ಮನುಷ್ಯ ಯಾವತ್ತೂ ಶ್ರೀಗಂಧದ ಮರದ ಹಾಗೆ ಬದುಕಬೇಕು. ಕತ್ತರಿಸಿದಷ್ಟು ಸುಗಂಧ ನೀಡುತ್ತದೆ- ರಾಜಯೋಗಿನಿ ಬ್ರಹ್ಮಾಕುಮಾರಿ ಡಾ||ಲಕ್ಷ್ಮೀಜೀ ಅಭಿಮತ.

latha prabhukumar
2 Min Read

ಮನುಷ್ಯ ಯಾವತ್ತೂ ಶ್ರೀಗಂಧದ ಮರದ ಹಾಗೆ ಬದುಕಬೇಕು. ಕತ್ತರಿಸಿದಷ್ಟು ಸುಗಂಧ ನೀಡುತ್ತದೆ- ರಾಜಯೋಗಿನಿ ಬ್ರಹ್ಮಾಕುಮಾರಿ ಡಾ||ಲಕ್ಷ್ಮೀಜೀ ಅಭಿಮತ. ಮೈಸೂರು -ನಿಮ್ಮ ಒಳ್ಳೆಯತನ ಕಾಪಾಡಲು ದೇವರೇ ಇರುತ್ತಾನೆ. ಶ್ರೀಗಂಧದ ಮರದ ಹಾಗೆ ಬದುಕಬೇಕು. ಅದನ್ನು ಕತ್ತರಿಸಿದಷ್ಟು ಸುಗಂಧವನ್ನೇ ನೀಡುತ್ತದೆ. ಹಾಗೇ ಎಲ್ಲರೂ, ಎಲ್ಲರ ಪ್ರತಿ ಒಳ್ಳೆಯದನ್ನೇ ಬಯಸಬೇಕು. ಎಂದು ಡಾಕ್ಟರೇಟ್ ಪದವಿ ಪುರಸ್ಕೃತರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ||ಲಕ್ಷ್ಮೀಜೀ ಸಲಹೆ ನೀಡಿದರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಹುಣಸೂರು ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದ ಪಕ್ಕದಲ್ಲಿ ಆಯೋಜಿಸಲಾಗಿರುವ ಸೋಮನಾಥ ದರ್ಶನ,ಜ್ಞಾನ ವಿಜ್ಞಾನ ಪ್ರದರ್ಶನ ಮೇಳ.ಹಾಗೂ 90 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ|| ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ ನಿರಾಕಾರ ಶಿವ ಪರಮಾತ್ಮನು ಮಾತ್ರ ಪರಮ ಪವಿತ್ರ. ಅವನು ಎಲ್ಲಾ ಮಾಯೆ ಅಥವಾ ಅಜ್ಞಾನದಿಂದ ಮುಕ್ತನಾಗಿದ್ದಾನೆ ಅದಕ್ಕಾಗಿ ಅವನನ್ನು ಸೋಮನಾಥ ಎಂದು ಕರೆಯುತ್ತಾರೆ ಸೋಮನಾಥ ಎಂದರೆ ಸೋಮರಸವನ್ನು ಕುಡಿಸುವವನು. ಆ ಕಾರ್ಯವನ್ನು ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಪರಮಾತ್ಮನು ನೇರವಾಗಿ ಕುಡಿಸುತ್ತಿದ್ದಾನೆ. ಇದರ ಅರಿವು ನನಗೂ ಸಹ ಇದೆ. ಇದನ್ನು ಸಾರ್ವಜನಿಕರಿಗೆ ಅರಿವು ಮೂಡಿಸುವುದೇ ಈ ಸೋಮನಾಥ ದರ್ಶನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೆ ಆರ್ ನಗರ ಶಾಸಕ ಡಿ. ರವಿಶಂಕರ್ ಮಾತನಾಡಿ ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲ ಒಂದು ರೀತಿಯ ಒತ್ತಡದಲ್ಲಿ ಇದ್ದೇ ಇರುತ್ತಾರೆ. ಅವರಿಗೆ ಒತ್ತಡ ನಿವಾರಣೆ ಮಾಡುವ ನಿಟ್ಟಿನಲ್ಲಿ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಈ ಸಂಸ್ಥೆ ಹಲವಾರು ಜನಸ್ನೇಹಿ, ಸಮಾಜಮುಖಿ, ಸಕರಾತ್ಮಕ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ರಾಜ್ಯ ದೇಶ ವಿದೇಶಗಳಲ್ಲಿ ಶಾಂತಿ, ಸಹಬಾಳ್ವೆಯನ್ನು ಬಿತ್ತುವುದರಲ್ಲಿ ನಿರಂತರವಾಗಿ ಹಗಲಿರುಳು
