾಗಿದ್ದ ಹುದ್ದೆಗೆ ಈ ಬಾರಿ ಸ್ಪರ್ದೆಗಿಳಿದಿದ್ದ ಜಿ.ಡಿ.ಹರೀಶ್‌ಗೌಡ ನಿರ್ದೇಶಕರಾಗಿ ಅಧ್ಯಕ್ಷಗಾದಿಗೇರಿದ್ದಾರೆ. ಆ ಮೂಲಕ ತಂದೆಯ ಸಹಕಾರ ಹಾದಿಯಲ್ಲಿ ತಾವು ಸಹ ಮತ್ತೊಮ್ಮೆ ಮುಂದುವರೆಯುವ ಪ್ರಯತ್ನ ಹಾದಿಯಲ್ಲಿದ್ದಾರೆ.

Share This Article
Leave a Comment