ಪಬ್ಲಿಕ್ ಅಲರ್ಟ್
ಮೈಸೂರು:ವೀಣಾ ಶಾರದಾ ಇವೆಂಟ್ಸ್ ವತಿಯಿಂದ ಡಾ.ವಿಷ್ಣುವರ್ಧನ್ ಗಾನ ವೃಂದದ ಆಶ್ರಯದಲ್ಲಿ ಅ.೨೭ರ ಸಂಜೆ ೪ಕ್ಕೆ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಡಾ. ವಿಷ್ಣುವರ್ಧನ್ ಗಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂz ÀÄ ಸಂಸ್ಥೆ ಮುಖ್ಯಸ್ಥರಾದ ವೀಣಾ ಸುರೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸೆ.೧೮ರಂದೇ ವಿಷ್ಣು ವರ್ಧನ್ ಹುಟ್ಟುಹಬ್ಬವಿತ್ತು. ಆದರೆ ಆ ವೇಳೆ ಸಭಾಂಗಣ ದೊರೆಯದ ಕಾರಣ ಹಾಗೂ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ಅ.೨೭ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಕರೋಕೆ ಕಾರ್ಯಕ್ರಮವಾಗಿದ್ದು, ಒಟ್ಟು ೪೦ ಹಾಡುಗಳನ್ನು ಹಾಡಲಾಗುವುದು. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು. ರುಕ್ಮಿಣಿ ಶ್ರೀನಿವಾಸ್, ಕುಮಾರಸ್ವಾಮಿ, ಶಾಂತಕುಮಾರ್, ಸುರೇಶ್ ಹಾಜರಿದ್ದರು.
