ಪಬ್ಲಿಕ್ ಅಲರ್ಟ್

ಹೊಸಕೋಟೆ: ಹೊಸಕೋಟೆ ನಗರದಾದ್ಯಂತ ಭರ್ಜರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಯಿತು.
ನಗರಷ ಕೆ.ಆರ್ ರಸ್ತೆಯಲ್ಲಿರುವ ಪಂಚಮುಖಿ ಗಣೇಶ ದೇವಾಸ್ಥಾನದಲ್ಲಿ ಗಣೇಶ ಮೂರ್ತಿಗೆ ಹಬ್ಬದ ಪ್ರಯುಕ್ತ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ನಗರದ ಮಾರ್ಕೇಟ್ ರಸ್ತೆಯಲ್ಲಿರುವ ಸಿದ್ಧಿ ವಿನಾಯಕನಿಗೆ ಬೆಳ್ಳಿ ಆಭರಣ ತೊಟ್ಟು ವಿಶೇಷ ಹೂವ್ವಿನ ಅಲಂಕಾರ ಮಾಡಲಾಗಿತ್ತು.

ಹೊಸಕೋಟೆ ತಾಲ್ಲೂಕು ಕಸಬಾ ಹೋಬಳಿಯ ಕುರುಬರಹಳ್ಳಿ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗದಿಂದ ೧೦೮ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಹೊಸಕೋಟೆ ನಗರದಲ್ಲಿರುವ ಲಕ್ಷ್ಮಿ ಮತ್ತು ಸರಸ್ಪತಿ ದೇವಿಯರಿಗೆ ಗಣೇಶ ಚತುರ್ಥಿ ಅಂಗವಾಗಿ ಕುಂಕುಮ ಅಲಂಕಾರ ಮಾಡಲಾಗಿತ್ತು.
ಹೊಸಕೋಟೆ ನಗರದಲ್ಲಿ ಇಂದು ಗಣೇಶ ಹಬ್ಬವನ್ನು ಹಲವಾರು ಕಡೆ ಆಚರಣೆ ಮಾಡುತ್ತಿದ್ದು ಇಂದಿನಿಂದ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲು ನಗರಸಭೆ ವತಿಯಿಂದ ಚಿಕ್ಕ ಕೆರೆಯ ಡೋಬಿ ಗಾಟಲ್ಲಿ ಇರುವ ಕಲ್ಯಾಣಿಯನ್ನು ಸ್ವಚ್ಚಗೊಳಿಸಿ ರಾತ್ರಿಯ ಹೊತ್ತಲ್ಲಿ ವಿಸರ್ಜಿಸುವುದರಿಂದ ಲೈಟಿಂಗ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನು ಕಲ್ಯಾಣಿಯಲ್ಲಿ ಕಳೆದ ವರ್ಷ ವಿಸರ್ಜಿಸಲಾದ ಗಣಪನ ಮೂರ್ತಿ ಸ್ವಚ್ಚ ಮಾಡಿ ಹಳೆಯ ನೀರನ್ನು ಹೊರಗೆ ತೆಗದು ಬೋರ್ ವೇಲ್ ನಿಂದ ಹೋಸ ನೀರನ್ನು ತುಂಬಿಸಿ ಕಲ್ಯಾಣಿ ಸುತ್ತಲು ಮರಗಳನ್ನು ತಡೆಗೋಡೆಯಂತೆ ನಿರ್ಮಿಸಿದ್ದು ನೀರು ಶುದ್ಧಿಕರಣಕ್ಕೆ ೧೦ ಮೂಟೆ ಸುಣ್ಣವನ್ನು ಕಲ್ಯಾಣಿಯಲ್ಲಿ ಸುರಿಯಲಾಗಿದೆ. ವಿಷಪೂರಿತ ಬಣ್ಣಗಳಿಂದ ಲೇಪನ ಗಣಪಗಳು ನೀರಿನ ಮಾಲಿನ್ಯವಾಗಿ ಕೆರೆಗಳಲ್ಲಿ ಸೂಕ್ಷ್ಮ ಜೀವಿಗಳಿಗೆ ವಿಘ್ನ ತರುತ್ತವೆ. ಆದುದರಿಂದ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ. ಗಣೇಶ ವಿಗ್ರವನ್ನು ಜೇಡಿ ಮಣ್ಣನಿಂದ ಇರುವ ಮೂರ್ತಿಗಳನ್ನು ವಿಸರ್ಜಿಸಬೇಕು ಪ್ಲಾಸ್ಟೀಕ್, ಬೇಡ ಅದರ ಬದಲಿಗೆ ಸ್ಟೀಲ್ ತಟ್ಟೆ,ಲೋಟಗಳನ್ನು ಮಾವಿನ ಸೋಪ್ಪು,ಬಾಳೆಕಂದು ಮಾತ್ರ ಉಪಯೋಗಿಸಿ ಎಂದು ನಗರಸಭೆ ಅಧ್ಯಕ್ಷ ಆಶಾ ರಾಜಶೇಖರ್,ಉಪಾಧ್ಯಕ್ಷ ನವೀನ್,ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು ಮತ್ತು ಪೌರಾಯುಕ್ತ ನೀಲಾಲೋಚನಪ್ರಭು ಸಾರ್ವಜನಿಕರಿಗೆ ಕರೆ ನೀಡಿದರು.