ಪಬ್ಲಿಕ್ ಅಲರ್ಟ್
ಮೈಸೂರು: ಅ. ೨೬ ರ ಸಂಜೆ ೫ಕ್ಕೆ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಮೂನ್‌ಲೈಟ್ ಎಂಟಟೈರ‍್ಸ್ ವತಿಯಿಂದ ಆನಂದ್ ಶೆಟ್ಟಿ ರಾಗ ಕ್ರಿಯೇಷನ್ಸ್ ಆಶ್ರಯದಲ್ಲಿ ಡಾ.ವಿಷ್ಣುವರ್ಧನ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂನ್‌ಲೈಟ್ ಸಂಸ್ಥೆಯ ಸ್ಟಾö??ನ್ಲಿ ಪಾರ್ಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಾಜ್ಯ ಸರ್ಕಾರ ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತನ ಪ್ರಶಸ್ತಿ ನೀಡುವುದಾಗಿ ಘೋಷಿಸಿರುವುದು ವಿಷ್ಣು ಅಭಿಮಾನಿಗಳು ಹಾಗೂ ಇನ್ನಿತರರಿಗೆ ಸಂತಸ ತಂದಿದೆ. ತಮ್ಮ ಸಂಸ್ಥೆ ಸಹಾ ಪ್ರತಿ ವರ್ಷ ವಿಷ್ಣುವರ್ಧನ್ ನೆನಪಿನಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ ಎಂದರು.
ಅ. ೨೬ ರ ಕಾರ್ಯಕ್ರಮದಲ್ಲಿ ಡಾ. ವಿಷ್ಣುವರ್ಧನ್ ಅವರ ಚಿತ್ರಗಳ ಸುಮಾರು ೪೦ ಗೀತೆಗಳನ್ನು ಕರೊಕೆ ನೆರವಿನಿಂದ ಹಾಡಲಾಗುವುದು. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು.
ಸ್ಟಾನಿ ಮರ್ಸರ್, ಆನಂದ್‌ಶೆಟ್ಟಿ, ರಶ್ಮಿ ನಾರಾಯಣ್ ಇದ್ದರು.
