ಪಬ್ಲಿಕ್ ಅಲರ್ಟ್
ಮೈಸೂರು : ಸಮಾಜದ ಅತ್ಯಂತ ಮೌಲ್ಯಯುತ ಮತ್ತು ಮಾನವೀಯ ಸೇವೆಗೆ ಸಮರ್ಪಿತವಾದುದು ವೈದ್ಯಕೀಯ ವೃತ್ತಿ, ಈ ವೃತ್ತಿಯಲ್ಲಿ ನಿರತರಾದ ವೈದ್ಯರಿಗೆ ಮಾನವೀಯತೆ, ಸಮರ್ಪಣಾ ಮನೋಭಾವ ಮತ್ತು ತಾಳ್ಮೆ ಅತ್ಯಗತ್ಯ ಎಂದು ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಪ್ರೊ.ಕೆ.ಸಿ.ಶಶಿಧರ ಹೇಳಿದರು.
ನಗರದ ಫರೂಖಿಯಾ ಡೆಂಟಲ್ ಕಾಲೇಜಿನಲ್ಲಿ ಸೋಮವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇಂದು ಪದವಿ ಪಡೆದು ವೈದ್ಯಕೀಯ ಸೇವೆ ನಡೆಸಲು ಅರ್ಹತೆ ಪಡೆದಿರುವ ಎಲ್ಲ ನೂತನ ವೈದ್ಯರು ಯಾವುದೇ ಸಂದರ್ಭದಲ್ಲಿ, ಎಲ್ಲ ಸಮಯಗಳಲ್ಲಿ, ತಮ್ಮ ಜೀವದ ಅಪಾಯವನ್ನು ಪರಿಗಣಿಸದೆ ರೋಗಿಗಳ ಸೇವೆಗೆ ತಮ್ಮನ್ನು ಒಪ್ಪಿಸಿಕೊಂಡು ತಮ್ಮ ಹಾಗೂ ತಮ್ಮ ಕುಟುಂಬದ ವಿಶ್ರಾಂತಿಯ ಹಕ್ಕನ್ನು ಬಿಡುತ್ತಾರೆ.
ರೋಗಿಗಳ ಆರೋಗ್ಯ ಕಾಪಾಡುವುದು, ಅವರ ಮನೋಬಲವನ್ನು ಹೆಚ್ಚಿಸುವುದು, ರೋಗಿಗೆ ಭರವಸೆ ನೀಡುವುದು, ಕೆಲವು ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದು ಸಹ ವೈದ್ಯರ ಕರ್ತವ್ಯವಾಗಿದೆ ಎಂದರು.
ದಿನದ ೨೪ ಗಂಟೆಗಳೂ ಜವಾಬ್ದಾರಿಯಿಂದ ದುಡಿಯುವುದು, ಕೆಲವು ಸಂದರ್ಭಗಳಲ್ಲಿ ಒತ್ತಡವನ್ನು ಎದುರಿಸಬೇಕಾದ ಸಂದರ್ಭವನ್ನೂ ಸಹ ವೈದ್ಯರು ಎದುರಿಸಿಬೇಕಾಗುತ್ತದೆ. ಇದಕ್ಕಾಗಿ ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಬೇಕಾಗುತ್ತದೆ ಎಂದರು.
ಆರೋಗ್ಯ ಸೇವೆ ಮಾತ್ರವಲ್ಲ, ಮಾನವೀಯ ಮೌಲ್ಯಗಳನ್ನು ಕಾಯುವುದು, ಎಲ್ಲರಿಗಾಗಿ ಸಮಾನವಾಗಿ ಸೇವೆ ಒದಗಿಸುವುದು ಸಹ ವೈದ್ಯರ ಶ್ರೇಷ್ಠ ಕಾರ್ಯವಾಗಿದೆ, ಈ ರೀತಿ ವೈದ್ಯರ ಕರ್ತವ್ಯವು ಮಾನವೀಯ ಸೇವೆ, ತ್ಯಾಗ, ನಿಷ್ಠೆ ಮತ್ತು ಸಮರ್ಪಣೆಯ ಸಂಕೇತವಾಗಿದೆ. ಪ್ರತಿಯೊಬ್ಬ ವೈದ್ಯರ ಪ್ರಯತ್ನದಿಂದ ಸಮಾಜದಲ್ಲಿ ಸುಸ್ಥಿರ ಆರೋಗ್ಯವನ್ನು ಕಾಪಾಡಬಹುದು ಎಂದು ಹೇಳಿದರು.
ಸಮಾರಂಭದಲ್ಲಿ ೧೧ ಜನ ವಿದ್ದಯಾರ್ಥಿಗಳಿಗೆ ಬಿಡಿಎಸ್ ಪದವಿ ಪ್ರದಾನ ಮಾಡಲಾಯಿತು. ಅಲ್ಲದೇ ಅಪ್ರತಿಮ ವೈದ್ಯಕೀಯ ಸೇವೆ ಸಲ್ಲಿಸಿದ ಡಾ.ಜೆ.ಹೆಚ್.ಷರೀಫ್, ಡಾ.ಜಿ.ಡಿ.ರವಿ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜತೆಗೆ ಸಿಂಪ್ಲಿಫೈಂಡ್ ಇಂಪ್ಲಾಂಟ್ ಪ್ರೋಗ್ರಾಂ(ಡಿಜಿಟಲ್)ನಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಧಾರವಾಡದ ಎಸ್ಡಿಎಂ ಕಾಲೇಜಿನ ಪ್ರೊ.ಡಾ.ಸತ್ಯಬೋಧ್ ಎಸ್.ಗುತ್ತಲ್, ಧಾರವಾಡ ಎಸ್ಡಿಎಂ ಕಾಲೇಜಿನ ಡಾ.ಅಕ್ಷಯ್ ಎಸ್.ಬ್ಯಾಡಗಿ, ಡೀನ್ ಮತ್ತು ಡೈರೆಕ್ಟರ್ ಡಾ.ಹೆಚ್.ಪಿ.ಶ್ರೀನಾಥ್, ಪ್ರಾಂಶುಪಾಲರಾದ ಡಾ.ಸಂಜಯ್ ಮುರುಗೋಡ್, ಕಾಲೇಜಿನ ಪಿಆರ್ಒ ಡಾ.ರದಿಯುಲ್ಲಾ ಖಾನ್ ಇತರರು ಇದ್ದರು.
ಕೋಟ್
ಹಲವು ಗೆಳೆಯರು, ಹಿತೈಷಿಗಳ ಸಹಕಾರದಿಂದ ೩ ವರ್ಷದ ಹಿಂದೆ ಫಾರೂಖಿಯಾ ಡೆಂಟಲ್ ಕಾಲೇಜಿನ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ. ಪೋಷಕರ ಸಮ್ಮುಖದಲ್ಲಿ ಇಂದು ಪದವಿ ಪಡೆದ ನೂತನ ವೈದ್ಯರು ಭಾವನಾತ್ಮಕ ಕ್ಷಣಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳ ಪೋಷಕರು ಅವರಿಗೆ ಅಗತ್ಯ ಸಹಕಾರ ನೀಡಬೇಕು.
– ಡಾ.ಹೆಚ್.ಪಿ.ಶ್ರೀನಾಥ್, ಡೀನ್, ಫಾರೂಖಿಯಾ ಡೆಂಟಲ್ ಕಾಲೇಜು
’ವೈದ್ಯರ ವೃತ್ತಿಯು ತ್ಯಾಗ, ನಿಷ್ಠೆ, ಸಮರ್ಪಣೆಯ ಸಂಕೇತ’
Leave a Comment
Leave a Comment
