ಪಬ್ಲಿಕ್ ಅಲರ್ಟ್
ಮೈಸೂರು: ಬರೋಬ್ಬರಿ ೯೦ ದಿನಗಳ ಮೈಸೂರಿನ ಜನರ ರಂಜಿಸಲಿರುವ ದಸರಾ ವಸ್ತುಪ್ರದರ್ಶನ ಪ್ರಾಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಧೂರಿಯಾಗಿ ಚಾಲನೆ ನೀಡಿದರು. ಇದೇ ವೇಳೆ ಅಜೀಜ್ ಸೇಠ್ ಕಾರಂಜಿ ಹಾಗೂ ಸಿದ್ದರಾಮಯ್ಯ ಅಂಗಳವನ್ನು ಸಹ ಲೋಕಾರ್ಪಣೆಗೊಳಿಸಿದರು.
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐ. ಎನ್.ಎಸ್ ಕದಂಬ ಸೇನಾ ಸಿಬ್ಬಂದಿಗಳು ಬ್ಯಾಂಡ್ ಸೆಟ್ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಿದರು.



ಶಾಸಕ ತನ್ವೀರ್ ಸೇಠ್ ಮಾತನಾಡಿ, 20 ಕೋಟಿ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಕಾರಂಜಿಗೆ ನಮ್ಮ ತಂದೆ ಹೆಸರು ಹಾಗೂ ವ್ಯಾಪಾರ ಮಳಿಗೆಗಳಿಗೆ ಸಿದ್ದರಾಮಯ್ಯ ಹೆಸರು ಇಟ್ಟಿರುವುದಕ್ಕೆ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವೈಯುಕ್ತಿಕವಾಗಿ ಅವರ ಅಜೀಜ್ ಸೇಠ್ ಅವರ ಹೆಸರಿಟ್ಟು ಗುರುಗಳ ಋಣ ತೀರಿಸಿರುವುದನ್ನು ನೋಡಿದರೆ ಹೆಚ್ಚು ಸಂತಸ ತರಿಸಿದೆ ಎಂದು ಹೇಳಿದರು.
ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ನಾನು ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಿಯೇ ಅಜೀಜ್ ಸೇಠ್ ಅವರು ನಮ್ಮೆಲ್ಲರಿಗೂ ಗುರುಗಳಾಗಿದ್ದಾರೆ. ಅವರ ಹೆಸರು ಇಟ್ಟ ಮಾತ್ರಕ್ಕೆ ಅವರ ಋಣ ತೀರಿಸಲು ಸಾಧ್ಯವಾಗುವುದಿಲ್ಲ. ಅವರ ರಾಜಕೀಯ ಹಾದಿ ಪ್ರತಿಯೊಬ್ಬರೂ ಸ್ಮರಿಸಬೇಕು. ಅಂತೆಯೇ ಜನಪರ ಆಡಳಿತ ನೀಡುವ ಸಿದ್ದರಾಮಯ್ಯನವರ ಹೆಸರು ಜನರಿಗೆ ತಿಳಿಯಬೇಕೆಂಬ ದೃಷ್ಠಿಯಿಂದ ಅವರಿಬ್ಬರ ಹೆಸರು ನಾಮಕರಣ ಮಾಡಿದ್ದೇನೆ. ಈ ಬಾರಿ ಮೊದಲ ದಿನದಿಂದಲೇ ವಸ್ತುಪ್ರದರ್ಶನ ತನ್ನ ಕಾರ್ಯಾರಂಭಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಕೆ.ವೆಂಕಟೇಶ್ ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ಶ್ರೀವತ್ಸ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ ಇನ್ನಿತರರು ಇದ್ದರು.
