ವೈಭವ ಯಶಸ್ಸಿನ ಸಂಭ್ರಮದಲ್ಲಿ ಗಜಪಡೆ
ರಿಲ್ಯಾಕ್ಸ್‌ ಮೂಡ್‌ ನಲ್ಲಿ ಮಾವುತ, ಕಾವಾಡಿ ಕುಟುಂಬ, ಇಂದು ಮರಳಿ ಕಾಡಿಗೆ

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಾಡಹಬ್ಬದ ಕೇಂದ್ರ ಬಿಂದು ದಸರೆಯ ಜಂಬೂ ಸವಾರಿಯ ವೈಭವ ಯಶಸ್ಸನ್ನು ಮೆಲುಕು ಹಾಕಿದ ಗಜಪಡೆ ಒಂದೆಡೆಯಾದರೆ ಮತ್ತೊಂದೆಡೆ ದಸರಾ ಯಶಸ್ವಿಗೊಳಿಸಿದ ಮಾವುತ, ಕಾವಾಡಿ ಕುಟುಂಬ ಕೊಂಚ ವಿರಮಿಸಿದ್ದರು. ಇನ್ನೂ ಕೆಲವರು ನಾಳೆ ಕಾಡಿನತ್ತ ಮರಳಲು ತಯಾರಿ ನಡೆಸಿದ ದೃಶ್ಯ ಕಂಡು ಬಂದಿತು. 
ವೈಭವಯೂತ ನಾಡಹಬ್ಬ ದಸರಾ ಜಂಬೂಸವಾರಿ ಮುಗಿದು ದಸರೆ ಸಂಪನ್ನಗೊಂಡು ಈಗ ಅದರ ಸಂಭ್ರಮದ ಮೆಲುಕಿನ ಕುರುಹುಗಳಷ್ಟೇ ಉಳಿದಿದ್ದವು. ಈ ಹಿನ್ನೆಲೆಯಲ್ಲಿ ಗಜಪಡೆ ಕಾಣಲು ಹಾಗೂ ಅವುಗಳೊಟ್ಟಿಗೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಜನರ ದಂಡೇ ಗಜಪಡೆಯ ಸಮೀಪ ಹರಿದು ಬಂದಿತ್ತು.ಈ ಹಿನ್ನೆಲೆಯಲ್ಲಿ ಪೊಲೀಸರು ಆನೆ ಬಿಡಾರದ ಬಳಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದರು. ಕೆಲವರು ಅಭಿಮನ್ಯು ಆನೆಯ ಬಳಿಗೆ ಬಂದು ಫೋಟೋ ತೆಗೆದುಕೊಳ್ಳಲು ಮುಂದಾದರು. ಮಾವುತರು ಮತ್ತು ಕಾವಾಡಿಗಳು ಸಹ ಜನ ಆನೆಗಳ ಹತ್ತಿರ ಬರದಂತೆ ಎಚ್ಚರಿಕೆ ನೀಡುತ್ತಿದ್ದರು. ಹಲವರು ಅರಣ್ಯಾಧಿಕಾರಿಗಳ ಬಳಿಗೆ ತೆರಳಿ ಫೋಟೋ ತೆಗೆದುಕೊಳ್ಳಲು ಅವಕಾಶ ಕೇಳುತ್ತಿದ್ದು ಸಾಮಾನ್ಯವಾಗಿತ್ತು.
ದಾಖಲೆ ಬರೆದ ಅಭಿಮನ್ಯು: ಸತತ ೬ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು ಆನೆಯು ಶುಕ್ರವಾರ ಸಂಪೂರ್ಣ ವಿಶ್ರಾಂತಿ ಪಡೆಯಿತು. ಮಾತ್ರವಲ್ಲದೆ, ಎಲ್ಲರ ನೆಚ್ಚಿನ ಆನೆಯ ಕೇಂದ್ರವಾಯಿತು ಸಾವಿರಾರು ಮಂದಿಯೂ ಸಹ ಅದರೊಟ್ಟಿಗೆ ಚಿತ್ರಪಟಕ್ಕಾಗಿ ಗೊಗರೆದರು. ಈ ವೇಳೆ ಸಂತಸದಿಂದಲೇ ಕೆಲವರಿಗೆ ಮಾವುತ ವಸಂತ್‌ ಪೋಟೊ ಕ್ಲಿಕಿಸಲು ಅವಕಾಶ ನೀಡಿದರು. ಮಾತ್ರವಲ್ಲದೆ, ತಾನು ಸಹ ಇಂತಹದೊಂದು ಅವಕಾಶ ನೀಡಿದ ಚಾಮುಂಡೇಶ್ವರಿಗೆ ಮನಸ್ಸಲ್ಲೇ ಸಂಭ್ರಮಿಸಿ ಸಂತಸ ವ್ಯಕ್ತಪಡಿಸಿದರು.
