೫.೬೦ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಚಾಲನೆ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು : ೫.೬೦ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಎನ್‌ಆರ್ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಸೋಮವಾರ ಭೂಮಿಪೂಜೆ ಸಲ್ಲಿಸಿದರು.
ರಾಜೀವ್ ನಗರದ ೨ನೇ ಹಂತದಲ್ಲಿ ಎಜೆ ಕನ್ವೇನಷನ್ ಹಾಲ್ ಎದುರು ೪.೫ ಕೋಟಿ ರೂ ವೆಚ್ಚದಲ್ಲಿ ಮೈಸೂರು ಮಹಾ ನಗರಪಾಲಿಕೆ ವಲಯ ಕಚೇರಿ ೮ರ ನೂತನ ಕಟ್ಟಡ ನಿರ್ಮಾಣ ಮತ್ತು ೧.೧೦ ಕೋಟಿ ರೂ ವೆಚ್ಚದಲ್ಲಿ ಅಜೀಜ್ ಸೇಠ್ ರಸ್ತೆಯ ವಾಟರ್ ಟ್ಯಾಂಕ್ ರಸ್ತೆಯಿಂದ ಡಾ.ರಾಜಕುಮಾರ್ ರಸ್ತೆವರೆಗೆ ಹಾಗೂ ಇಂದಿರಾ ಕ್ಯಾಂಟಿನ್ ರಸ್ತೆಯಿಂದ ಹೆಚ್‌ಪಿಓ ಆರ್‌ಎಂಎಸ್ ಲೇ ಔಟ್‌ನ ಗಣಪತಿ ದೇವಸ್ಥಾನದ ಹತ್ತಿರ ಒಳಚರಂಡಿ ಕೊಳವೆ ಮಾರ್ಗ ಅಳವಡಿಸಿ ಪರಾಶಕ್ತಿ ರಸ್ತೆಯಲ್ಲಿರುವ ಮುಖ್ಯ ಕೊಳವೆ ಮಾರ್ಗಕ್ಕೆ ಜೋಡಿಸವುದು, ಮತ್ತು ಯಂತ್ರ ಗುಂಡಿಗಳನ್ನು ನಿರ್ಮಿಸುವುದು ಸಹ ಈ ಕಾಮಗಾರಿಯಲ್ಲಿ ಸೇರಿದೆ.
ಭೂಮಿಪೂಜೆ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಬಹುದಿನಗಳ ಪ್ರಯತ್ನನದ ಫಲವಾಗಿ ಮೈಸೂರು ಮಹಾನಗರಪಾಲಿಕೆಯ ೯ ವಲಯಗಳಲ್ಲಿ ಈಗಾಗಲೇ ವಲಯ ಕಚೇರಿ೧ ಮತ್ತು ೩ ಸ್ವಂತ ಕಟ್ಟಡ ನಿರ್ಮಾಣವಾಗಿದೆ, ನನ್ನ ಕ್ಷೇತ್ರ ವ್ಯಾಪ್ತಿಯ ವಲಯ ಕಚೇರಿ ೭, ೮, ೯ ಸೇರಿ ೩ ಕಚೇರಿಗಳು ಬರುತ್ತವೆ. ಇದರಲ್ಲಿ ಇಂದು ವಲಯ ಕಚೇರಿ ೮ರ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲಾಗಿದೆ, ಇದಕ್ಕೆ ಸಿಎ ನಿವೇಶನ ಪಡೆದಿದ್ದು, ೪.೫ ಕೋಟಿ ವೆಚ್ದದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ವಲಯ ಕಚೇರಿ ೭ಕ್ಕೆ ಮಂಜೂರಾತಿ ದೊರೆತಿದ್ದು, ಹಾಲಿ ಕಟ್ಟಡ ತೆರವು ಮಾಡಿ ನೂತನ ಕಟ್ಟಡ ನಿರ್ಮಿಸಲಾಗುವುದು, ವಲಯ ಕಚೇರಿ ೯ಕ್ಕೂ ನಿವೇಶನ ದೊರಕಿದ್ದು, ಅಲ್ಲೂ ಸಹ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ದೊರಕುವಂತಾಗುತ್ತದೆ ಎಂದರು.
ಜತೆಗೆ ಮೈಸೂರು ನಗರದ ಪೂರ್ವಭಾಗದಲ್ಲಿ ಅಜೀಜ್ ಸೇಠ್ ನಗರ, ಸಾತಗಳ್ಳಿ, ಕಲ್ಯಾಣಗಿರಿ ಸೇರಿ ಐದು ಖಾಸಗಿ ಬಡವಾವಣೆಗಳು ಮತ್ತು ಮೂರು ಸ್ಲಂ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಇಂದು ೧.೧೦ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಷೇಕ್ ತನ್ವೀರ್ ಆಸೀಫ್, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಉಪಾಧ್ಯಕ್ಷರಾದ ಷಹಿನ್ ಷಾ ಅಹಮದ್, ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಶೌಕತ್ ಪಾಷ, ಆಫ್ತಾಬ್, ಸೈಯದ್ ಹಸರತುಲ್ಲಾ, ಪ್ರದೀಪ್ ಚಂದ್ರ, ಮುಖಂಡರಾದ ಅಫ್ರೋಜ್ ಖಾನ್, ಬಾಬು, ಆಪ್ತಾಬ್, ಪಾಲಿಕೆ ಎಸಿ ಸೋಮಶೇಖರ್, ಎಇ ಮಧುಸೂಧನ್ ಇತರರು ಇದ್ದರು.

Share This Article
Leave a Comment