ಪಬ್ಲಿಕ್ ಅಲರ್ಟ್
ಮೈಸೂರು: ದಸರಾದ ನಿಜವಾದ ಅರ್ಥವೇ ಕಲೆ ಸಂಸ್ಕೃತಿ ಆಗಿದ್ದು ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಲಲಿತ ಕಲೆ ಮತ್ತು ಕರಕುಶಲ ಕಲೆ ಸಮಿತಿ ವತಿಯಿಂದ ನಗರದ ಕಾವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರೀಯ ಕರಕುಶಲ ವಸ್ತು ಮತ್ತು ಚಿತ್ರಕಲಾ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾವಾ ಸಂಸ್ಥೆ ದಸರಾ ಮಹೋತ್ಸವ ಹಿನ್ನಲೆ ತುಂಬಾ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಪ್ರತಿ ದಸರಾ ಮಹೋತ್ಸವದಲ್ಲಿ ಹೊಸ ಹೊಸತನದ ಸ್ಪರ್ಧೆಗಳನ್ನು ಆಯೋಜಿಸಿ ಈಗಿನ ಕಾಲಮಾನದಲ್ಲಿ ಕಲೆಗಳನ್ನು ಜೀವಂತವಾಗಿಡುವ ಕಾವಾ ಸಂಸ್ಥೆ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವಾಗಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.


ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್ ಮಾತನಾಡಿ, ನಮ್ಮ ಪಾರಂಪರಿಕ ಕಲೆಗಳನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಕಾವಾ ಕಾಲೇಜಿನಲ್ಲಿ ಲಲಿತ ಕಲೆ ಮತ್ತು ಕರಕುಶಲ ಕಲೆ ಸಮಿತಿ ಆಯೋಜಿಸಿದೆ ಇದರಲ್ಲಿ ಇನ್ಲೆ ಆರ್ಟ್ ಇಲ್ಲಿ ತುಂಬಾ ವಿಶೇಷವಾದದ್ದು ಎಂದು ಹೇಳಿದರು.
ಮೊಬೈಲ್ ಗೀಳು ಈಗಿನ ಪೀಳಿಗೆಯಲ್ಲಿ ಹೆಚ್ಚಾಗಿದೆ ಇದು ಹೇಗೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರಕಲೆ ಮೂಲಕ ತಿಳಿಸಿರುವುದು ಬಹಳ ಚೆನ್ನಾಗಿದೆ, ಇದನ್ನು ಹೆಚ್ಚು ಮಂದಿ ವೀಕ್ಷಣೆ ಮಾಡಬೇಕು, ಯುವ ದಸರಾಕ್ಕಿಂತ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಹೇಳಿದರು.
1 ರಿಂದ 10ನೆ ತರಗತಿಯ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಜೇಡಿಮಣ್ಣಿನ ಶಿಲ್ಪಾ ಕಲೆ ಆಯೋಜಿಸಲಾಗಿತ್ತು. ಆವರಣದಲ್ಲಿ 28 ಮಳಿಗೆಗಳ ತೆರೆಯಲಾಗಿದ್ದು, ತೊದಲುಗೊಂಬೆ ಮತ್ತು ಭಿತ್ತಿಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಇದೆ ವೇಳೆ ಕಲಾವಿದರನ್ನು ಸಹಾ ಗೌರವಿಸಲಾಯಿತು. ಈ ವೇಳೆ ಅಧ್ಯಕ್ಷ ಪಾಷಾ ಕುಮಾರ್ , ಇಂದಿರಾ ಗಾಂಧಿ ಆರ್ಟ್ ಕಾಲೇಜಿನ ಮುಖ್ಯಸ್ಥ ವಿಜಯ್ ಕುಮಾರ್, ಸಮಿತಿ ಅಧ್ಯಕ್ಷರಾದ ರಘುರಾಜೇ ಅರಸು, ಕಾವ ಕಾಲೇಜಿನ ಡೀನ್ ದೇವರಾಜು ಇದ್ದರು.