ಕಾರ್ಯಪ್ರವೃತ್ತವಾಗಿದೆ. ಇಂತಹ ಸಂಸ್ಥೆಗಳ ಜೊತೆ ಕೈಗೂಡಿಸಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು. ಇದೊಂದೇ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ಪ್ರತಿಯೊಬ್ಬರಿಂದ ದಿನದಲ್ಲಿ ಒಂದು ಗಂಟೆ ಸಮಯ ಕೊಡಿ ಎಂದು ಕೇಳುತ್ತದೆ ಎಂದರು.
ಈಶ್ವರೀಯ ವಿಶ್ವವಿದ್ಯಾಲಯದಿಂದ 15 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಎಲ್ಲರೂ ಸಹ ಭಾಗಿಯಾಗಯಾಗಬೇಕು. ಇದೇ ವೇಳೆ ಜೀವಮಾನ ಸಾಧನೆಗಾಗಿ, ಇದೇ ಪ್ರಪ್ರಥಮ ಭಾರಿಗೆ ಸಾಹಿತಿ ಕೆ ಸಿ ಶಿವಬಸಪ್ಪ ಮತ್ತು ಭರತನಾಟ್ಯ ಪಟು ಡಾ||ವಸುಂಧರಾ ದೊರೆಸ್ವಾಮಿ, ಅವರಿಗೆ ಈಶ್ವರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. 22ರ ವರೆಗೆ ನಡೆಯುವ ಮೇಳದಲ್ಲಿ ಶ್ರೀ ಸೋಮನಾಥ ಮಂದಿರದ ಪ್ರತಿಕೃತಿ, ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ,ಗೃಹಸ್ತರು ಸಾಮರಸ್ಯದಿಂದಿರಲೂ ಪ್ರಾಯೋಗಿಕ ಚಿತ್ರ ಪ್ರದರ್ಶನ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮತ್ತು ಗುರು ಸಾಧನೆಯ ಬಗ್ಗೆ ಸಮಾಲೋಚನೆ, ಮೌಲ್ಯಗಳ ಪ್ರಯೋಜನ ವಿವರಿಸುವ ಆಟಗಳು ಮತ್ತು ಧ್ಯಾನ ಶಿಬಿರ ಸೇರಿದಂತೆ ವಿವಿಧಗಳನ್ನು ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಬೆಳಗ್ಗೆ ಎಂಟರಿಂದ ರಾತ್ರಿ 9:00 ವರೆಗೆ ಸಾರ್ವಜನಿಕರಿಗೆ ಉಚಿತ ಮುಕ್ತ ಪ್ರವೇಶ ಇರಲಿದೆ. ಇದರ ಪೂರ್ಣ ಪ್ರಯೋಜನವನ್ನು ಮೈಸೂರಿನ ಸುತ್ತ ಮುತ್ತಿನ ಎಲ್ಲಾ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂ ಸರ್ವಿಸ್ನ ಬ್ರಹ್ಮಾಕುಮಾರ ಆರಾಧ್ಯ,ಹಿರಿಯ ನ್ಯಾಯವಾದಿ ಅಶೋಕ ಹಾರ್ನಳ್ಳಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲ ಸಚಿವ ಡಾಕ್ಟರ್ ಸಿ ಕೆ ಸುಬ್ಬರಾಯ, ಸಂಸ್ಥೆಯ ಪ್ರಾಚಾರ್ಯ ಬಿ.ಕೆ. ರಂಗನಾಥ್ ಗಾಯಕಿ ಅಮೂಲ್ಯ, ರಾಜಯೋಗ ಶಿಕ್ಷಕಿ ರಾಜಗಿನಿ ಬ್ರಹ್ಮಾಕುಮಾರಿ ಶಿವಲೀಲಾಜೀ, ರಾಜಯೋಗಿನಿ ಬ್ರಹ್ಮಾಕುಮಾರಿ ಯೋಗೇಶ್ವರೀಜೀ, ರಾಜಯೋಗ ಶಿಕ್ಷಣ ತಜ್ಞ, ರಾಜ ಋಷಿ ಬ್ರಹ್ಮಾಕುಮಾರ ಪ್ರಾಣೇಶ್, ಬ್ರಹ್ಮಾ ಕುಮಾರ ಮಣಿ ಅಣ್ಣ, ಚಿತ್ರ ಛಾಯಾಗ್ರಹಕ ಕುಮಾರಣ್ಣ ಮುಂತಾದವರು ಹಾಜರಿದ್ದರು

Share This Article
Leave a Comment