ಧರ್ಮ ಧರ್ಮಗಳನ್ನು ಬೆಸೆಯುವ ಮಹಾಶಿವರಾತ್ರಿ ನಿಜವಾದ ಸತ್ಯ ಶಿವರಾತ್ರಿ –

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಧರ್ಮ ಧರ್ಮಗಳನ್ನು ಬೆಸೆಯುವ ಮಹಾಶಿವರಾತ್ರಿ ನಿಜವಾದ ಸತ್ಯ ಶಿವರಾತ್ರಿ– ಸರ್ಪಭೂಷಣ ಸ್ವಾಮೀಜಿ ಅಭಿಮತ
ಚಾಮರಾಜನಗರ – ಧರ್ಮಗಳು ಮನುಷ್ಯನಿಗೆ ಸುಖ ಕೊಡುವುದಕ್ಕಾಗಿದಿಯೋ ಹೊರತು ದುಃಖ ಕೊಡುವುದಕ್ಕಾಗಿ ಅಲ್ಲ. ಶರಣರು ಹೇಳುವ ಹಾಗೆ ಇವನ್ಯಾರವ ಇವನ್ಯಾರವ ಎನ್ನುವ ಬದಲು, ಇವ ನಮ್ಮವ ಇವ ನಮ್ಮವ ಎನ್ನಿರಿ. ಧರ್ಮ ಧರ್ಮಗಳನ್ನು ಬೆಸೆಯುವುದೇ ನಿಜವಾದ ಸತ್ಯ ಶಿವರಾತ್ರಿಯಾಗಿದೆ ಎಂದು ಹರವೆ ಮಠಾ ಅಧ್ಯಕ್ಷರಾದ ಸರ್ಪಭೂಷಣ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು. ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿದ್ದ 90 ನೇ ವರ್ಷದ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ, ಸರ್ವ ಧರ್ಮದವರಿಂದ ಶಿವದ್ವಜಾರೋಹಣಹಾಗೂ ದ್ವಾದಶ ಜ್ಯೋತಿರ್ ರ್ಲಿಂಗದ ಪುಣ್ಯ ದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದು ಒಂದು ಧರ್ಮ ಅನೇಕ ಧರ್ಮಗಳಾಗಿ ವಿಂಗಡಣೆಯಾಗಿ ಒಡೆದು ಹಾಳಾಗುತ್ತಿವೆ ಆದರೆ ಈಶ್ವರಿಯ ವಿಶ್ವವಿದ್ಯಾಲಯವು ಒಂದು ಸದ್ದರ್ಮವನ್ನು ಸ್ಥಾಪನೆ ಮಾಡುವುದರಲ್ಲಿ ನಿರತರಾಗಿರುವುದು. ಸರ್ವಧರ್ಮದವರನ್ನು ಸೇರಿಸಿಕೊಂಡು, ಶಿವರಾತ್ರಿ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು. ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ ಭಾರತ ಹಬ್ಬಗಳ ನಾಡು. ಆಧ್ಯಾತ್ಮಿಕತೆಯ ನೆಲೆ ಬೀಡು.ಹಬ್ಬ ಎಂದರೆ ಹಬ್ಬು. ಬೆಳೆಯುವುದು ಪ್ರಗತಿ ಹೊಂದುವುದು.
ಶಿವರಾತ್ರಿ ಎಂದರೆ ಶಿವ ಬಂದಂತಃ ರಾತ್ರಿ. ಅಜ್ಞಾನ ಅಂದಕಾರದ ರಾತ್ರಿ. ಆರಾತ್ರಿಯೇ ವರ್ತಮಾನ ಸಂಗಮ ಯುಗವಾಗಿದೆ ಈ ಧರ್ಮಗ್ಲಾನಿಯ ಸಮಯದಲ್ಲಿ ಅವನು ಬಂದು ಸದ್ಧರ್ಮವನ್ನು ಸ್ಥಾಪನೆ ಮಾಡುತ್ತಿರುವ ವಿಚಾರವನ್ನು ವೈಜ್ಞಾನಿಕ ನೆಲಗಟ್ಟಿನ ಮೇಲೆ ತಿಳಿಸಿದರು. ಉಪವಾಸ ಎಂದರೆ ಹಸಿದಿರುವುದಲ್ಲ. ಹತ್ತಿರ ವಾಸ ಮಾಡುವುದು ಹಾಗೂ ವ್ಯರ್ಥ ವಿಚಾರಗಳಿಂದ ದೂರ ಇರುವುದು. ಇದೇ ಸತ್ಯ ಉಪವಾಸವಾಗಿದೆ. ಜಾಗರಣೆ ಎಂದರೆ ನಿದ್ದೆಗೆಡುವುದಲ್ಲ. ನಿದ್ದೆಗೆಟ್ಟನೋ? ಬುದ್ಧಿಗೆಟ್ಟನೋ ಎನ್ನುತ್ತಾರೆ.ಜಾಗರಣೆ ಎಂದರೆ ನಮ್ಮ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು. ಶತ್ರುಗಳು ಹೊರಗಡೆ ಯಾರು ಇಲ್ಲ.ಒಳಗೆ ಇದ್ದಾರೆ. ಕಾಮ ಕ್ರೋಧ ಲೋಭ ಮೋಹ ಅಹಂಕಾರ, ಈರ್ಶೆ, ದ್ವೇಷ, ಹೊಟ್ಟೆಕಿಚ್ಚು, ಅಸೂಯೆ, ಅಸಮಾಧಾನ, ಅತೃಪ್ತಿ,ಗೊಂದಲ, ಚಿಂತೆ, ಬೇಸರ, ಇವೇ ನಿಜವಾದ ಶತ್ರುಗಳು. ಇದರ ಬಗ್ಗೆ ಎಚ್ಚರಿಕೆಯಿಂದ ಇರುವುದೇ ನಿಜವಾದ ಜಾಗರಣೆಯಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸರ್ವ ಧರ್ಮದವರ ತಂದೆ ಶಿವ ದ್ವಜಾರೋಹಣ ಮಾಡಿ ನಾವೆಲ್ಲರೂ ಒಬ್ಬ ಪರಮಾತ್ಮನ ಮಕ್ಕಳು, ಒಂದೇ ಕುಟುಂಬದವರು ಎಂದು ಪ್ರತಿಜ್ಞೆಗೖದರು. ನಾಟ್ಯ ಸರಸ್ವತಿ ಕಲಾತಂಡದವರಿಂದ ಶಿವ ತಾಂಡವ ನೃತ್ಯವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂ ಸರ್ವಿಸ್ನ ಬ್ರಹ್ಮಾ ಕುಮಾರ ಆರಾಧ್ಯ, ಬ್ರಹ್ಮೇಶ್, ಇಕ್ರಂ ಉಲ್ಲಾಹ್ ಅಕ್, ಭವಾನಿ ದೇವಿ, ಅಕ್ಷತಾ ಜೈನ್, ಮಹಾದೇವ್, ಪುಟ್ಟಶೇಖರ ಮೂರ್ತಿ, ಕಮಲಮ್ಮ, ಸಾನ್ವಿಕಾ ಪ್ರಮೀಳಾ, ನಾಗರಾಜ್, ಮರ್ಗತಮ್ಮ, ನಿರ್ಮಲ, ಶಿವಕುಮಾರ್, ಜಯಲಕ್ಷ್ಮಿ, ರಂಗನಾಥ್, ಸುಲೋಚನಾ, ಸಿದ್ದಯ್ಯ, ಲಕ್ಷ್ಮಮ್ಮ, ಸುಗುಣ, ಮುಂತಾದವರು

Share This Article
Leave a Comment