ಪಬ್ಲಿಕ್ ಅಲರ್ಟ್
ಮೈಸೂರು: ಕೆಲವೇ ದಿನಗಳಲ್ಲಿ ದಸರಾ ನಾಡಹಬ್ಬ ಪ್ರಾರಂಭಗೊಳ್ಳುತ್ತಿದ್ದು, ಅದರ ಸಂಭ್ರಮ ಸಂತಸ ಎಲ್ಲರೂ ಪಾಲ್ಗೊಳ್ಳುವ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಪಡಿಸಿದರು.
ಸಂಸದರ ಪ್ರದೇಶಾಭಿವೃದ್ದಿ ಯೋಜನೆಯ ಅಡಿಯಲ್ಲಿ ನಗರದ ಕುಂಬಾರ ಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ಹಾಗೂ ಕಟ್ಟಡ ಉನ್ನತೀಕರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕುಂಬಾರುಕೊಪ್ಪಲು ಗ್ರಾಮ ಮೈಸೂರಿನೊಂದಿಗೆ ಅವಿನಾಭ ಸಂಬಂಧವನ್ನು ಹೊಂದಿದೆ. ಒಂದು ಚಾರಿತ್ರಿಕ ಹಿನ್ನೆಲೆಯ ಸ್ಥಳಕ್ಕೆ ಇಂತಹದೊಂದು ಕೊಡುಗೆ ನೀಡಿರುವ ಸಂತಸ ನನಗಿದೆ. ಮತ್ತಷ್ಟು ಅಭಿವೃದ್ಧಿಗೆ ಅವಕಾಶ ಸಿಕ್ಕಿರೆ ಕಂಡಿತ ಕೊಡುತ್ತೇನೆಂದರು.
ಇದೇ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳ ಪ್ರಶ್ನೆಗೂ ಉತ್ತರಿಸಿದರು. ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕ ಎಲ್.ನಾಗೇಂದ್ರ, ಕುಂಬಾರಕೊಪ್ಪಲಿನ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡ ದಿನೇಶ್ ಗೌಡ ಇನ್ನಿತರರು ಉಪಸ್ಥಿತರಿದ್ದರು.
