ದಸರೆಯಲ್ಲಿ ಜನಜಾತ್ರೆ
ಇಂದು ರೈತ ದಸರಾಗೆ ಚಾಲನೆ, ಬಾನಾಂಗಳದಲ್ಲಿ ಲೋಹದ ಹಕ್ಕಿಗಳ ತಾಲೀಮು

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಜಂಬೂಸವಾರಿಗೆ ದಿನಗಣನೆ ಶುರುವಾದ ಬೆನ್ನಲ್ಲೇ ದಸರೆಗೆ ಜನಜಾತ್ರೆ ಸಮೂಹ ಬರಲಾರಂಭಿಸಿದ್ದು, ಇಂದು ರೈತ ದಸರಾ ಚಾಲನೆಗೊಳ್ಳಲಿದ್ದು, ಬಾನಾಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ದಸರೆಯ ರಂಗು ಹೆಚ್ಚಿಸಿತು.
ಗುರುವಾರ ಮೈಸೂರಿನ ದಸರಾ ಆಕರ್ಷಣೀಯವಾಗಿ ನಾರಿಯರು ಸೀರೆಯುಟ್ಟು ನಗರದಲ್ಲಿ ಹೆಜ್ಜೆ ಮಾತ್ರವಲ್ಲದೆ ಮೆರವಣಿಗೆ ಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಮತ್ತೊಂದೆಡೆ ಸಿಎಂ ಉದ್ಘಾಟನೆಯೊಂದಿಗೆ ಆರಂಭಗೊಂಡ ಸಿಎಂ ಕಪ್‌ ಕ್ರೀಡಾಕೂಟ ಬಹುಮಾನಗಳ ವಿತರಣೆಯೊಂದಿಗೆ ತೆರೆಕಂಡಿತು. ಮತ್ತೊಂದೆಡೆ ಅ.೨೭ರ ಏರ ಶೋ ನ ಪೂರ್ವತಾಲೀಮು ನಡೆಸಿದ ಏರ್‌ ಫೋರ್ಸ್‌ ಬಾನಿನ ಅಂಗಳದಲ್ಲಿ ೨೦ ನಿಮಿಷಗಳ ಕಾಲ ನೀಡಿದ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಹುಬ್ಬೇರುವಂತೆ ಮಾಡಿತು. ʼ
ಇನ್ನೂ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಕುಸ್ತಿ, ಕ್ರೀಡೆ ಹಾಗೂ ವಸ್ತುಪ್ರದರ್ಶನದತ್ತ ಜನ ಸಮೂಹವೇ ಆಗಮಿಸುವ ಮೂಲಕ ದಸರೆಗೆ ದಿನೇ ದಿನೇ ಜನಸಾಗರವೇ ಹರಿದು ಬರಲಾರಂಭಿಸಿ ಜನಜಾತ್ರೆಯ ಮೆರುಗು ನಗರದಲ್ಲಿ ನೆಲೆಸಿತು. 

Share This Article
Leave a Comment