ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳು- ಮಧು ಜಿ.ಬಂಗಾರಪ್ಪ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತನ್ನು ನೀಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದು, ಮಾನವೀಯತೆಯನ್ನು ಮೆರೆಯುವಲ್ಲಿ ಮೊದಲು ಯಾರಾದರೂ ಗುರುಗಳು ಇದ್ದಾರೆ ಎಂದರೆ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾತ್ರ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತೋತ್ಸವ ಸಮಿತಿಯ ಸಹಯೋಗದೊಂದಿಗೆ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ 171 ವರ್ಷದ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಸಾಮಾಜಿಕ ಕಳಕಳಿಯನ್ನು ಹೆಚ್ಚು ಹೊಂದಿದ್ದರು. ಕೇರಳದಲ್ಲಿ ಸಾಕ್ಷರತೆ 99% ಪ್ರಗತಿ ಸಾಧಿಸಿದೆ ಎಂದರೆ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ. ದೇವಸ್ಥಾನಗಳನ್ನು ಹೆಚ್ಚು ಕಟ್ಟಬೇಡಿ, ಶಾಲೆಗಳನ್ನು ಹೆಚ್ಚು ಕಟ್ಟಿ ಎಂದು ಹೇಳಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ರಾಜ್ಯಕ್ಕೆ ಬೌಂಡರಿ ಇರುತ್ತದೆ ಆದರೆ ವಿದ್ಯಾಭ್ಯಾಸಕ್ಕೆ ಯಾವುದೇ ಬೌಂಡರಿ ಇರುವುದಿಲ್ಲ. ನಮ್ಮ ಸಮಾಜದವರು ಯಾವಾಗಲೂ ಒಗ್ಗಟ್ಟಿನಿಂದ ಇರಬೇಕು. ಸಮಾಜದ ಜೊತೆಗೆ ನಾನು ಎಂದೆoದಿಗೂ ಇರುತ್ತೇನೆ ಎಲ್ಲಿಯವರೆಗೆ ನನ್ನ ಸ್ಥಾನದಲ್ಲಿ ನಾನು ಇರುತ್ತೇನೆ ಅಲ್ಲಿಯವರೆಗೆ ಪ್ರಾಮಾಣಿಕವಾಗಿ ನನ್ನ ಕೆಲಸ ಏನಿದೆ ಅದನ್ನು ನಾನು ಮಾಡುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್ ನ ಸದಸ್ಯರಾದ ಡಾ.ಡಿ.ತಿಮ್ಮಯ್ಯ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರು ಅವರು ಕೇರಳ ರಾಜ್ಯವನ್ನು ಸವಾಲನ್ನಾಗಿ ತೆಗೆದುಕೊಂಡು ಉತ್ತಮ ಸಮಾಜವನ್ನು ಕಟ್ಟಿರುವುದು ಬಹಳ ರೋಮಾಂಚನವಾದದ್ದು, ಸಮಾಜದ ತಾರತಮ್ಯವನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿ ಇಟ್ಟವರು ಬ್ರಹ್ಮಶ್ರೀ ನಾರಾಯಣ ಗುರು. ಕರ್ನಾಟಕದಲ್ಲಿ ಹೇಗೆ ಬಸವಣ್ಣನವರು ಹುಟ್ಟಿದ್ದರೂ ಹಾಗೆಯೇ ಕೇರಳದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ್ದಾರೆ. ದೇವರು ಒಬ್ಬನೇ. ಭಕ್ತಿ ಮತ್ತು ಮನುಷ್ಯನ ನಡುವೆ ಯಾವುದೇ ಬೇಧ ಇರುವುದಿಲ್ಲ. ಶಿಕ್ಷಣ, ರಾಜಕೀಯ ಧಾರ್ಮಿಕ ಯಾವುದೇ ಕ್ಷೇತ್ರದಲ್ಲಾದರೂ ಸರಿಯೇ ಕಷ್ಟಪಟ್ಟು ದುಡಿಯಬೇಕು, ಶ್ರಮ ವಹಿಸಬೇಕು ಎಂದು ಹೇಳಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ ನಮಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ನಮಗೆ ಕೊಟ್ಟಿರುವಂತಹ ಕೊಡುಗೆಗಳು ಸ್ಮರಣೀಯವಾದದ್ದು, ಅವರು ನಡೆದುಬಂದ ಆದಿಯಲ್ಲಿ ನಾವು ನಡೆದುಕೊಂಡು ಬರಬೇಕು. ನಮ್ಮ ಸಮಾಜದಲ್ಲಿ ಒಗ್ಗಟ್ಟು ಎನ್ನುವುದು ಬಹಳ ಮುಖ್ಯ ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು ಎಂದರು ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರು ಮಿಷನ್ ಚಾರಿಟೆಬಲ್ ಟ್ರಸ್ಟ್ ನ ಕಾರ್ಯದರ್ಶಿ ಕೆ.ಜೆ.ಮನೋಜ್ ಕುಮಾರ್ ಮಾತನಾಡಿದರು. ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶಿವಮೊಗ್ಗ ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ರೇಣುಕಾನಂದಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ಕೆ.ಪೋತರಾಜ್, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪಿ.ದೇವರಾಜ್, ಮೈಸೂರು ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷ ಸರೋಜಮ್ಮ ಪಾಪೇಗೌಡ, ಎಸ್.ಎನ್.ಡಿ.ಪಿ. ಅಧ್ಯಕ್ಷ ರಾಜೇಂದ್ರ, ಹುಣಸೂರು ಆರ್ಯ ಈಡಿಗರ ಸಂಘದ ಅಧ್ಯಕ್ಷ ಹೆಚ್.ಎಂ.ವಿಶ್ವನಾಥ್, ನಂಜನಗೂಡು ಆರ್ಯ ಈಡಿಗರ ಸಂಘದ ಅಧ್ಯಕ್ಷ ಟಿ.ಗಿರೀಶ್, ಚಾಮರಾಜನಗರ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment