ಮೈಸೂರಿನೆಲ್ಲೆಡೆ ಸಂಭ್ರಮದ ಗಣೇಶೋತ್ಸವ 

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಾದ್ಯಂತ ಸಂಭ್ರಮದ ಗಣೇಶೋತ್ಸವವನ್ನು ಆಚರಿಸಲಾಯಿತು. ಪ್ರಮುಖವಾಗಿ ಕನ್ನೇಗೌಡನ ಕೊಪ್ಪಲಲ್ಲಿ ಕನ್ನೇಗೌಡ ಟೈಗರ್ಸ್‌, ರಾಮಸ್ವಾಮಿ ವೃತ್ತದ ಸಮೀಪ ಅಥರ್ವಬಾಯ್ಸ್‌  ಬೃಹತ್‌ ಗಣಪತಿ ಮೂರ್ತಿ ಸ್ಥಾಪಿಸಿ ಗಮನ ಸೆಳೆದರು.
ಹೌದು ನಗರದ ಬೀದಿ ಬೀದಿಗಳಲ್ಲಿ ಗಣೇಶನ ಮೂರ್ತಿ ಸ್ಥಾಪಿಸಿ ಸಂಭ್ರಮಿಸುವುದು ಒಂದೆಡೆಯಾದರೆ, ಮೈಸೂರಿನ ಅಗ್ರಹಾರದಲ್ಲಿ ೧೦೧ ಗಣಪತಿ ದೇವಾಲಯದಲ್ಲಿ ಬೆಳ್ಳಿಗ್ಗೆಯಿಂದ ಸಂಜೆವರೆಗೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಸಂಭ್ರಮಿಸಿದರು. ಕನ್ನೇಗೌಡನಕೊಪ್ಪಲಿನಲ್ಲಿ ಕನ್ನೇಗೌಡ ಟೈಗರ್ಸ್‌ನಿಂದ ೨೦ ಅಡಿ ಎತ್ತರ ೧೫ ಅಡಿ ಅಗಲದ ಬೃಹತ್‌ ಗಣೇಶಮೂರ್ತಿ ಸ್ಥಾಪಿಸಿ ಗಮನ ಸೆಳೆದರು. ಅಂತೆಯೇ ರಾಮಸ್ವಾಮಿ ವೃತ್ತದಲ್ಲಿ ಅಥರ್ವ ಬಾಯ್ಸ್‌ ತಂಡ ೨೦ ಅಡಿ ಅಗಲ, ೨೦ ಅಡಿ ಎತ್ತರ ಗಣೇಶ ವಿಗ್ರಹ ತಂದು ಸ್ಥಾಪಿಸಿ ಎಲ್ಲರ ಮನಸ್ಸು ಗೆದ್ದರು. 

Share This Article
Leave a Comment