ಪಬ್ಲಿಕ್ ಅಲರ್ಟ್
ಮೈಸೂರು: ನಮ್ಮ ನಂಬಿಕೆ, ಭಕ್ತಿ ಹಾಗೂ ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ ಆಗಿದೆ. ಹೀಗಾಗಿ ದಸರಾ ಉದ್ಘಾಟಕರಿಗೆ ಚಾಮುಂಡಿ ಚಾಮುಂಡಿ ಬೆಟ್ಟದ ಇತಿಹಾಸ ಉತ್ಸವ, ಆರಾಧನೆ, ಶಿಷ್ಟಾಚಾರವನ್ನ ಸಂಪ್ರದಾಯವನ್ನು ಮೊದಲು ತಿಳಿಸಿ ಎಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು.
ಮೈಸೂರಿನ ಸರ್ಕಾರಿ ಅತಿಥಿಗೃಹದ ಮಾದ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ವಿಶೇಷವಾಗಿ ನಾನು ಸಹ ಮಂತ್ರಿಯಾಗಿ ದಸರಾ ಆಚರಿಸಿದ್ದೇನೆ. ಭಕ್ತಿ, ನಂಬಿಕೆಗೆ ಮತ್ತೊಂದು ಹೆಸರೆ ಚಾಮುಂಡಿ ಬೆಟ್ಟವಾಗಿದೆ. ದಸರಾ ವಿಚಾರವಾಗಿ ರಾಜ್ಯ ಸರ್ಕಾರ ಯಾವ ರೀತಿ ಎಡವಟ್ ಆಗಿದೆ ಗೊತ್ತಿಲ್ಲ. ಯಾರನ್ನು ಆಹ್ವಾನಿಸಿದ್ದಿರಿ ಅವರಿಗೆ ಚಾಮುಂಡಿ ಇತಿಹಾಸ ತಿಳಿಸಿ. ಈ ದೇಶ ನಡೆದು ಬಂದ ಸಂದರ್ಭದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಮಹಾರಾಜ ಮೈಸೂರು ಅವರಿಂದ ಹಿಡಿದು ಈಗಿನವರೆಗೂ ಇಡೀ ವಿಶ್ವವೇ ಚಾಮುಂಡಿಬೆಟ್ಟ, ದಸರಾವನ್ನು ವೀಕ್ಷಿಸುವುದನ್ನು ನೋಡಿದ್ದೇವೆ. ಉತ್ಸವಗಳು, ಧಾರ್ಮಿಕ ಕಾರ್ಯಗಳು ಧಾರ್ಮಿಕ, ಸಾಮಾಜಿಕವಾಗಿ ನಮ್ಮ ಪೂರ್ವಜರು ಕೊಟ್ಟ ಸತ್ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಬರುತ್ತಿದ್ದೇವೆ. ಈ ವೇಳೆ ಯಾರನ್ನೋ ತೃಪ್ತಿ ಪಡಿಸಲು ಅದಕ್ಕೆ ಅಪಚಾರ ಮಾಡುವಂತದ್ದು ಸರಿಯಾದ ಕ್ರಮವಲ್ಲ. ಆ ತಾಯಿಯ ಇತಿಹಾಸದ ಬಗ್ಗೆ ಅವರಲ್ಲಿ ಅಡಕವಾಗಿದ್ದರೆ ಎಲ್ಲರಿಗೂ ಶೋಭೆ ತರುತ್ತದೆ. ಅವರ ಆಯ್ಕೆಯಲ್ಲಿ ಅರ್ಹರೋ ಇಲ್ಲವೋ ಎಂಬ ಬಗ್ಗೆ ಚರ್ಚಿಸಲು ಹೋಗುವುದಿಲ್ಲ. ಧಾರ್ಮಿಕ ಆಚರಣೆಗಳನ್ನು ಮಾಡುವಾಗ ಸರ್ಕಾರ ಆಲೋಚನೆ ಮಾಡಬೇಕಿದೆ ಎಂದರು.
ನಾನು ಸಹ ಎಸ್.ಎಲ್.ಬೈರಪ್ಪ ಅವರಿಂದ ಉದ್ಘಾಟನೆ ಮಾಡಿಸಿದ್ದೇನು. ಈ ಕೆಲಸದಲ್ಲಿ ಶಿಷ್ಠಚಾರ, ಕಟ್ಟುಪಾಡುಗಳನ್ನು ನಿರ್ವಹಣೆ ಮಾಡಲು ಸರ್ಕಾರ ಹಾಗೂ ಸಂಬಂಧಪಟ್ಟವರಿಗೆ ಸದ್ಬುದ್ದಿಯನ್ನು ನೀಡಲಿ ಎನ್ನುತ್ತೇನೆ. ಒಟ್ಟಾರೆ ತಾಯಿಯ ಮನಸ್ಸನ್ನು ಗೆಲ್ಲುವ ನಿಟ್ಟಿನಲ್ಲಿ ನಿರ್ವಂಚನೆಯಿಂದ ಮಾಡಲಿ ಎಂದರು.
