ಪಬ್ಲಿಕ್ ಅಲರ್ಟ್
ಮೈಸೂರು: ರಾಜ್ಯದಲ್ಲಿ ಇಖಾತಾ ವಿತರಣಾ ಅಭಿಯಾನ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ಈವರೆಗೆ ಬರೋಬ್ಬರಿ ೬೦ಸಾವಿರ ಇಖಾತೆಗಳನ್ನು ವಿತರಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ರಾಜ್ಯ ಸರ್ಕಾರ ಜನರಿಗೆ ಖಾತೆ ವಿತರಣೆಯ ಗ್ಯಾರಂಟಿ ನೀಡುವ ಉದ್ದೇಶದಿಂದ ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಇಖಾತಾ ವಿತರಣೆಗೆ ಕ್ರಮ ಕೈಗೊಂಡಿದ್ದರು. ಇದಕ್ಕಾಗಿ ಬೃಹತ್ ಅಭಿಯಾನದ ರೂಪದಲ್ಲಿ ಕಡತ ವಿಲೇವಾರಿಗೆ ಅಭಿಯಾನ ಸಹ ಕೈಗೊಂಡು ಸ್ವತಃ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಇದಾದ ಬಳಿಕ ಮೈಸೂರಿನಲ್ಲೂ ಶಾಸಕರಾದ ಕೆ.ಹರೀಶ್ ಗೌಡ, ಶ್ರೀವತ್ಸ, ತನ್ವೀರ್ ಸೇಠ್ ಅವರು ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈವರೆಗೆ ಬರೋಬ್ಬರಿ ೬೦ಸಾವಿರ ಇಖಾತಾ ವಿತರಣೆ ಮಾಡಿರುವ ಬಗ್ಗೆ ಪಾಲಿಕೆ ತಿಳಿಸಿದೆ.
ಒಟ್ಟಾರೆ ರಾಜ್ಯದಲ್ಲಿ ಮೈಸೂರಿನಲ್ಲಿ ೬೦೧೧೦, ಬೆಳಗಾವಿಯಲ್ಲಿ ೫೪೬೯೩, ಬಿಜಾಪುರದಲ್ಲಿ ೪೭೯೮೭, ಬೆಂಗಳೂರಿನಲ್ಲಿ ೪೬೮೨೯, ತುಮಕೂರು ೪೩೭೭೮ ಕ್ರಮವಾಗಿ ವಿತರಿಸಿದ್ದಾರೆ. ಆ ಮೂಲಕ ರಾಜಧಾನಿ ಬೆಂಗಳೂರಿಗಿಂತಲೂ ಹೆಚ್ಚಿನ ಇಖಾತಾಯನ್ನು ಮಾಡಿರುವ ಹಿರಿಮೆ ಮೈಸೂರಿನದ್ದಾಗಿದೆ.
