ಪಬ್ಲಿಕ್ ಅಲರ್ಟ್
ಮೈಸೂರು: ಭೀಮ ಬಲ ಬಳಗ ಹಾಗೂ ಮೈಸೂರು ವಿವಿ ಸಂಶೋಧಕರ ಸಂಘದ ಸಂಯುಕ್ತಾಶ್ರಯದಲ್ಲಿ ಸೆ.೨೦ ರ ಬೆಳಗ್ಗೆ ೧೦.೩೦ಕೆಕ ವಿವಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಮೀಸಲಾತಿ ಮುನ್ನೋಟ ಕುರಿತ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ಮುಖಂಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಮಾಜಿ ಸಚಿವ ಎನ್. ಮಹೇಶ್ ವಿಷಯ ಪ್ರಸ್ತುತ ಪಡಿಸುವರು, ಮಾಜಿ ಶಾಸಕ ಎಂ. ಅಶ್ವಿನ್‌ಕುಮಾರ್ ಉದ್ಘಾಟಿಸುವರು. ಅಧ್ಯಕ್ಷತೆ ಶಾಸಕ ಬಿ. ಶಿವಣ್ಣ ವಹಿಸುವರು, ಮೀಸಲಾತಿ ವಿಸ್ತಾರ ಕುರಿತು ಡಾ. ನವೀನ್ ಮನಿಯ ಮಾತನಾಡುವರು. ಎಂ. ಮಹದೇವಯ್ಯ, ಎಚ್.ಎಸ್. ಗಣೇಶ್‌ಮೂರ್ತಿ, ವರಹಳ್ಳಿ ಆನಂದ, ವೇದಾವತಿ, ಡಾ. ಅಶ್ವಿನ್ ಭರ್, ಸಾಮ್ರಾಟ್ ಸುಂದರೇಶನ್, ಕಾರ್ತಿಕ್ ಇನ್ನಿತರರು ವೇದಿಕೆಯಲ್ಲಿರುವರೆಂದರು. ಸರ್ಕಾರ ಒಳ ಮೀಸಲಾತಿ ಪ್ರಕಟಿಸಿದೆ. ಆದರೆ ಇದರಿಂದ ಮುಂದೆ ಎದುರಾಗಬಹುದಾದ ಸವಾಲು, ಅಡೆ ತಡೆ ಏನು, ಬಡ್ತಿ ಮೀಸಲು ಹೇಗೆ, ರೋಸ್ಟರ್ ಪದ್ಧತಿ ಮೊದಲಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗುವುದೆಂದರು. ಸಂಚಾಲಕ ಪರಮಾನಂದ್, ಡಾ. ನಟರಾಜ್ ಶಿವಣ್ಣ, ಪಲ್ಲವಿಬೇಗಂ, ಡಾ.ಹೂವಿನ ಸಿದ್ದು ಇನ್ನಿತರರು ಇದ್ದರು.
