ಪಬ್ಲಿಕ್ ಅಲರ್ಟ್
ಮೈಸೂರು: ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ನೆಲೆ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದ ಬಂಧುಗಳಿಗೆ ಎಸ್. ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಹಾಗೂ ಕಂಚಿನ ಕಂಠ ನಾಯಕ ನಟ ವಸಿಷ್ಠ ಸಿಂಹ ಅಭಿಮಾನಿ ಬಳಗದ ವತಿಯಿಂದ ನಟ ವಸಿಷ್ಟ ಸಿಂಹನ ಹುಟ್ಟುಹಬ್ಬ ಆಚರಣೆಯನ್ನು ಲೇಖನಿ ಸಾಮಗ್ರಿ, ಹಣ್ಣು ಹಂಪಲು, ಮಣ್ಣಿನ ದೀಪವನ್ನು ನೀಡಿ ಶುಭ ಹಾರೈಸುವ ಮೂಲಕ ನಟ ವಸಿಷ್ಟ ಸಿಂಹ ಜನ್ಮದಿನವನ್ನು ವಿಶೇಷವಾಗಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ ಹೋಮದೇವ್, ಕೆಆರ್ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಬೈರತಿ ಲಿಂಗರಾಜು, ನಗರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಕೊಳಸಂದಿ ಕುಮಾರ್,ಹಿರಿಯ ಕ್ರೀಡಾಪಟು ಮಹದೇವ್, ನಿಲಯ ಪಾಲಕಿ ರೇವತಿ,ಛಾಯಾ, ಗಾಯಕ ಯಶವಂತ್ ಕುಮಾರ್, ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ಅಶ್ರೀತ್ ವಸಿಷ್ಠ,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ವಸಿಷ್ಠ ಸಿಂಹ ಅಭಿಮಾನಿಗಳಾದ ಚೆಲುವ,ವಿಮಲ್, ನಿತಿನ್, ಅಶ್ರೀತ್ ಆಶಿಶ್, ಪ್ರಶಾಂತ್ ಇನ್ನಿತರರು ಇದ್ದರು.
ದೀಪ, ಲೇಖನಿ, ಹಣ್ಣು ವಿತರಿಸಿ ನಟ ವಸಿಷ್ಠ ಸಿಂಹ ಹುಟ್ಟು ಹಬ್ಬ ಆಚರಣೆ
Leave a Comment
Leave a Comment