ಬೆಂಗಳೂರಿನ 100 ಕಿ.ಮೀಟರ್ ದೂರದಲ್ಲಿ 170ಕ್ಕೂ ಹೆಚ್ಚು ಎನ್ ಸಿ ಗೇಟ್ ನಿರ್ಮಾಣ ಮಾಡಬೇಕಿತ್ತು. ಈ ವೇಳೆ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆದ ಬಳಿಕ 70 ಭಾಗದಲ್ಲಿ ಗೇಟ್ ಹಾಕಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಳಿದ 100ಕ್ಕೂ ಹೆಚ್ಚು ಗೇಟ್ ಅನ್ನು ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಎನ್ ಸಿ ಗೇಟ್, ಮೇಲ್ ಸೇತುವೆ, ಕೆಳ ಸೇತುವೆಗಳಿಗೆ ಅನುದಾನ ನೀಡದ ಸಂದರ್ಭದಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರು ಕೊಡುವಂತಹ ಕೆಲಸವನ್ನು ಮಾಡುತ್ತಿದ್ದಾರೆಂದರು.
ಬೆಂಗಳೂರಿನಷ್ಟೇ ಮೈಸೂರಿಗೂ ಆದ್ಯತೆ ನೀಡಿ, ಮುಂದಿನ ಮೂರು ವರ್ಷದಲ್ಲಿ ಎನ್ ಸಿಆರ್ ಗೇಟ್ ಪೂರ್ಣಗೊಳಿಸುವ ಶಕ್ತಿ ಚಾಮುಂಡೇಶ್ವರಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ವಂದೇ ಮಾತರಂ ರೈಲು ಸೇರಿ ವಿದ್ಯುತ್ ರೈಲನ್ನು ಒಳಗೊಂಡಂತೆ ಬೆಂಗಳೂರಿನಷ್ಟೇ ಆದ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ತರುವ ಪ್ರಯತ್ನ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಈಗಾಗಲೇ ಬೆಂಗಳೂರು- ತುಮಕೂರು ಚತುಷ್ಪಥ ರಸ್ತೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಎಲ್ಲಾ ನಗರಗಳು ಅಭಿವೃದ್ಧಿ ಆಗಬೇಕೆಂಬುದು ಮೋದಿಯವರ ಆದ್ಯತೆಯಾಗಿದೆ. ನನಗೆ ತುಮಕೂರು, ಬೆಂಗಳೂರು, ಮೈಸೂರು ಒಂದೇ ನಾಣ್ಯದ ಮುಖವಾಗಿದೆ. ಮೈಸೂರು, ತುಮಕೂರು ಎಷ್ಟು ಬೇಗ ಬೆಳೆಯುತ್ತದೆಯೋ ಅಷ್ಟೇ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಆಗಲಿದೆ. ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ದೇಶದ ಪ್ರಧಾನಿಗಳು ದೇಶಕ್ಕೆ ಒಂದು ಸಂದೇಶ ನೀಡಿ ದೇಶದ ಜನರಿಗೆ ದೀಪಾವಳಿ, ದಸರಾ ಉಡುಗೊರೆ ನೀಡಲಿದ್ದಾರೆ. ಅದರಲ್ಲಿ ರಾಜ್ಯದ ಒಂದು ಅಂಗವಾಗಿ ಕೊಡುಗೆ ಸಿಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಎಂಎಲ್ ಸಿ ಸಿದ್ದರಾಜು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಂ.ಸುಬ್ಬಣ್ಣ, ಚಾಮರಾಜ ಕ ಇನ್ನಿತರರು ಉಪಸ್ಥಿತರಿದ್ದರು.
ಬಾಕ್ಸ್
ಈ ಬಾರಿ ಪ್ರಕೃತಿ ವಿಕೋಪದಿಂದ ಉತ್ತರ ಕರ್ನಾಟಕ ತಲ್ಲಣಗೊಂಡಿದೆ. ಪ್ರಕೃತಿ ಮುನಿದಿದ್ದಾಳೆ, ಅದರಲ್ಲೂ ಹೈದರಾಬಾದ್, ಬಾಂಬೆ ಕರ್ನಾಟಕ ಭಾಗದಲ್ಲಿ ಹೆಚ್ಚು ಅನಾನೂಕೂಲಗಳಾಗಿದೆ. ಹೀಗಿದ್ದರೂ ಆ ಭಾಗದ ಮಂತ್ರಿಗಖು ಸಹ ಅತ್ತ ನೋಡದಿರುವುದು ಖೇದಕರ ಸಂಗತಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕ್ಷುಲಕ ರಾಜಕಾರಣ ಬಿಟ್ಟು ಜನರ ನೋವಿಗೆ ಸ್ಪಂದಿಸಲಿ. ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಮಂತ್ರಿಗಳು ಆಯಾ ಜಿಲ್ಲೆಯಲ್ಲೇ ಕೂತೂ ಕೆಲಸ ಮಾಡುವಂತೆ ಸೂಚಿಸಲಿ ಎಂದು ಆಗ್ರಹಿಸುವುದಾಗಿ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.

