ಜಿಎಸ್ ಟಿ ಇಳಿಸಿದ ಕೇಂದ್ರ: ಮೈಸೂರಲ್ಲಿ ಸಂಭ್ರಮ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಪ್ರಧಾನಿ ನರೇಂದ್ರ ಮೋದಿ  “ಐತಿಹಾಸಿಕ ತೆರಿಗೆ ಇಳಿಕೆ ” ನಿರ್ಧಾರವನ್ನು ಕೈಗೊಂಡಿದ್ದರ ಹಿನ್ನೆಲೆಯಲ್ಲಿ ಮೈಸೂರು ನಗರ ಬಿಜೆಪಿವತಿಯಿಂದ ಸಂಭ್ರಮಿಸಲಾಯಿತು.
ನಗರ ಅಧ್ಯಕ್ಷ ಎಲ್.ನಾಗೇಂದ್ರರವರ ನೇತೃತ್ವದಲ್ಲಿ ಶಿವರಾಮಪೇಠೆಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಎಸ್ ಟಿ ವ್ಯಾಪ್ತಿಗೆ ಬರುವ ಎಲ್ಲ ವ್ಯಾಪಾರಿಗಳಿಗೆ, ವಾಣಿಜ್ಯೋಧ್ಯಮಿಗಳಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಹಿರಿಯರಾದ ಸಂದೇಶ್ ಸ್ವಾಮಣ್ಣ, ಬಿ.ಎಂ.ರಘು, ನಗರಪಾಲಿಕೆ ಮಾಜಿ ಸದಸ್ಯರಾದ ಗುರುವಿನಾಯಕ, ಚಿಕ್ಕವೆಂಕಟು, ಸುಬ್ಬಯ್ಯ, ಎಸ್.ಟಿ.ಮೋರ್ಚಾ ಅದ್ಯಕ್ಷ  ಪಡುವಾರಹಳ್ಳಿಯ ಎಂ.ರಾಮಕೃಷ್ಣ, ಚಾಮರಾಜ ಅದ್ಯಕ್ಷ ದಿನೇಶ್ ಗೌಡ, ಪುನಿತ್ ಗೌಡ, ಮಹೇಶ್, ಅನಿಲ್, ಕೇಬಲ್ ವೆಂಕಟೇಶ, ಗೋಕುಲ್ ಗೋವರ್ದನ್, ದೇವರಾಜಣ್ಣ
ಹೇಮಾ ನಂದೀಶ್, ಎಸ್.ಸಿ.ಮೋರ್ಚಾದ ಸ್ವಾಮಿ ಹರೀಶ್, ಕಾರ್ತಿಕ್ ಮರಿಯಪ್ಪ,ಉಪೇಂದ್ರ, ಸ್ಮಾರ್ಟ್ ಮಂಜು,ಆಶೋಕ್ ಜಯಣ್ಣ,ಪಂಕಜ್, ಪೇಪರ್ ಪ್ರಕಾಶ್ ಇನ್ನಿತರರು ಪ್ರಮುಖರಿದ್ದರು

Share This Article
Leave a Comment