ಗಜಪಡೆಯೊಂದಿಗೆ ಮಹಿಳೆ ಪೋಟೊ: ಇಲಾಖೆ ಶೋಧ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಿನ್ನೆ ರಾತ್ರಿ ಎಕಾಎಕಿ ಮಹಿಳೆಯೊಬ್ಬರು ದಸರಾ ಗಜಪಡೆಯ ಆನೆಗಳೊಂದಿಗೆ ನಾನಾ ರೀತಿಯಲ್ಲಿ ಪೋಟೊ ತೆಗೆಸಿಕೊಂಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ನಡೆಸಿದೆ.
ಅರಮನೆ ಆವರಣದಲ್ಲಿ ಗಜಪಡೆ ೧೪ ಆನೆಗಳು ನೆಲೆಸಿದ್ದು, ಅಷ್ಟು ಆನೆಗಳ ಚಲನ-ವಲನಗಳ ಪತ್ತೆಗಾಗಿ ಸೆಕ್ಯೂರಿಟಿ ಸಿಬ್ಬಂದಿ, ಮಾವುತ, ಕಾವಾಡಿ ಹಾಗೂ ಅರಣ್ಯ ಹಾಗೂ ಪೊಲೀಸ್‌ ಇಲಾಖೆಯವರನ್ನು ನಿಯೋಜಿಸಲಾಗಿದೆ. ಆದರೆ, ಅರಣ್ಯ ಇಲಾಖೆಯವರ ಮಾಹಿತಿ ಪ್ರಕಾರ ಎಲ್ಲರ ಕಣ್ಣು ತಪ್ಪಿಸಿ ಮಹಿಳೆ ಒಬ್ಬರೇ ಆನೆಗಳೊಂದಿಗೆ ಪೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಸಾಲದೆಂಬಂತೆ ಆಕೆಯ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿಯೂ ವೈರಲ್‌ ಆಗಿದೆ.
ಈ ಹಿನ್ನೆಲೆಯಲ್ಲಿ ಆಕೆಗೆ ದಂಡ ವಿಧಿಸಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳು ಆಕೆಯ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಜತೆಗೆ ಈವರೆಗೆ ಇದೇ ರೀತಿ ನಿಯಮ ಮೀರಿ ಆನೆಗಳ ಸಮೀಪಕ್ಕೆ ತೆರಳಿದ ಮೂವರಿಗೆ ದಂಡ ಹಾಕಿರುವುದಾಗಿ ತಿಳಿಸಿದ್ದಾರೆ. ಜತೆಗೆ ಸೀಮಿತ ವ್ಯಕ್ತಿಗಳು ಹೊರತು ಪಡಿಸಿ ಆನೆಗಳ ಸಮೀಪಕ್ಕೆ ತೆರಳುವ ಜನರಿಗೆ ಮುಂದಿನ ದಿನಗಳಲ್ಲಿ ದಂಡ ಹಾಕುವುದಾಗಿಯೂ ಅರಣ್ಯ ಇಲಾಖೆ ಡಿಸಿಎಫ್‌ ಪ್ರಭುಗೌಡ ತಿಳಿಸಿದ್ದಾರೆ.

Share This Article
Leave a Comment