ಧೈರ್ಯ ತೋರಿದ ಭವಿಷ್ಯದ ಆನೆಗಳು: ಈ ಬಾರಿ ದಸರಾ ಮಹೋತ್ಸವಕ್ಕಾಗಿ ೧೪ ಆನೆಗಳನ್ನು ಕಾಡಿನಿಂದ ನಾಡಿಗೆ ತರಲಾಗಿತ್ತು. ಎಲ್ಲ ಆನೆಗಳು ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಕೆಲ ದಿನಗಳ ಹಿಂದೆ ಪಟ್ಟದಾನೆ ಶ್ರೀಕಂಠ ಅರಮನೆ ಆವರಣದಲ್ಲಿ ವಿಚಲಿತನಾಗಿದ್ದನು. ಆದರೆ, ಜಂಬೂ ಸವಾರಿ ಮೆರವಣಿಗೆಯಲ್ಲಿ ಯಾವುದೇ ರೀತಿಯೂ ವಿಚಲಿತನಾಗದೆ ಧೈರ್ಯದಿಂದ ಹೆಜ್ಜೆ ಹಾಕಿದ. ಇದರೊಂದಿಗೆ ೧೧ ವರ್ಷದ ಹೇಮಾವತಿ ಕೂಡ ಜನರ ಶಿಳ್ಳೆ-ಚಪ್ಪಾಳೆ, ಕೂಗಾಟಕ್ಕೆ ಅಂಜದೆ ಹೆಜ್ಜೆ ಹಾಕಿ ಸಭಾಷ್‌ ಅನಿಸಿಕೊಂಡು ಇಂದು ಅರಮನೆ ಆವರಣದಲ್ಲಿ ಸಂಭ್ರಮಿಸುವಂತಿತ್ತು.  ರೂಪ ಆನೆಯೂ ಸಹ ರಿಲ್ಯಾಕ್ಸ್‌ ಮೂಡ್‌ ನಲ್ಲಿ ಜಾರಿತ್ತು. ಮಾತ್ರವಲ್ಲದೆ ಅವುಗಳ ಮಾವುತ, ಕಾವಾಡಿಗಳು ಜಂಬೂ ಸವಾರಿ ಯಶಸ್ವಿಗೊಳಿಸಿದ ಸಂಭ್ರಮದಲ್ಲಿದ್ದರು. 
ಮಾವುತ-ಕಾವಾಡಿಗಳ ಮಕ್ಕಳು ಅರಮನೆ ಆವರಣದಲ್ಲಿ ಆಟವಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನೊಂದು ಶೆಡ್‌ನಲ್ಲಿ ಕೇರಂ ಬೋರ್ಡ್ ಆಡುತ್ತ ಮಾವುತರು ತಮ್ಮ ರಿಲ್ಯಾಕ್ಸ್ ಮೂಡಿಗೆ ಜಾರಿ ವಿಶ್ರಾಂತಿ ಪಡೆದರು. ಮಹಿಳೆಯರು ತಮ್ಮ ಸ್ವ ಸ್ಥಾನಗಳಿಗೆ ತೆರಳು ತಯಾರಿ ನಡೆಸುತ್ತಿದ್ದರು. ಬಟ್ಟೆ ಜೋಡಿಸುವುದು, ತಾವು ತಂದಿದ್ದ ವಸ್ತುಗಳನ್ನು ಪ್ಯಾಕ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ದಸರಾ ನೋಡಲು ಬಂದಿದ್ದ ತಮ್ಮ ಸಂಬಂಧಿಕರನ್ನು ಕಳುಹಿಸಿ ಕೊಡುತ್ತಿದ್ದರು. ಆನೆಗಳ ಆಲಂಕಾರಿಕ ವಸ್ತುಗಳನ್ನು ಒಂದೆಡೆ ಜೋಡಿಸಿ ವಾಪಸ್ ಅರಮನೆ ಮಂಡಳಿಗೆ ಹಸ್ತಾಂತರಿಸಲಾಯಿತು.

ಬಾಕ್ಸ್
ಇಂದು ಕಾಡಿಗೆ ಮರಳಿದ
೫೫ ದಿನಗಳ ಹಿಂದೆ ಗಜಪಯಣದ ಮೂಲಕ ಕಾಡಿನಿಂದ ನಾಡಿಗೆ ಆಗಮಿಸಿ ಇಷ್ಟು ದಿನ ತಾಲೀಮು ನಡೆಸಿ ನಗರದ ಅಂದ ಹೆಚ್ಚಿಸಿ ಜಂಬೂ ಸವಾರಿಯ ಆಕರ್ಷಣೆಯ ಕೇಂದ್ರ ಬಿಂದುಗಳಾಗಿ ಅರಮನೆ ಅತಿಥ್ಯ ಸ್ವೀಕರಿಸಿದ ಗಜಪಡೆಯ ಆನೆಗಳನ್ನು ಇಂದು(ಅ.೪ರಂದು) ಮರಳಿ ಕಾಡಿನತ್ತ ಪಯಣ ಬೆಳೆಸಲಿವೆ. ಆ ಮೂಲಕ ನಾಡಹಬ್ಬಕ್ಕೆ ತೆರೆ ಬೀಳಲಿದ್ದು, ಇದಕ್ಕಾಗಿ ಈಗಾಗಲೇ ಅರಣ್ಯ ಇಲಾಖೆ, ಮಾವುತ, ಕಾವಾಡಿ ಕುಟುಂಬಗಳು ತಯಾರಿ ನಡೆಸಿಕೊಂಡಿವೆ. 


ಬಾಕ್ಸ್‌
ಅಭಿಮನ್ಯುವಿಗೆ ಕೊನೆ ದಸರವಲ್ಲ: ಡಿಸಿಎಫ್‌
ಮೈಸೂರು:ಅಭಿಮನ್ಯು ಆರನೆ ಬಾರಿಗೆ ಯಶಸ್ವಿಯಾಗಿ ಇಲಾಖೆ ಕೊಟ್ಟ ಜವಾಬ್ದಾರಿ ನಿಬಾಯಿಸಿರುವುದಕ್ಕೆ ಖುಷಿಯಿದೆ. ಅಭಿಮನ್ಯುವಿಗೆ ಇದು ಕೊನೆ ದಸರಾ ಅಲ್ಲ. ಮುಂದಿನ ಬಾರಿಯೂ ಆತನೇ ಅಂಬಾರಿ ಹೊರಲು ಶಸಕ್ತನಾಗಿದ್ದೇನೆ ಎಂದು ಡಿಸಿಎಫ್‌ ಡಾ.ಪ್ರಭುಗೌಡ ತಿಳಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಈ ವರ್ಷ ಆತನಿಗೆ ೫೯ ವರ್ಷ ವಯಸ್ಸು ೬೦ ವರ್ಷ ದಾಟಿದ ಆನೆಗಳಿಗೆ ಭಾರ ಹೊರಿಸುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಅಭಿಮನ್ಯವಿಗೆ ಮುಂದಿನ ವರ್ಷ ೬೦ ವರ್ಷ ಇರುವುದರಿಂದ ಯಾವುದೇ ತೊಂದರೆ ಇಲ್ಲದೆ ಅಂಬಾರಿ ಹೊರಲು ಸಿದ್ಧನಿದ್ದಾನೆ. ಅದರೊಟ್ಟಿಗೆ ಮಹೇಂದ್ರ, ಧನಂಜಯ ಹೀಗೆ ಎಲ್ಲಾ ಆನೆಗಳು ಅಂಬಾರಿ ಹೊರಲು ತಯಾರಿವೆ. ಈ ಬಗ್ಗೆ ಆ ವೇಳೆಗೆ ಅಂತಿಮ ತೀರ್ಮಾನ ಆಗಲಿದೆ ಎಂದರು. 
ದಸರಾ ಜಂಬೂ ಸವಾರಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರಲ್ಲಿ ಮಾವುತ, ಕಾವಾಡಿಗರೆಲ್ಲರೂ ಯಶಸ್ವಿಯಾಗಿ ನಡೆಸಿದ್ದಾರೆ.  ಆನೆ ಎಂಬ ಪ್ರಾಣಿಯನ್ನು ಪಳಗಿಸುವ ದೇಶದ ಅತ್ಯುತ್ತಮ ತಂಡ ನಮ್ಮ ಇಲಾಖೆಯಲ್ಲಿರುವುದೇ ಹೆಮ್ಮೆಯಾಗಿದೆ. ಮಾವುತರು, ಕಾವಾಡಿಗಳು ಕೊಟ್ಟ ಭರವಸೆಯಿಂದಲೇ ಹಾಗೂ ಆನೆಗಳನ್ನು ಅದೇ ರೀತಿ ತಯಾರಿ ಮಾಡಿದ್ದರಿಂದಲೇ ಮೂರು ಆನೆಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಮುಂದಿನ ದಸರೆಗೆ ಅಂಬಾರಿ ಹೊರಲು ಸಾಕಷ್ಟು ಆನೆಗಳು
-ಡಾ.ಪ್ರಭುಗೌಡ, ಡಿಸಿಎಫ್‌

Share This Article
Leave a Comment